ಕಲಬುರಗಿಯಲ್ಲಿ ಬಸವ ಕ್ರಾಂತಿ: ಮೌಲ್ಯಯುತ ಜೀವನ ಸಾಗಿಸುವುದೆ ನಿಜವಾದ ಅಭಿವೃದ್ಧಿ: ಡಿ.ಸಿ

0
115

ಕಲಬುರಗಿ:  ರಸ್ತೆ, ಚರಂಡಿ, ಬೃಹತ್ ಕಟ್ಟಡ, ಮೇಲ್ಸೇತುವೆ ನಿರ್ಮಣವಾದರೆ ಅಭಿವೃದ್ಧಿಯಲ್ಲ, ಬದಲಾಗಿ ಪ್ರತಿಯೊಬ್ಬರು ವ್ಯಕ್ತಿಗತವಾಗಿ ಮೌಲ್ಯಯುತ ಜೀವನ ಸಾಗಿಸುವುದೆ ನಿಜವಾದ ಅಭಿವೃದ್ಧಿ. ಇಂತಹ ಮೌಲ್ಯಯುತ ಜೀವನ ನಡೆಸಲು ಬಸವಣ್ನನವರ ವಚನಗಳೆ ನಮ್ಮೆಲರಿಗೂ ಪ್ರೇರಣೆಯಾಗಿದೆ. ಬಸವನ್ನನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಸಾಗಿದಲ್ಲಿ ಸಮ-ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಭಿಪ್ರಾಯಪಟ್ಟರು.

ಮಂಗಳವಾರ ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಬಸವ ಜಯಂತಿ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಜಗತ್ ವೃತ್ತದಲ್ಲಿ ಆಯೋಜಿಸಲಾದ ೮೮೬ನೇ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಾತಿ, ಧರ್ಮ, ಮೇಲು-ಕೀಳು ಎನ್ನದೆ ಸರ್ವ ಜನಾಂಗದವರನ್ನು ಸಮನಾಗಿ ಕಂಡು ಮೂಡನಂಭಿಕೆ, ಕಂದಾಚಾರದ ವಿರುದ್ಧ ಹೋರಾಡಿ ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿ ಆಧ್ಯಾತ್ಮಿಕ ನಾಯಕರಾಗಿ ಹೊರಹೊಮ್ಮಿದವರು ಜಗಜ್ಯೋತಿ ಬಸವಣ್ಣನವರು ಎಂದರು.

Contact Your\'s Advertisement; 9902492681

ಬಸವಣ್ಣನವರು ಕರುನಾಡಿನಲ್ಲಿ ಜನಿಸಿದರು ಸಹ ಇವರ ಕೀರ್ತಿ, ಬಸವ ತತ್ವ ದೇಶ-ವಿದೇಶದಲ್ಲಿ ಪಸರಿಸಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇಂದು ಬಸವ ಜಯಂತಿ ಹಬ್ಬವಾಗಿ ಆಚರಿಸಲಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದರು. ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿದ ಅಕ್ಕಲಕೋಟ್ ಮೂಲದ ಉಪನ್ಯಾಸಕ ಡಾ.ಗುರುಲಿಂಗಪ್ಪ ದಬಾಳೆ ಮಾತನಾಡಿ, ಬುದ್ಧನ ಕರುಣೆ, ಅಂಬೇಡ್ಕರನ ದಲಿತ ಪ್ರಜ್ಞೆ, ಗಾಂಧಿಯ ದೇಶಭಕ್ತಿ, ಯೇಸುವಿನ ಅಹಿಂಸೆ, ಪೈಗಂಬರನ ಆಚಾರ ವಿಚಾರದ ಮಾನವೀಯತೆಯ ಆದರ್ಶಗಳ ಸಂಗಮವೆ ವಿಶ್ವಗುರು ಬಸವಣ್ಣ. 12ನೇ ಶತಮಾದಲ್ಲಿ ಲೋಕ ಉದ್ಧಾರಕ್ಕಾಗಿ ಜನಿಸಿದ ಮಹಾನ್ ದಿವ್ಯಶಕ್ತಿ, ಜಗದ ಬೆಳಕು, ಜಗದ ಶಕ್ತಿ ಬಸವಣ್ನನವರಾಗಿದ್ದಾರೆ.

ಭಕ್ತಿ, ಪ್ರೀತಿ, ಸಹೋದರತೆಯ ಸಮಾನತೆಗೆ ಹೋರಾಡಿದ ಅವರು ದೀನ, ದಲಿತರ, ತುಳಿತಕ್ಕೊಳಗಾದ ಸಮುದಾಯವನ್ನು ಅಪ್ಪಿಕೊಂಡ ಶ್ರೇಷ್ಠ ಶರಣಾರಾಗಿದ್ದಾರೆ. ಅಧಿಕಾರ, ಸ್ವಾರ್ಥದಿಂದಲ್ಲ ನೆಮದಮಿ ಪಡೆಯಲು ಅಸಾಧ್ಯ. ಅದೇನಿದ್ದರು ಕಾಯಕ ಮತ್ತು ದಾಸೋಹದಿಂದ ಮಾತ್ರ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.


ಕಾರ್ಯಕ್ರಮ ಉದ್ಘಾಟನೆ ಮಾಡಿ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀಶೈಲ್ ಸಾರಂಗಮಠದ ಜಗದ್ಗುರು ಪೂಜ್ಯ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಬಸವ ಧರ್ಮ ಬಡವರ, ದಲಿತರ, ಅನ್ಯಾಕ್ಕೊಳಗಾದವರ, ಧ್ವನಿಯಿಲ್ಲದವರ ಧರ್ಮವಾಗಿದೆ. ಬಸವಣ್ಣನವರ ಆಚಾರ ವಿಚಾರಗಳೆ ನಮ್ಮೆಲ್ಲರಿಗೆ ಸ್ಫರ್ಥಿದಾಯಕವಾಗಿದೆ. ಸರ್ವರನ್ನು ಸಮನಾಗಿ ಕಾಣುವ ಬಸವ ತತ್ವಗಳು ಎಷ್ಟು ಜನಪ್ರಿಯತೆ ಸಾಧಿಸಿದೆ ಎಂದರೆ ಇಂದು ಲಂಡನ್‌ನಲ್ಲಿಯೂ ಬಸವ ಪ್ರತಿಮೆ ನೋಡಬಹುದಾಗಿದೆ ಎಂದು ತಮ್ಮ ಆರ್ಶಿವರ್ಚನದಲ್ಲಿ ನುಡಿದರು.

ಕಾರ್ಯಕ್ರಮದಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆಯ ಆಯುಕ್ತೆ ಬಿ.ಫೌಜಿಯಾ ತರನ್ನುಮ, ಅಪರ ಜಿಲ್ಲಾಧಿಕಾರಿ ಟಿ.ಯೊಗೇಶ, ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಬಸವ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಗುಡ್ಡಾ, ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಮುಖಂಡರಾದ ಕಲ್ಯಾಣರಾವ ಮೂಲಗೆ, ಸಿದ್ದರಾಜ ಬಿರಾದಾರ, ಬಿ.ಬಿ.ರಾಂಪೂರೆ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿದ್ದರು. ಅಖಿಲ ಭಾರತ ವೀರಶೈವ ಮಹಾಸಭೆಯ ಕಲಬುರಗಿ ಜಿಲ್ಲಾಧ್ಯಕ್ಷ ಅರುಣಕುಮಾರ ಪಟ್ಟಣಕರ ಸರ್ವರನ್ನು ಸ್ವಾಗತಿಸಿದರು.


ಇದಕ್ಕು ಮುನ್ನ ಅತಿಥಿ ಗಣ್ಯರು ಜಗತ್ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here