ಉಮೇಶ್ ಜಾಧವ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ, ಕಾಂಗ್ರೆಸ್ ನಾಯಕರಿಂದ ವಾಗ್ದಾಳಿ

0
152

ಕಲಬುರಗಿ: ಚಿಂಚೋಳಿ ಕ್ಷೇತ್ರದಿಂದ ಮೊದಲ ಸಲ‌ ಗೆದ್ದಾಗ ಎರಡನೆಯ ಸಲ ಗೆದ್ದಾಗ  ಉಮೇಶ್ ಜಾಧವ್ ಚೆನ್ನಾಗಿಯೇ ಇದ್ದರು.  ಬಂದಾಗೆಲ್ಲ ಕಾಲಿಗೆ ನಮಸ್ಕರಿಸಿರಿ ಅಣ್ಣಾ ಆ ಕೆಲಸ ಆಗಬೇಕು ಈ ಕೆಲಸ ಆಗಬೇಕು ಅಂತಿದ್ದ, ಈಗ ಹಣ ತಗೊಂಡು ಬಿಜೆಪಿಗೆ ಸೇರಿದ್ದಾರೆ. ಎಷ್ಟು ಅಂತ ನನಗೆ ಗೊತ್ತಿಲ್ಲ ಎಂದು ಡಿಸಿಎಂ ಡಾ ಜಿ.ಪರಮೇಶ್ವರ ಅವರು ಟೀಕಿಸಿದರು.

ಅವರು ಚಿಂಚೋಳಿ ತಾಲೂಕಿನ ಟೆಂಗಳಿಯಲ್ಲಿ ನಡೆದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತಮಾಡಿ, ಕಾಂಗ್ರೇಸ್ ಪಕ್ಷ ಅವರಿಗೆ ಮಾತೃ ಸಮಾನ. ಅಂತ ಮಾತೆಗೆ ಮೋಸ ಮಾಡಿ ಜಾಧವ್ ದುಡ್ಡಿಗಾಗಿ ಬಿಜೆಪಿಗೆ ಮಾರಾಟವಾಗಿರುವುದು ನಾಚಿಗೆಗೇಡು ಎಂದು ಹೇಳುತ, ರಾಜಕೀಯವಾಗಿ ಬೆಳಕಿಗೆ ತಂದವರ ವಿರುದ್ದ ಚುನಾವಣೆ ನಿಲ್ಲುವುದರ ಜೊತೆಗೆ ತನ್ನ ಪುತ್ರ ಅವಿನಾಶ್ ಜಾಧವ್ ಗೂ ಟಿಕೇಟ್ ಕೊಡಿಸಿದ್ದು ಇನ್ನೆಂತ ಮೋಸ ಎಂದರು.

Contact Your\'s Advertisement; 9902492681

” ನೋಡಪ್ಪ ಜಾಧವ್ ನಮಗೆ ಮೋಸ ಮಾಡಿ ಪಕ್ಷ ಬಿಟ್ಟ ನೀನೂ ಕೂಡಾ ಪಕ್ಷ‌ಬಿಡಬೇಡ ಎಂದು ರಾಠೋಡ್ ಗೆ ಹೇಳಿದ್ದೆ. ಆತ ಪ್ರಮಾಣ ಮಾಡಿದ್ದಾನೆ.‌ಅಂತ ಪ್ರಾಮಾಣಿಕನಿಗೆ ಮತ ನೀಡಿ ಎಂದು ಕರೆ ನೀಡಿದರು.  ಮೈತ್ರಿ ಸರಕಾರ 15 ಲಕ್ಷ ರೈತರ 7500 ಕೋಟಿ ರೈತರ ಸಾಲ ಮನ್ನಾ ಮಾಡಲಾಗಿದೆ. ಸರಕಾರ ಬೀಳಿಸಲು ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಏನೇ ಪಲ್ಟಿ ಹೊಡೆದರೂ ಸರಕಾರ ಬೀಳಲ್ಲ” ಎಂದು ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ, ದಿನೇಶ್ ಗುಂಡೂರಾವ್ ಮಾತನಾಡಿ, ಸ್ವಾರ್ಥ ರಾಜಕಾರಣದಿಂದಾಗಿ ಚಿಂಚೋಳಿಯಲ್ಲಿ  ಉಪಚುನಾವಣೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹೇಳಿದರು. ಈ ಕ್ಷೇತ್ರದ ಅಭಿವೃದ್ದಿ ಕೆಲಸಗಳು ಅಂದಿನ ಕಾಂಗ್ರೇಸ್ ಹಾಗೂ ಇಂದಿನ ಮೈತ್ರಿ ಸರಕಾರದಿಂದ ಆಗಿವೆ ಎಂದ ಅವರು ಜಾಧವ್ ಗೆ  ಎಲ್ಲ ರೀತಿಯ ಸಹಕಾರ ನೀಡಿದಾಗಲೂ ಮೋಸ ಮಾಡಿ ಬಿಜೆಪಿಗೆ ಸೇರಿದರು ಎಂದು ದೂರಿದರು.

ಬಡವರಪರ ಕೆಲಸಗಳಿಗೆ ಕಾಂಗ್ರೆಸ್ ಬದ್ದವಾಗಿದ್ದು ಎಲ್ಲ ವರ್ಗದ ಜನರಿಗೆ ನ್ಯಾಯಕ್ಕಾಗಿ ಸದಾ ಮಿಡಿಯುತ್ತಿದೆ. ಈಗ ಸುಭಾಷ್ ರಾಠೋಡ್ ನಮ್ಮ ಅಭ್ಯರ್ಥಿಯಾಗಿದ್ದಾರೆ ಅವರನ್ನು ಗೆಲ್ಲಿಸುವ ಮೂಲಕ ಉಮೇಶ್ ಜಾಧವ್ ಗೆ ಪಾಠಕಲಿಸಿ ಎಂದು ಕರೆ ನೀಡಿದರು. ಬಿಜೆಪಿಯವರು ಸುಳ್ಳಿನ ಪ್ರಚಾರ ನಡೆಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಾರೆ ಎಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಜಾಧವ್ ದುಡ್ಡಿಗಾಗಿ ಮಾರಾಟವಾಗಿದ್ದಾರೆ. ಇದನ್ನು ನೀವು ಗಣನೆಗೆ ತೆಗೆದುಕೊಂಡು ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿ ಎಂದರು.

ಪಕ್ಷದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕಾಂಗ್ರೇಸ್ ಪಕ್ಷ ಎಲ್ಲ ಕೊಟ್ಟರೂ ಕೂಡಾ ಜಾಧವ್ ನಾಯಕರಿಗೆ ಪಕ್ಷಕ್ಕೆ ಬೆನ್ನಿಗೆ ಚೂರಿಹಾಕಿ ಬಿಜೆಪಿ ಸೇರಿ ಚುನಾವಣೆ ನಡೆಯುವಂತೆ ಮಾಡಿದ್ದಾರೆ ಅವರಿಗೆ ಮನೆಗೆ ಕಳಿಸಿ ಎಂದರು.ಸಭೆಯಲ್ಲಿ ಅಭ್ಯರ್ಥಿ ಸುಭಾಷ್ ರಾಠೋಡ್ ಮಾತನಾಡಿ ಇದು ಇಬ್ಬರು ವ್ಯಕ್ತಿಗಳ ನಡುವಿನ ಚುನಾವಣೆಯಲ್ಲ.‌ ಮೋಸ ಮಾಡಿದ ವ್ಯಕ್ತಿಯ ಹಾಗೂ ಜನಪರ ಪಕ್ಷದ ನಡುವಿನ‌ ಚುನಾವಣೆಯಾಗಿದೆ ಎಂದರು. ಸಚಿವ ರಹೀಂಖಾನ್ ಮಾತನಾಡಿ ಈ ಭಾಗದ ಅಭಿವೃದ್ದಿಗೆ ಖರ್ಗೆ ಅವರು ಶ್ರಮಿಸಿದರು. ಬಿಜೆಪಿಯವರು ಸುಳ್ಳು ಮಾತುಗಳಿಂದ ಜನಜೀವನವನ್ನು ಹಾಳುಗೆಡವಿದ್ದಾರೆ ಎಂದರು.

ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ನಾನು ಜಾಧವ್ ನ ಗುರು ಮೋದಿ ಬಗ್ಗೆ ಸಂಸತ್ ನಲ್ಲಿ ಮಾತನಾಡುತ್ತೇನೆ ಇಲ್ಲೇನು ಮಾತನಾಡಲಿ. ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಸಾಕೆ ಶೈಲೇಶ್ ನಾಥ್,  ಸಚಿವರಾದ ರಾಜಶೇಖರ್ ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಪಕ್ಷದ ಪ್ರಮುಖರು ವೇದಿಕೆಯ ಮೇಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here