ಕಲಬುರಗಿ: ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ದಿನೆ ದಿನೆ ರಂಗೆರುತ್ತಿದ್ದು, ಸೋಮವಾರ ಕಾಂಗ್ರೆಸ್ ನಾಯಕರು ಚಿಂಚೋಳಿ ಕ್ಷೇತ್ರದ ಮಾಜಿ ಶಾಸಕ ಡಾ. ಉಮೇಶ್ ಜಾಧವ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಯ ಪರ ಚುನಾವಣೆ ಪ್ರಚಾರ ನಡೆಸಿದರು.
ಚಿಂಚೋಳಿ ಕ್ಷೇತ್ರದ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್ ಗೆಲುವಿಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ರಣತಂತ್ರ ರೂಪಿಸಿದ್ದಾರೆಂದು ಸುದ್ದಿ ಇದ್ದು, ಮಲ್ಲಿಕಾರ್ಜುನ್ ಖರ್ಗೆ ಅವರ ದೆಹಲಿ ಪ್ರವಾಸ ದಿಢೀರ್ ರದ್ದು ಮಾಡಿ ಕಲಬುರಗಿಯಲ್ಲೇ ಖರ್ಗೆ ವಾಸ್ತವ್ಯ ಹೂಡಿದರಿಂದ ಚಿಂಚೋಳಿಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಬಾರದೆಂದು ಪ್ಲ್ಯಾನ್ ನಡೆಸಿದ್ದು ಖಚಿತವೆಂಬತಾಗಿದೆ.
ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಸೇರಿದಂತೆ ಬೈಎಲೆಕ್ಷನ್ ಬರಲು ಡಾ.ಉಮೇಶ್ ಜಾಧವ್ ಕಾರಣ ಅಂತಾ ಬಿಂಬಿಸುವುದು ಹಲವು ಜವಾಬ್ದಾರಿಗಳ ಕುರಿತಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರಮುಖ ಕಾರ್ಯಕರ್ತರ ಜೊತೆ ಖರ್ಗೆ ಸಭೆ ನಡೆಸಿ, ನಿಷ್ಠಾವಂತ ಕಾರ್ಯಕರ್ತರಿಗೆ ಚಿಂಚೋಳಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.