ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದೊಡೆಂತಯ್ಯ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೆರೆ ತೆರೆಗಳಿಗಂಜಿದೊಡೆಂತಯ್ಯ
ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿ ನಿಂದೆಗಳು
ಬಂದಡೆ ಮನದಲ್ಲಿ ಕೋಪವ ತಾಳದೆ
ಸಮಾಧಾನಿಯಾಗಿರಬೇಕು ಚೆನ್ನಮಲ್ಲಿಕಾರ್ಜುನ
-ಅಕ್ಕ ಮಹಾದೇವಿ
ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ಕ್ರೂರ ಕಾಡ ಶಾಸನಗಳೇ ನಾಡ ಶಾಸನಗಳಾಗಿದ್ದವು. ರಾಜರುಗಳು ತಮ್ಮ ಪ್ರಭುತ್ವ ಮರೆಯುತ್ತಿದ್ದ ಕಾಲ ಅದು. ಧರ್ಮ, ದೇವರ ಹೆಸರಿನಲ್ಲಿ ನಡೆಯಬಾರದ ಕೆಲಸಗಳು ನಡೆಯುತ್ತಿದ್ದವು. ವಿದ್ಯೆ ಕೆಲವರ ಸೊತ್ತಾಗಿತ್ತು. ತಿಳಿಯದವರು ತಿಳಿಯದವರಿಗೆ ತಿಳಿಯದಂತೆ ಹೇಳುವುದೇ ಆಗಿನ ಪಾಂಡಿತ್ಯದ ವಿಧಾನವಾಗಿತ್ತು. ಸಂಸ್ಕೃತ ಭಾಷೆಗೆ ಅಗ್ರ ಪಟ್ಟವಿತ್ತು. ಜ್ಞಾನಿಗಳು, ಪಂಡಿತರು ಇದ್ದರು. ಹುಟ್ಟಿನಿಂದ ಮಾತ್ರ ಮನುಷ್ಯನ ಶ್ರೇಷ್ಠತೆಯನ್ನು ಅಳೆಯಲಾಗುತ್ತಿತ್ತು. ಮೂಢನಂಬಿಕೆ, ಕಂದಾಚಾರಗಳು ಮನೆ ಮಾಡಿದ್ದವು. ದೀಪ, ಧೂಪ, ಅರ್ಚನೆ, ಪೂಜೆಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು.
ಈ ಜ್ಞಾನ, ಪಾಂಡಿತ್ಯಕ್ಕೆ ಮಿಗಿಲು ಎನ್ನುವಂತೆ ಸ್ವಾನುಭಾವಿಗಳಾಗಿದ್ದ ಬಸವಾದಿ ಶರಣರ ಆಗಮನದಿಂದ ಆಗಿನ ಇಡೀ ಚಿತ್ರಣವೇ ಬದಲಾಯಿತು. “ರಾಜ ಪ್ರತ್ಯೇಕ್ಷ ದೇವತಾ” ಎನ್ನುವ ಪ್ರಭುತ್ವ ಇದ್ದಾಗ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರು. ಯಾರಿಗೂ ತಿಳಿಯದ ಸಂಸ್ಕೃತ ಬಾಷೆಯನ್ನು ತೆಗೆದು ಹಾಕಿ ಎಲ್ಲರಿಗೂ ಕನ್ನಡ ಕಲಿಸಿದರು ಮಾತ್ರವಲ್ಲ ದೇವರಿಗೂ ಕನ್ನಡವನ್ನು ಕಲಿಸಿ ಆಡು ಭಾಷೆಯನ್ನು ಮೃಢನ ಭಾಷೆಯನ್ನಾಗಿ ಮಾಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ. ನರನನ್ನು ಹರನನ್ನಾಗಿ, ದೇಹವನ್ನು ದೇವಾಲಯವನ್ನಾಗಿ ಪರಿವರ್ತಿಸಿದ ಶರಣರು ಭಕ್ತಿಗೆ ಹೊಸ ವಾಖ್ಯಾನ ಬರೆದರು. ಕಾಯಕ-ದಾಸೋಹ ಎಂಬ ಹೊಸ ಪರಿಕಲ್ಪನೆಯನ್ನು ತಂದರು. ಅನುಭವ ಮಂಟಪದ ಕುಲುಮೆಯಲ್ಲಿ ವಚನವೆಂಬ ಕಬ್ಬಿಣವನ್ನು ಕಾಸಿ ಬದುಕಿಗೆ ಬೇಕಾದ ಸಲಕರಣೆ ಮತ್ತು ಆಭರಣಗಳನ್ನು ತಯಾರಿಸಿದರು.
ಪಕ್ಕಾ ಪ್ರಜಾಪ್ರಭುತ್ವವಾದಿ, ಸ್ವಾಭಿಮಾನಿ, ಕನ್ನಡಾಭಿಮಾನಿಯಾಗಿದ್ದ ವಚನ ಚಳವಳಿಯ ನೇತಾರನಾಗಿದ್ದ ಬಸವಣ್ಣನವರು ಎಲ್ಲರಿಗೂ ಕನ್ನಡವನ್ನು ಕಲಿಸಿದರು ಮಾತ್ರವಲ್ಲ. ಎಲ್ಲ ಶರಣರು ಕನ್ನಡದಲ್ಲೇ ಬರೆಯುವಂತೆ ಮಾಡಿದ್ದು, ಬಹು ದೊಡ್ಡ ಕೆಲಸ. ವಚನಕಾರರ ಒಂದೊಂದು ವಚನಗಳ ಸಾಲು ಜಗತ್ತನ್ನಾಳಬಲ್ಲ ಶಕ್ತಿ, ತಾಕತ್ತು ಪಡೆದಿವೆ. ಈ ವಚನಗಳು ನಮ್ಮ ರಾಜ್ಯಕ್ಕೆ ಮತ್ತು ದೇಶಕ್ಕೆ ಒಂದು ಕಿರೀಟ. ಅಂತೆಯೇ “ಓದಿದನು ಬಸವಣ್ಣ ವೇದಾಗಮಗಳ ಹುಸಿಯ, ಬೇಧ-ಬೇಧವನೆ ಬಿಚ್ಚಿಟ್ಟ, ಜನಪದಕ್ಕೆ ಭೇರುಂಡ ಜೀವಿ ಬಸವಣ್ಣ” ನಮ್ಮ ಜನಪದರು ಹಾಡಿ ಹೊಗಳಿದ್ದಾರೆ. ವ್ಯಷ್ಟಿ ಕಲ್ಯಾಣ, ಸಮಷ್ಟಿ ಕಲ್ಯಾಣ, ಸಮಾನತೆಯ ಕಲ್ಯಾಣ, ಶಿಕ್ಷಣ ಕಲ್ಯಾಣ, ಆರ್ಥಿಕ ಕಲ್ಯಾಣದ ಕೇಂದ್ರ ಅದಾಗಿತ್ತು. ಹೀಗಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ಲೋಕ ನಾಯಕ ಎಂದು ಕರೆಯಲಾಗುತ್ತದೆ.
ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ವ್ಯವಸ್ಥೆಯನ್ನು ಅಂದೇ ಜಾರಿಗೆ ತಂದಿದ್ದ ಬಸವಣ್ಣನವರ ಆ ಅನುಭವ ಮಂಟಪದಲ್ಲಿ ಬದುಕಿಗೆ ಬೆಳಕಾಗಬಲ್ಲ ವಚನ ಸಾಹಿತ್ಯದ ರಚನೆ ಆಗುತ್ತಿತ್ತು. ಅನುಭವ ಮಂಟಪದ ಈ ಕೀರ್ತಿ ವಾರ್ತೆಯನ್ನು ಕೇಳಿದ ಜನ ಖಂಡ, ಖಂಡದಿಂದ ತಂಡ, ತಂಡವಾಗಿ ನಾಡಿನ ವಿವಿಧ ಮೂಲೆ ಮೂಲೆಗಳಿಂದ ಕಾಶ್ಮೀರದಿಂದ ಮಹಾದೇವ ಭೂಪಾಲ ಬಂದರು. ಅಫಘಾನಿಸ್ತಾನದಿಂದ ಮರುಳಶಂಕರ ದೇವರು, ತಮಿಳು ನಾಡಿನಿಂದ ಮಾದಾರ ಚೆನ್ನಯ್ಯ ಬಂದರು. ಅಂತಹ ಶರಣರಲ್ಲಿ ಕರ್ನಾಟಕದ ಮಲೆನಾಡ ಪ್ರದೇಶದಿಂದ ಅಲ್ಲಮಪ್ರಭು, ಅಕ್ಕಮಹಾದೇವಿ, ಸತ್ಯಕ್ಕ, ಅಜಗಣ್ಣ ಮುಕ್ತಾಯಕ್ಕರು ಬಂದರು.
ಮಂತ್ರ ಸಾಧಕಿಯಾಗಿದ್ದ ಅಕ್ಕನ ವಚನಗಳು ಬದುಕಿಗೆ ನೈತಿಕ ಸ್ಥೈರ್ಯ, ಧೈರ್ಯ ತಂದುಕೊಡುತ್ತವೆ. ಅಕ್ಕ ಕೌಶಿಕನ ಅರಮನೆಯಿಂದ ಹೊರಗೆ ಬಂದು ನಿಂತಾಗ ಜನ ಏನೋನೋ ಮಾತಾಡಿಕೊಂಡರು. ಆದರೂ ಆಕೆ ಹೆದರಲಿಲ್ಲ. ಬೆದರಲಿಲ್ಲ. ತನ್ನ ಮನದ ನಲ್ಲನಾದ ಚೆನ್ನಮಲ್ಲಿಕಾರ್ಜುನನ್ನು ಕಾಣಲು “ಹಸಿವಾದೊಡೆ ಬಿಕ್ಷಾನ್ನಗಳುಂಟು” ಎಂದು ಕಲ್ಯಾಣಕ್ಕೆ ಬಂದು ನಿಂತಳು. ಚೆನ್ನಗೊಲಿದ ಅಕ್ಕ ನೀರ ತಾವರೆಯ ಮೋಹದ ಪುತ್ಥಳಿಯಾಗಿದ್ದಳು. ವಚನಕಾರರ ಬದುಕು ಹಾಗೂ ಬರಹ ಕುರಿತು ಏನೋನೋ ಬರೆಯುತ್ತಾರೆ. ವಚನಕಾರರು ತಮ್ಮ ವಚನಗಳಲ್ಲಿ ತಮ್ಮ ಇಡೀ ಜೀವನ ಚರಿತ್ರೆಯನ್ನೇ ಬಿಚ್ಚಿಟಿದ್ದಾರೆ. ಇವುಗಳನ್ನು ಸಾಕ್ಷಿಯಾಗಿಟ್ಟುಕೊಂಡು ಬರೆದರೆ ಅವು ವಚನಕಾರರ ಬದುಕಿಗೆ, ಸತ್ಯಕ್ಕೆ ಪೂರಕವಾಗಿರುತ್ತವೆ. ಮಹಾತ್ಮರು ಜಗತ್ತಿಗಾಗಿ ಬದುಕಲಿಲ್ಲ. ಸತ್ಯಕ್ಕಾಗಿ ಬದುಕಿದರು. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಅವರು, ಜಗದ ಜನ ಬದುಕಲೆಂದು ಈ ಲೋಕದಲ್ಲಿ ಅವತರಿಸಿ ಬಂದಂತಿದೆ.
ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…