ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಪೂನಾ ಮಹಾರಾಷ್ಟ್ರ ಮತ್ತು ಬೆಂಗಳೂರು ಮತ್ತಿತರೆಡೆಗೆ ಗುಳೆ ಹೋಗಿ ಮರಳಿ ಗ್ರಾಮಕ್ಕೆ ಬಂದವರಲ್ಲಿ ಕೊರೊನಾ ಸೊಂಕಿನ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ,ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ಗ್ರಾಮದಲ್ಲಿ ಅಭಿಯಾನ ನಡೆಸಿ ಜಾಗೃತಿ ಮೂಡಿಸಲಾಯಿತು.
ಗ್ರಾಮದಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ,ದೇಶದಲ್ಲಿ ಈಗಾಗಲೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.ಆದ್ದರಿಂದ ಯಾರೂ ಮನೆಗಳಿಂದ ಹೊರಗೆ ಬರಬೇಡಿ,ಕಿರಾಣಿ ತರಕಾರಿ ತರಲು ಕೇವಲ ಒಬ್ಬರು ಮಾತ್ರ ಬಂದು ಹೋಗಿ,ಮನೆಯಲ್ಲಿದ್ದರು ಆಗಾಗ ಕೈಗಳನ್ನು ತೊಳೆಯುತ್ತಿರಿ,ಹೊರಗೆ ಬರುವವರು ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಕಟ್ಟಿಕೊಳ್ಳುವಂತೆ ತಿಳಿಸಿದರು.
ಪೂನಾ ಗೋವಾ ಮತ್ತು ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಮರಳಿ ಬಂದವರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಅದಕ್ಕು ಮೊದಲು ತಾವೆಲ್ಲರು ಮನೆಯಲ್ಲಿ ಪ್ರತ್ಯೋಕವಾಗಿರುವಂತೆ ತಿಳಿಸಿದರು.ಕೊರೊನಾ ಎಂಬುದು ಸಾಂಕ್ರಾಮಿಕ ರೋಗವಾಗಿದ್ದು ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುವುದರಿಂದ ಅಂತರ ಕಾಯ್ದುಕೊಳ್ಳಲು ತಿಳಿಸಿದರು.
ಗ್ರಾಮದಲ್ಲಿ ನಡೆದ ಅಭಿಯಾನದಲ್ಲಿ ಪಂಚಾಯತಿ ಉಪಾಧ್ಯಕ್ಷ ಹಣಮಂತ್ರಾಯ ನಾಯಕ,ಪಿಡಿಒ ಬಸವರಾಜ ರಾಮದುರ್ಗ,ಕಾರ್ಯದರ್ಶಿ ಮುನವರ ಪಾಷಾ,ಬೀಟ್ ಪೊಲೀಸ್ ಪೇದೆ ರವಿ ರಾಠೋಡ,ಆರೋಗ್ಯ ಇಲಾಖೆಯ ಕಿರಿಯ ಸಹಾಯಕ ನಿಂಗಯ್ಯ ಸ್ವಾಮಿ,ಶರಣು,ಮಲ್ಲು ಗ್ರಾ.ಪಂ ಸದಸ್ಯ ಮಾಸುಮಸಾಬ ತಿಂಥಣಿ ಮುಖಂಡರಾದ ರಾಜಾ ವೆಂಕಟಪ್ಪ ನಾಯಕ ಜಾಗಿರದಾರ, ಬೀರಪ್ಪ ಕರಿಕುರಿ,ನಾಗರಡ್ಡಿ ಕಾಮತ್,ಮಲ್ಲಿಕಾರ್ಜುನ ಕಟ್ಟಿಮನಿ,ಅಂಬ್ರೇಶ ಮರಾಠ.ನಾಗಪ್ಪ ಬಳಿಗಾರ,ಬಸವರಾಜ ಹಡಪದ ಹಾಗು ಪಂಚಾಯತ್ ಕಂಪ್ಯೂಟರ್ ಆಪರೇಟರ್ ಕರೀಂ ಸಾಬ್ ಹಾಗು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿದ್ದರು.