ಇಎಂಐ ರೀಯಾಯಿತಿ, ರಿಪೋ ದರ ಇಳಿಕೆಯಿಂದ ಅನುಕೂಲ : ಅಂಬಾರಾಯ ಅಷ್ಠಗಿ

0
137

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕೊರೊನಾ ವೈರಸ್ ಭೀತಿಯಲ್ಲಿರುವ ಜನಸಾಮಾನ್ಯರಿಗೆ 17000 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಹಾಗೂ ಎಲ್ಲಾ ಬ್ಯಾಂಕ್ ಗಳ ಸಾಲದ ಇಎಂಐ ರಿಯಾಯಿತಿ ಮತ್ತು ರಿಪೋ ದರದಲ್ಲಿ ಕಡಿತ ಮಾಡಿರುವುದರಿಂದ ಜನಸಾಮಾನ್ಯರಿಗೆ ತುಂಬಾ ಅನುಕೂಲವಾಗಲಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆದ ಅಂಬಾರಾಯ ಅಷ್ಠಗಿ ಹೇಳಿದ್ದಾರೆ

ಕಿಸಾನ್ ಸಮ್ಮಾನ ಯೋಜನೆಯಡಿ 8.69 ಕೋಟಿ ರೈತರಿಗೆ 2000 ತಕ್ಷಣ ಖಾತೆಗೆ ಜಮೆ,ಸುಮಾರು 5 ಕೋಟಿ ವೃದ್ಧರು,ವಿಧವೆಯರು ಅಂಗವಿಕಲರಿಗೆ ಮುಂದಿನ 3 ತಿಂಗಳು 1000 ರೂ ಜಮೆ, ಎಲ್ಲಾ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮುಂದಿನ 3 ತಿಂಗಳ ಉಚಿತವಾಗಿ ಗ್ಯಾಸ್ ವಿತರಣೆ,ಸ್ವಸಹಾಯ ಸಂಘಗಳಿಗೆ ನೆರವು. ತುರ್ತು ಸೇವೆದಾರರಿಗೆ 50 ಲಕ್ಷ ನೆರವು. ಬಡವರಿಗೆ ಉಚಿತ ಪಡಿತರ ವಿತರಣೆ. ವೈದ್ಯರು, ನರ್ಸ್, ಆಶಾ ಕಾರ್ಯಕರ್ತರಿಗೆ, ಪೌರ ಕಾರ್ಮಿಕರಿಗೆ ವಿಮೆ ಯೋಜನೆ. ಮನ್ರೆಗಾ ಕೂಲಿ ಕಾರ್ಮಿಕರಿಗೆ ಸಹಾಯಧನದ ಹೆಚ್ಚಳ.

Contact Your\'s Advertisement; 9902492681

ಅಲ್ಲದೆ ಕೊರೊನಾ ವೈರಸ್‌ನಿಂದ ಹದಗೆಡುತ್ತಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಆರ್.ಬಿ.ಐ ಮೂರು ತಿಂಗಳ ಇ.ಎಂ.ಐ, ರೆಪೋ, ರಿವರ್ಸ್ ರೆಪೋ ದರವನ್ನು ಕಡಿತಗೊಳಿಸುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಸ್ವಾಗತಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮನೆಯಲ್ಲಿಯೇ ಉಳಿದು ಕೊರೊನಾ ವೈರಸ್ ನಿರ್ಮೂಲನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here