ಕಾಯಕದಲ್ಲಿ ಮೇಲು-ಕೀಳಿಲ್ಲ: ಅಪ್ಪಾರಾವ ಅಕ್ಕೋಣಿ

0
86

ಕಲಬುರಗಿ: ಬಸವಾದಿ ಪ್ರಮಥರು ನವಸಮಾಜ ನಿರ್ಮಾಣಕ್ಕಾಗಿ ಅಂದಿನ ಜನ ಸಾಮಾನ್ಯರಿಗೆ ತಿಳಿಯುವಂತೆ ಅವರ ಭಾಷೆಯಲ್ಲಿ ಧರ್ಮ ತತ್ವಗಳನೆಲ್ಲ ವಚನಗಳ ರೂಪದಲ್ಲಿ ತತ್ವ ಚಿಂತನದ ಚರ್ಚೆಗಾಗಿ ಅನುಭವ ಮಂಟಪ ಸ್ಥಾಪಿಸಿದರು. ಇಂತಹ ಸಮಾಜ ಸೃಷ್ಠಿಗೆ ಹೊಸ ಬೆಳಕು ಕಾಯಕ ಮತ್ತು ದಾಸೋಹ ಎಂದರಿದ ಶಿವಶರಣರು ಈ ಎರಡು ಕಟ್ಟುನಿಟ್ಟಾಗಿ ಜಾರಿಗೆ ತಂದು ಜೊತೆಗೆ ಯಾವುದೇ ಕಾಯಕದಲ್ಲಿ ಮೇಲು-ಕೀಳಿಲ್ಲ ಎಂಬುವುದು ಸಾರಿದ ಪ್ರತಿಫಲವೇ ವಿಭಿನ್ನ ಕಾಯಕದ ಪರಿಕಲ್ಪನೆ ಬೆಳೆಯಿತು ಎಂದು ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆಯಲ್ಲಿರುವ ವಿದ್ಯಾನಗರ ಕಾಲೋನಿಯಲ್ಲಿನ ಆರ್ಯನ್ ಬಿ.ಇಎಡ್. ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಕಾಯಕ ದಿನಾಚರಣೆ ಕಾರ್ಯಕ್ರಮವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣಿ ರವರು ಉದ್ಘಾಟಿಸಿ ಮಾತನಾಡಿದರು.

ಚಿಂಚೋಳಿ ಶ್ರೀಮತಿ ಸಿ.ಬಿ.ಪಾಟೀಲ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಶ್ರೀಶೈಲ್ ನಾಗರಾಳ ರವರು ತಮ್ಮ ಉಪನ್ಯಾಸದಲ್ಲಿ ಬಸವಣ್ಣನ ವ್ಯಕ್ತಿತ್ವ ಪ್ರಭಾವ ಮತ್ತು ಕರ್ತೃತ್ವ ಶಕ್ತಿಯಿಂದ ಕಲ್ಯಾಣ ರಾಜ್ಯದಲ್ಲಿ ಕಾಯಕವೇ ಕೈಲಾಸವಾಯಿತು. ದುಡಿದ ದೇಹಗಳೇ ದೇಗುಲಗಳಾದರು. ಈ ನೆಲದಲ್ಲಿ ಬಸವಣ್ಣನವರು ಎಲ್ಲರಿಗೂ ಕಾಯಕದ ದೀಕ್ಷೆ ನೀಡಿದರು. ಹಾಗಾಗಿಯೇ ಜನಪದರ ದೃಷ್ಠಿಯಲ್ಲಿ ಬಸವ ಕಾಯಕದ ಗುರುವಾದ, ಕಾಯಕವ ಕಲಿಸುವುದಕ ನಾಯಕ ಬಸವಣ್ಣನಾದ, ಇತನ ಸಮಕಾಲೀನರಾದ ನೂರಾರು ಶರಣ ಶರಣೇಯರು ವಿವಿಧ ಕಾಯಕಗಳು ಕೈಗೊಂಡರು. ಇವರೆಲ್ಲರೂ ಕಾಯಕಕ್ಕೆ ಆಧ್ಯರು, ಆರಾಧ್ಯರು ಮತ್ತು ಅಸಾಮಾನ್ಯರಾದರು ಎಂದು ಅನೇಕ ವಚನ ವಿಶ್ಲೇಷಣೆಯೊಂದಿಗೆ ಉಪನ್ಯಾಸ ಮಾಡಿದರು.

Contact Your\'s Advertisement; 9902492681

ಆರ್ಯನ್ ಬಿ.ಇಡ್. ಕಾಲೇಜಿನ ಪ್ರಾಂಶುಪಾಲರಾದ ಡಾ.ಗೋಲಪ್ಪ ಬಿ.ರಾಜಾಪೂರ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೋ. ಕುಪೇಂದ್ರ ಪಾಟೀಲ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಿವರಾಜ ಅಂಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿಶ್ವನಾಥ ಮಂಗಲಗಿ ರವರು ಶರಣ ಗೀತೆ ಹಾಡಿದರು, ಕುಮಾರಿ ಲಾವಣ್ಯ ಪ್ರಾರ್ಥಿಸಿದರು. ಉಪನ್ಯಾಸಕ ಅನಂತ ಶಾಯನ ಸ್ವಾಗತಿಸಿದರು. ವಿಜಯಕುಮಾರ ತೇಗಲತಿಪ್ಪಿ ವಂದಿಸಿದರು.

ಪರಿಷತ್ತಿನ ಪದಾಧಿಕಾರಿಗಳಾದ ಡಾ. ಶರಣಬಸಪ್ಪ ವಡ್ಡಣಕೇರಿ, ಪ್ರೋ. ಕೆ.ವಿಶ್ವನಾಥ, ಶಿವಕುಮಾರ ಬಿದರಿ, ಶಿವಾನಂದ ಮಠಪತಿ, ವಿನೋದಕುಮಾರ ಜನೇವರಿ, ಕಮಲಾಪೂರ ತಾಲುಕ ಘಟಕದ ಅಧ್ಯಕ್ಷರಾದ ಬಸವರಾಜ ಜನಕಟ್ಟಿ ಹಾಗೂ ಜಾಗತೀಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾದ ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ, ಆರ್.ಜಿ.ಶೆಟಗಾರ, ಬಸವರಾಜ ಮರಬದ, ಶಶಿಕಾಂತ ಪಸಾರ, ಹಣಮಂತರಾವ ಕುಸನೂರ, ಬಸವರಾಜ ಧೋಳಾಗುಂಡಿ, ಬಿ.ಎಂ.ಪಾಟೀಲ ಕಲ್ಲೂರ, ಪ್ರಭು ಪ್ರಸಾದ, ಎಸ್.ಎಚ್.ಬರಗಾಲಿ, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here