ಬಿಸಿ ಬಿಸಿ ಸುದ್ದಿ

ಲಿಂಗಾಯತ ಪ್ರಗತಿಪರ ಧರ್ಮ: ಜಯಮೃತ್ಯುಂಜಯ ಸ್ವಾಮಿ

ಕಲಬುರಗಿ: ಕಲ್ಯಾಣದ ಹೆಬ್ಬಾಗಿಲಾದ ಕಲಬುರಗಿ ಯಲ್ಲಿ ಬಸವಣ್ಣನವರನ್ನು ಹೊತ್ತುಕೊಂಡು ಬಸವ ಜಯಂತಿ ಆಚರಿಸುತ್ತಿದ್ದರು. ಆದರೆ ಜಾಗತಿಕ ಲಿಂಗಾಯತ ಮಹಾಸಭಾದವರು ಬಸವಣ್ಣನವರ ನ್ನು ಅಪ್ಪಿಕೊಂಡು ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ
ಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.

ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ಆವರಣದಲ್ಲಿ ಜರುಗುತ್ತಿರುವ ಬಸವ ಜಯಂತಿ ಕಾರ್ಯಕ್ರಮ ದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಸವಣ್ಣ ಅಂದರೆ ಕ್ರಾಂತಿ. ಕ್ರಾಂತಿ ಅಂದರೆ ಬಸವಣ್ಣ. ಬಸವ ಧರ್ಮಕ್ಕೆ ಹೊಸ ವ್ಯಾಖ್ಯಾನ ನೀಡಿದವರು. ಜಗತ್ತಿನ ಮನುಷ್ಯರಿಗೆ ಬಸವ ತತ್ವ ಅನಿವಾರ್ಯ. ಇದು ಜಾಗತಿಕ ತತ್ವ ಎಂದು ಅಭಿಪ್ರಾಯಪಟ್ಟರು.

ಲಿಂಗಾಯತ ಧರ್ಮದ ಡಿಎನ್ಎ ಪರೀಕ್ಷೆ ಮಾಡಿದರೆ ನಮ್ಮಪ್ಪ ಬಸವಣ್ಣ ಎಂಬ ಫಲಿತಾಂಶ ಬರುತ್ತದೆ. ಎಲ್ಲಿ ವೀರಶೈವವೋ ಅಲ್ಲಿ ಗೊಂದಲದ ಭಾವ. ಏಕೆಂದರೆ ಅಲ್ಲಿ ಬಸವಣ್ಣನ ಅಭಾವ ಎಂದು ರಾಮ ಜಾಧವ ಹೇಳುವುದು ನಿಜವಾದ ಮಾತಾಗಿದೆ ಎಂದು ನೇತೃತ್ವ ವಹಿಸಿದ್ದ ಕಾರವಾರದ ಮಾತೆಯವರು ನುಡಿದರು.

ಲಿಂಗಾಯತ ಕಣ, ಬಸವಣ್ಣನೇ ಮೇಟಿ. ಸ್ವಾಮೀಜಿಗಳೇ ಕಣ ತುಳಿಯುವ ಎತ್ತುಗಳು. ಆದರೆ ಈ ಎತ್ತುಗಳು ನೊಗ ಇಳಿಸಿವೆ. ಹೀಗಾಗಿ ಬಸವ ತತ್ವ ಸೊರಗಿದೆ. ಆದರೆ ಬಸವಣ್ಣನ ವಿಚಾರ ಗಳು ಸೊರಗುವುದಿಲ್ಲ ಎಂದರು.
ಲಿಂಗಾಯತ ಪ್ರಗತಿಪರ ಧರ್ಮ. ಇದ್ದ ಜಾಗವನ್ನೇ ಪವಿತ್ರ ಮಾಡಿದರು ಶರಣರು.‌ ಪೂಜೆ ಮಾಡುವ ಹಕ್ಕನ್ನು ಶರಣರು ನಮಗೆ ಕೊಟ್ಟರು. ವಚನ ಸಾಹಿತ್ಯ ನಮ್ಮ ತಾಯಿ. ಬಸವಣ್ಣ ನಮ್ಮಪ್ಪ ಎಂದು ಹೇಳಿದರು.
ಮಹಾಂತೇಶ ಕುಂಬಾರ ನಿರೂಪಿಸಿದರು. ಸಂಗಣ್ಣಗೌಡ ಗುಳ್ಯಾಳ, ಮೆಹರಾಜ್ ಪಟೇಲ್, ಸತೀಶ ಸಜ್ಜನ್ ಇತರರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

6 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

15 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

15 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago