ಕೇಂದ್ರೀಯ ವಿವಿಯ ಅಧ್ಯಾಪಕರಿಂದ ಆನ್‌ಲೈನ್ ಬೋಧನೆ, ಮೌಲ್ಯಮಾಪನ ಕಾರ್ಯ

1
360

ಕಲಬುರಗಿ: ಇಲ್ಲಿನ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಕೋವಿಡ್ -೧೯ ಮುನ್ನೆಚ್ಚರಿಕೆಗಳಿಂದಾಗಿ ತರಗತಿಯನ್ನು ಈಗಾಗಲೇ ಮುಚ್ಚಿದ್ದರಿಂದ ಬೋಧನಾ ವಿಭಾಗವು ಆನ್ ಲೈನ್ ಶೈಕ್ಷಣಿಕ ಬೋಧನೆ ಮತ್ತು ಮೌಲ್ಯಮಾಪನ ಕಾರ್ಯಕ್ರಮವನ್ನು ಕೈಗೊಂಡಿದೆ ಎಂದು ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯ ಸಂಪರ್ಕ ಅಧಿಕಾರಿ ದೀಪ್ತಿ ಅವರು ತಿಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣದ ಬಗ್ಗೆ ವಿಶ್ವವಿದ್ಯಾನಿಲಯವು ವಿಶೇಷ ಕಾಳಜಿ ವಹಿಸುತ್ತಿರುವುದರಿಂದ ವಿಶ್ವವಿದ್ಯಾಲಯದ ಪ್ರತಿಯೊಂದು ನಿಖಾಯವು ಇ-ವಿಷಯ, ಅಧ್ಯಯನ ಸಾಮಗ್ರಿಗಳು, ವಿಡಿಯೋ ತುಣುಕುಗಳು ಮತ್ತು ಪಿಪಿಟಿ ಪ್ರಸ್ತುತಿಗಳಗಳನ್ನು ಫಾರ್ವರ್ಡ್ ಮಾಡಲು ವಿದ್ಯಾರ್ಥಿಗಳೊಂದಿಗೆ ನೇರಆನ್‌ಲೈನ್‌ತರಗತಿ ಸಂಪರ್ಕವನ್ನು ಮಾಡಿದೆ. ಅನುಮಾನಗಳು ಮತ್ತು ಕಾರ್ಯಯೋಜನೆಗಳು, ಟ್ಯುಟೋರಿಯಲ್ ಇತ್ಯಾದಿಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತರಗತಿಯ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

Contact Your\'s Advertisement; 9902492681

ಆಂತರಿಕ ಮೌಲ್ಯಮಾಪನವನ್ನುಆನ್‌ಲೈನ್ ಪರೀಕ್ಷೆಗಳು ಮತ್ತು ವೈವಾ, ರಸಪ್ರಶ್ನೆ ಇತ್ಯಾದಿಗಳ ಮೂಲಕವೂ ನಡೆಸಲಾಗುತ್ತದೆ. ಎಂಎಚ್‌ಆರ್‌ಡಿಯಎನ್‌ಪಿಟೆಲ್‌ಆನ್‌ಲೈನ್ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಸಿಯುಕೆ ಈಗಾಗಲೇ ಉನ್ನತ ಸ್ಥಾನದಲ್ಲಿದೆ.

ಸಿಯುಕೆ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮತ್ತುಅವರು  ಮನೆಯಲ್ಲಿದ್ದರೂ ಸಹ ಅವರನ್ನುಕಲಿಕೆಯಕ್ರಮದಲ್ಲಿಡಲು ಉಳಿದ ಪಠ್ಯಕ್ರಮದಆಧಾರದ ಮೇಲೆ ಇ-ಕಂಟೆಂಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.ಶಿಕ್ಷಕರು ವಾಟ್ಸಾಪ್ ಗುಂಪುಗಳನ್ನು ಮತ್ತು ನಿಯೋಜನೆಗಳ ಸಲ್ಲಿಕೆ ಮತ್ತುಡಿಜಿಟಲ್ ಸಂವಹನಕ್ಕಾಗಿ ಗೂಗಲ್‌ತರಗತಿಯ ಖಾತೆಗಳನ್ನು ರಚಿಸಿದ್ದಾರೆ.

ವಿಶ್ವವಿದ್ಯಾಲಯದ ಅಧಿಕಾರಿಗಳು, ಮುಖ್ಯಸ್ಥರು ಮತ್ತುಡೀನರುಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳಿಗೆ ಸಮಸ್ಯೆಯಾಗದಂತೆಅವರನ್ನು ಮುಖ್ಯವಾಹಿನಿಯಲ್ಲಿಡಲುಕೊನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಕೋವಿಡ್ -೧೯ ವೈರಸ್ ಹರಡುವುದರಿಂದ ಕಾಪಾಡಿಕೊಳ್ಳಲು ತರಗತಿಗಳಿಗೆ ಬಿಡುವು ನೀಡಿರುವ ವಿಶ್ವವಿದ್ಯಾಲಯವು ಶೈಕ್ಷಣಿಕ ನಷ್ಟವನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here