ಬಿಸಿ ಬಿಸಿ ಸುದ್ದಿ

ಅನಗತ್ಯ ಚುನಾವಣೆ‌ ಬರಲು ಜಾಧವ್ ಕಾರಣ, ಜಾಧವ್ ವಿರುದ್ಧ ಗುಡುಗಿದ ಕಾಂಗ್ರೆಸ್ ನಾಯಕರು

ಚಿಂಚೋಳಿ: ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ‌ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಜಾಧವ್ ಯಾಕೆ ರಾಜೀನಾಮೆ ನೀಡಿದರು. ಯಾಕೆ ಬಿಜೆಪಿಗೆ ಹೋಗುತ್ತಿದ್ದೇನೆ ಎಂದೆನಾದರೂ ನಿಮಗೆ ಹೇಳಿದ್ರಾ? ನನಗಂತೂ ನಿಜವಾಗಲೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಅವರು ಕುಂಚಾವರಮ್ ಗ್ರಾಮದಲ್ಲಿ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಐದು ವರ್ಷ ನಮ್ಮ ಪರವಾಗಿ ಕೆಲಸ ಮಾಡಿ ಎಂದು ಮತದಾರರು ಆಶೀರ್ವಾದ ಮಾಡಿದ್ದರು. ಆದರೆ ಆತ ರಾಜೀನಾಮೆ‌ ನೀಡುವ ಮೂಲಕ‌ ಚಿಂಚೋಳಿಯ ಜನರಿಗೆ ದ್ರೋಹ ಮಾಡಿದ್ದಾರೆ. ಈಗ ಮತ್ತೆ ಉಪಚುನಾವಣೆಯಲ್ಲಿ ಮಗನನ್ನು ನಿಲ್ಲಿಸಿ ಮತ ಕೇಳಲು ಬರುತ್ತಾರಲ್ಲ. ಓಟು ಹಾಕಬೇಕಾ? ಎಂದು ಸಭಿಕರನ್ನು ಕೇಳಿದರು.

ತನ್ನ ಅಭ್ಯುದಯಕ್ಕೆ ಕಾರಣವಾಗಿದ್ದ ಪಕ್ಷಕ್ಕೆ ಅನ್ಯಾಯ ಮಾಡಿ ಮತ್ತೊಂದು ಪಕ್ಷಕ್ಕೆ ಸೇರುವುದರೆಂದರೆ‌ ಹೆತ್ತ ತಾಯಿಗೆ ಅನ್ಯಾಯ ಮಾಡಿದಂತೆ ಅದನ್ನು ಈ ಜಾಧವ್ ಮಾಡಿದ್ದಾನೆ. ಸರಿ ಅವನು ಹೋಗಿದ್ದಾದರೂ ಯಾವ ಪಕ್ಷ? ಸ್ವತಃ ಒಬ್ಬ ಪರಿಶಿಷ್ಟನಾಗಿ ಸಂವಿಧಾನ ವಿರೋಧಿ,‌ಸಾಮಾಜಿಕ ನ್ಯಾಯದ ವಿರೋಧಿಗಳ ಪಕ್ಷ ಸೇರಿದ್ದಾನೆ. ಯಾವ ಕಾರಣಕ್ಕೂ ಆ ಪಕ್ಷಕ್ಕೆ ಒಂದೇ ಒಂದು ಓಟು ಹಾಬೇಡಿ ಎಂದು ಮನವಿ ಮಾಡಿದರು.

ಮೋದಿಯ ವಿರುದ್ದ ಬಾಣ ತಿರುಗಿಸಿದ ಸಿದ್ದರಾಮಯ್ಯ, ಬಡವರಿಗೆ ಫ್ರಿ ಅಕ್ಕಿ ಕೊಟ್ಟೆ, 1800 ಕೋಟಿ ರೂಗಳನ್ನು ಒಂದ್ ಟನ್ ಕಬ್ಬಿಗೆ ರೂ 3000 ರೂಪಾಯಿಯಂತೆ ಕೊಟ್ಟೆ, 8500 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಮೋದಿ, ಯಡಿಯೂರಪ್ಪ, ಶೆಟ್ಟರ್ ಮಾಡಿದ್ದಾರ? ಮತ್ತೆ ಅಂತ ಪಕ್ಷಕ್ಕೆ ಹೋಗಿದ್ದಾನಲ್ಲ ಅವನಿಗೆ ಓಟು ಹಾಕಬೇಕಾ ಎಂದು ಪ್ರಶ್ನಿಸಿದರು.

ಬಡ್ತಿ ಮೀಸಲಾತಿಯ ವಿಚಾರದಲ್ಲಿ ಸುಪ್ರಿಂ ತೀರ್ಪು ಪ್ರಸ್ತಾಪಿಸಿದ ಸಿದ್ದರಾಮಯ್ಯ ಸರಕಾರಿ ನೌಕರರಿಗೆ ಅನ್ಯಾಯವಾಗಬಾರದು ಎಂದು ನಾನು ಸಿಎಂ ಆಗಿದ್ದಾಗ ಒಂದು ಕಾನೂನು ಜಾರಿಗೆ ತಂದೆ ಅದರ ವಿರುದ್ದ ಒಬ್ಬರು ಸುಪ್ರಿಂ ಕೋರ್ಟ್ ಗೆ ಹೋಗಿದ್ದರು. ಆದರೆ ಇವತ್ತು ಸುಪ್ರಿಂ ನಮ್ಮ ಕ್ರಮವನ್ನು ಎತ್ತಿಹಿಡಿದಿದೆ. ಈಗ ಹೇಳಿ ದಲಿತರ ಹಿಂದುಳಿದವರ ಪರ ನಾವಾ ? ಅಥವಾ ಬಿಜೆಪಿಯವರ?  ಎಂದು ಪ್ರಶ್ನಿಸಿ ಯಾವ ದಲಿತರೂ ಬಿಜೆಪಿಗೆ ಹೋಗಬಾರದು ಎಂದು ಮನವಿ ಮಾಡಿದರು.

ತಾಂಡಾ‌ಅಭಿವೃದ್ದಿ ನಿಗಮ, ಬಂಜಾರ ಅಭಿವೃದ್ದಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಾವು. ಇದನ್ನು ಬಿಜೆಪಿಯವರು ಮಾಡಿಲ್ಲ. ಬಂಜಾರ, ಎಸ್ ಸಿ‌ ಎಸ್ ಟಿ, ಕೋಲಿ‌ಸಮಾಜದ ಅಭಿವೃದ್ದಿ ಮಾಡಿದ್ದು ಬಿಜೆಪಿಯವರಲ್ಲ. ಈಗ ಚುನಾವಣೆಗಾಗಿ‌ ಕೋಲಿಯನ್ನು ಎಸ್ ಟಿ ಗೆ ಸೇರಿಸುತ್ತೇನೆ ಎಂದು‌ ಚಿಂಚನಸೂರು ಹೇಳುತ್ತಿದ್ದಾನೆ. ಐದು ಅವರದೇ ಸರ್ಕಾರ ಕೇಂದ್ರದಲ್ಲಿ ಇತ್ತಲ್ಲ ಯಾಕೆ ಆಗ ಮಾಡಲಿಲ್ಲ. ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಯಡಿಯೂರಪ್ಪ ಬರಲಿ ಎಂದು ಪಂಥಾವ್ಹಾನ ನೀಡಿದರು.‌

ಹೈಕ ಭಾಗದ ಅಭಿವೃದ್ದಿಗಾಗಿ‌ ವಾರ್ಷಿಕ 1500 ಕೋಟಿಯನ್ನು ಹೈಕ ಅಭಿವೃದ್ದಿಗೆ ಬಿಡುಗಡೆ ಮಾಡುತ್ತಿದೆ.ಈಗ ಭಾಗದ ಅಭಿವೃದ್ದಿಗಾಗಿ ಖರ್ಗೆ ಹಾಗೂ ಧರಮಸಿಂಗ್ ಸೇರಿದಂತೆ ಈ ಭಾಗದ ನಾಯಕರು ಸಂವಿಧಾನಕ್ಕೆ ತಿದ್ದುಪಡೆ ತಂದರು.‌ಬಿಜೆಪಿಯವರು ಏನು ಮಾಡಿದರು?

ಕಳೆದ ಸಲ ಕಾಂಗ್ರೇಸ್ ಗೆಲ್ಲಿಸಿದ್ದರಿ ಎಲ್ಲರಿಗೆ ಟೋಪಿ ಹಾಕಿದ ಬಿಜೆಪಿಗೆ ಹಾಗೂ ಜಾಧವಗೆ ಮನೆಗೆ ಕಳಿಸಿ, ವಿದ್ಯಾವಂತ ರಾಠೋಡ್ ಗೆ ಒಂದು ಅವಕಾಶ ನೀಡಿ ಎಂದು ಕರೆ ನೀಡಿ ಸಂಸದರಾದ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ ಕೇವಲ‌ ಹನ್ನೊಂದು ತಿಂಗಳ ಹಿಂದಷ್ಟೆ ಶಾಸಕನಾಗಿ ಆಯ್ಕೆಯಾಗಿದ್ದ‌ ಜಾಧವ್ ಯಾವುದೇ ಸಕಾರಣವಿಲ್ಲದೇ ರಾಜೀನಾಮೆ ನೀಡಿ ಮತ್ತೊಂದು ‌ಚುನಾವಣೆಯನ್ನು ಜನರ ಮೇಲೆ ಏರಿದರು ಎಂದು ಹೇಳಿದರು.

ಸರಕಾರಿ ನೌಕರನಾಗಿದ್ದ‌ ನಿನ್ನನ್ನು  ಧರಂಸಿಂಗ್ ಅವರ ಒತ್ತಾಸೆಯಂತೆ ನಿಮಗೆ ಟಿಕೇಟ್ ನೀಡಿ ಪ್ರಚಾರ ಮಾಡಿ ಗೆಲ್ಲಿಸಿದೆವು. ಸಿಎಂ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ನಿಮ್ಮ ಸಹೋದರ ನರಸಿಂಗ್ ಜಾಧವ್ ಗೆ ಎರಡು ಸಲ ಟಿಕೇಟ್ ನೀಡಲಾಗಿತ್ತು. ಆ ನಂತರ  ಕೆ.ಟಿ. ರಾಠೋಡ್ ಅವರಿಗೆ ಬಿಜಾಪುರದಿಂದ ಟಿಕೇಟ್ ನೀಡಲಾಗಿತ್ತು. ಆದಾದ ಮೇಲೂ ಅವರ ಮಗನಿಗೆ ನಾಲ್ಕು ಸಲ ಟಿಕೇಟ್ ನೀಡಲಾಗಿತ್ತು.‌ ನಿಮ್ಮ ಕುಟುಂಬದವರಿಗೆ ಹತ್ತು ಸಲ ಟಿಕೇಟ್ ನೀಡಿದರೂ ಕಾಂಗ್ರೇಸ್ ಅನ್ಯಾಯ ಮಾಡಿದೆ ಎನ್ನುತ್ತೀರಿ ಇದನ್ನು ಸಹಿಸಲಾಗತ್ತಾ? ಎಂದು ಪ್ರಶ್ನಿಸಿದರು.

ಅಂದು ದೇವರಾಜ್ ಅರಸ್ ಸಿಎಂ ಆಗಿದ್ದಾಗ ಬಂಜಾರ ಸಮುದಾಯವನ್ನು ಎಸ್ ಸಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಇದನ್ನು ಮಾಡಿದ್ದು ಕಾಂಗ್ರೇಸ ಹೊರತು ಬಿಜೆಪಿಯಲ್ಲ ಎಂದು ಅಂದಿನ ಸರಕಾರದ‌ ಕ್ರಮವನ್ನು ನೆನಪಿಸಿದರು. ನಾನು ರೈಲು ಸಚಿವನಾಗಿದ್ದಾಗ ರಾಮ್ ರಾಮ್ ಮಹಾರಾಜ್ ಅವರ ಕೋರಿಕೆಯಂತೆ  ಪೌರೋದೇವಿಗೆ ರೈಲು ಓಡಿಸಲು ಕ್ರಮ ಕೈಗೊಂಡೆ ಕೈಗೊಂಡಿದ್ದೇನೆ. ಅಲ್ಲಿನ ರೈಲು ನಿಲ್ದಾಣದಲ್ಲಿ ಇಳಿದಾಗ ನನ್ನ ನೆನಪಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಮೇ 24 ರಂದು ಮೋದಿ ಆಟ ನಿಲ್ಲಲಿದೆ ಎಂದು ಕುಟುಕಿದ ಖರ್ಗೆ ಅವರು, ನೀವು ಪಾಕಿಸ್ಥಾನದಲ್ಲಿ ಕಾರ್ಯಾಚರಣೆ ಆ ನಂತರ ಹೇಳಿ ಆದರೆ ಈ ಐದು ವರ್ಷದಲ್ಲಿ ರೈತರಿಗಾಗಿ, ಬಡವರಿಗಾಗಿ ಏನು ಮಾಡಿದ್ದಿರಿ ಮೊದಲು ಹೇಳಿ. ದೇಶಭಕ್ತಿ ಹೆಸರಲ್ಲಿ ಮತ ಕೇಳುತ್ತಿದ್ದೀರಿ ನೀವೊಬ್ಬರೇ ಮಾತ್ರ ದೇಶಭಕ್ತರೇ? ಕಾಂಗ್ರೇಸ್ ನವರೇನು ಕೆಟ್ಟವರಾ? ದೇಶಕ್ಕೆ ಸ್ವಾತಂತ್ರ್ಯ ತಂದದ್ದು ಕಾಂಗ್ರೇಸ್ ಪಕ್ಷ.  ದೇಶಕ್ಕಾಗಿ ರಕ್ತ ಹರಿಸಿದ್ದು ನಾವು ನೀವೇನು ಮಾಡಿದರು. ನಾವು ಮಾಡಿದ್ದನ್ನು ತಾನೇ ಮಾಡಿದ್ದಾಗಿ ಹೇಳುತ್ತಿದ್ದಾರೆ. ” ಮೆಹನತ್ ಕರೇ ಮುರ್ಗೀಸಾಬ್, ಅಂಡಾ ಖಾಯಾ ಫಕೀರ್ ಸಾಬ್ ” ಎನ್ನುವ ಮಾತು ಸೂಕ್ತವಾಗಿದೆ ಎಂದು ಟೀಕಿಸಿದರು.

” ಮೋದಿಯ ಆತೀ ಮತ್ ದೇಖೋ ಕಾಂಗ್ರೇಸ್ ಕಾ ಹಾಥ್ ದೇಖೋ” ಎಂದು ಕರೆ ನೀಡುವ ಮೂಲಕ ಕಾಂಗ್ರೇಸ್ ಗೆ ಮತ ನೀಡಿ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ‌ ವಿಶ್ವಾಸಘಾತುಕನ ಮಾಡಿದ ಜಾಧವ್ ನನ್ನು ಸೋಲಿಸಿ ಎಂದು ಕರೆ ನೀಡಿದರು. ಕಾಂಗ್ರೇಸ್ ಪಕ್ಷ ಅಭಿವೃದ್ದಿಪರವಿದ್ದು ಸಿದ್ದರಾಮಯ್ಯ ನವರ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾಮಾಡಿದ್ದಾರೆ ಮೋದಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಚಿಂಚೋಳಿಯಲ್ಲಿ ಉಪಚುನಾವಣೆಯ ಅವಶ್ಯಕತೆ ಇರಲಿಲ್ಲ. ನಮಗೆ ದ್ರೋಹ ಮಾಡಿದ ಜಾಧವ್ ಪಕ್ಷ ತೊರೆದಿದ್ದರಿಂದ ಈಗ ಚುನಾವಣೆ‌ ಎದುರಿಸುವಂತಾಗಿದೆ ಎಂದರು. ಪ್ರಿಯಾಂಕ ಖರ್ಗೆ ಅವರನ್ನು ಪಕ್ಷದ ವತಿಯಿಂದ ತುಂಬಾ ಒತ್ತಾಯ ಮಾಡಿ ಚಿತ್ತಾಪುರದಲ್ಲಿ ನಿಲ್ಲಿಸಿದ್ದೆವು ಎಂದು ಹೇಳುವ ಮೂಲಕ ಜಾಧವ್ ಅವರ ‘ಪುತ್ರವ್ಯಾಮೋಹ’ ಹೇಳಿಕೆಗೆ  ಟಾಂಗ್ ನೀಡಿದರು.

ಮಾಜಿ ರಾಜ್ಯಸಭಾ ಸದಸ್ಯ‌ ಕೆ.ಬಿ.ಶಾಣಪ್ಪ ಮಾತನಾಡಿ, ಬಿಜೆಪಿಯಲ್ಲಿ ಉಸಿರುಗಟ್ಟಿದ ವಾತವಾರಣವಿದೆ ಎಂದು ಜಾಧವ್ ನನ್ನೊಂದಿಗೆ ಹೇಳಿದ್ದರು. ನಾನು ೧೬ ವರ್ಷದಿಂದ ಅಲ್ಲಿ ಇದ್ದು ಸಂಕಟ ಅನುಭವಿಸಿದ್ದೇನೆ ನೀನ್ಯಾಕೆ ಅಲ್ಲಿಗೆ ಹೋದೆ ಎಂದು ಪ್ರಶ್ನಿಸಿದ್ದೆ. ಅವರು ಬಿಜೆಪಿಗೆ ಹೋಗಬಾರದಿತ್ತು, ಯಾಕೆಂದರೆ, ಬಿಜೆಪಿಗೆ‌ ಹೋದ‌ ಚಿಂಚನಸೂರು,ಚಿಂಚನಸೂರು ಹಾಗೂ ಮಾಲಕರೆಡ್ಡಿಗೆ ತಪ್ಪಿನ ಅರಿವಾಗಲಿದೆ ಹಾಗೆ ಜಾಧವ್ ಗೆ ಇನ್ನೂ ಹೆಚ್ಚಿನ ಸಂಕಟವಾಗಲಿದೆ ಎಂದರು.

ಶಾಸಕ ನಾರಾಯಣರಾವ್ ಮಾತನಾಡಿ ಬಾಬುರಾವ್ ಚಿಂಚನಸೂರು ದುಖಾನ್ ಬಂದ್ ಆಗಿದ್ದು ಖರ್ಗೆ ಸಾಬ್ ಒಂದು ಲಕ್ಷ ಮತಗಳಿಂದ ಗೆಲ್ಲಲಿದ್ದಾರೆ ಹಾಗಾಗಿ ಈಗ ಚಿಂಚೋಳಿಗೆ ಬಂದಿದ್ದಾನೆ ಇಲ್ಲಿ‌‌ ಅವರ ಆಟ‌ ನಡೆಯಲ್ಲ ಎಂದರು. ಅಭ್ಯರ್ಥಿ ಸುಭಾಷ್ ರಾಠೋಡ್ ಮಾತನಾಡಿ ಆರು ವರ್ಷಗಳಲ್ಲಿ ಮಂಗಗಳನ್ನು ಕಾಡಿನಲ್ಲಿ ತಂದು ಬಿಟ್ಟಿದ್ದೇ ಸಾಧನೆ ಎಂದು ಟೀಕಿಸಿದರು.

ಸಂಸದರಾದ ಹಾಗೂ ಸಂಸತ್ ನಲ್ಲಿ ಕಾಂಗ್ರೇಸ್ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಪಿ.ಟಿ.ಪರಮೇಶ್ವರ ನಾಯಕ್, ರಹೀಂ ಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ರಾಜ್ಯ ಸಭಾ ಸದಸ್ಯ ಕೆ.ಬಿ.ಶಾಣಪ್ಪ, ಶಾಸಕರಾದ ನಾರಾಯಣರಾವ್, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಂ.ಡಿ.ಲಕ್ಷ್ಮೀ ನಾರಾಯಣ,‌ ಜಗದೇವ ಗುತ್ತೇದಾರ್, ಬಾಬುರಾವ್ ಚವ್ಹಾಣ್, ಬಾಬು ಹೊನ್ನಾನಾಯಕ್, ರಾಜಗೋಪಾಲರೆಡ್ಡಿ, ಕಾಂತಾನಾಯಕ್, ಜಲಜಾನಾಯಕ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಮತ್ತಿತರರು ವೇದಿಕೆಯ ಮೇಲಿದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

9 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

20 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

21 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

43 mins ago