ಬಿಸಿ ಬಿಸಿ ಸುದ್ದಿ

ದೇಶದ ಸಾಲ ಏರಿಸಿದ್ದೇ ಮೋದಿಯ ಅಚ್ಛೆ ದಿನ್:  ಸಿ.ಎಂ ಇಬ್ರಾಹಿಂ ವ್ಯಂಗ್ಯ

ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಭಾರತದ ಒಟ್ಟು ಸಾಲ 53 ಲಕ್ಷ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ 5 ವರ್ಷದಲ್ಲೇ 30 ಲಕ್ಷ ಕೋಟಿ ಆಗಿದೆ. ಈಗ ದೇಶದ ಒಟ್ಟು ಸಾಲ 83 ಲಕ್ಷ ಕೋಟಿ ಮುಟ್ಟಿದೆ ಇದು ಅಚ್ಛೇ ದಿನ್ ಎಂದು ವಿಧಾನ ಪರಿಷತ ಸದಸ್ಯ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದರು.

ಅವರು ಚಿಂಚೋಳಿ ಕ್ಷೇತ್ರದ ಕಡದೂರು ಗ್ರಾಮದಲ್ಲಿ ನಡೆದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲವಾಗಿದ್ದು ಜನರ ದಿನ ಬಳಕೆ ವಸ್ತುಗಳು, ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ.ಇದನ್ನು ಪ್ರಶ್ನೆ ಮಾಡಿದರೆ ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಾರೆ ಎಂದು ಟೀಕಿಸಿದರು.

ಮೋದಿ ಕರೆಯದೇ ಪಾಕಿಸ್ಥಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ. ಸರ್ವಜ್ಞನ‌ ವಚನದಂತೆ ಬರಿಯದೆ ಓದುವವನ ಕರೆಯದೇ ಬರುವವನ ಕರೆಯದೇ ಬರುವವನ‌.. ಮುಂದಿನ ಸಾಲು ನೀವೆ ಸೇರಿಸಿಕೊಳ್ಳಿ ಎಂದು ನುಡಿದರು. ಬಿಜೆಪಿಯವರಿಗೆ ಹಿಂದುಳಿದವರು, ಮುಸಲ್ಮಾನರು ದಲಿತರು ಬೇಕಿಲ್ಲ. ಈ ಜಾತಿಗೆ ಟಿಕೇಟ್ ಕೊಟ್ಟಿಲ್ಲ. ನಾವು ಮುಸಲ್ಮಾನರು ಮೋದಿಗೆ ಹೆದರಿಲ್ಲ ಹೆದರುವುದು ಇಲ್ಲ ನಾವು ಹಿಂದು ಮುಸಲ್ಮಾನರು ಭಾರತೀಯರ ಮಕ್ಕಳು ಒಂದೇ ಎಂದರು.

ತ್ರೇತಾಯುಗದಲ್ಲಿ ರಾವಣ‌ ಹೋದ ದ್ವಾಪರಯುಗದಲ್ಲಿ ದುರ್ಯೋಧನ ಹೋದ ಕಲಿಯುಗದಲ್ಲಿ ಮೋದಿ ಹೋಗುತ್ತಾನೆ ಎಂದು ವಿಭಿನ್ನವಾಗಿ ವ್ಯಾಖ್ಯಾನಿಸಿದರು. ವೇದಿಕೆಯ ಮೇಲೆ ಮಾಜಿ‌ ಸಿಎಂ ಹಾಗೂ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಸಂಸದರಾದ ಹಾಗೂ ಕಾಂಗ್ರೇಸ್ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ,  ಎಂಎಲ್ ಸಿಗಳಾದ ಸಿಎಂ ಇಬ್ರಾಹಿಂ, ಶರಣಪ್ಪ  ಮಟ್ಟೂರು, ಶಾಸಕರಾದ ಅಮರೇಗೌಡ ಭಯ್ಯಾಪುರ, ನಾರಾಯಣರಾವ್, ತಿಪ್ಪಣ್ಣಪ್ಪ ಕಮಕನೂರು, ಭೀಮಣ್ಣ ಸಾಲಿ, ರಾಜೇಶ್ ಗುತ್ತೇದಾರ ಸೇರಿದಂತೆ ಮತ್ತಿತರರು ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

4 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

6 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

13 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

13 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

14 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago