ನಗರಸಭೆಯಿಂದ ಕ್ರಿಮಿನಾಶಕ ಔಷಧಿ ಸಿಂಪರಣೆ

0
67

ಶಹಾಬಾದ: ಕೊರೊನಾ ವೈರಸ್ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯಿಂದ ನಗರದ ಎಲ್ಲಾ ವ್ಯಾಪ್ತಿಯಲ್ಲಿ ಕ್ರಿಮಿನಾಶಕ ಔಷಧಿ ಸಿಂಪರಣೆ ಕಾರ್ಯ ನಡೆದಿದೆ.

ಯಾವುದೇ ಕಾರಣಕ್ಕೂ ನಗರದಲ್ಲಿ ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ನಗರ ವ್ಯಾಪ್ತಿಯ ವಾರ್ಡಗಳಲ್ಲಿ ಕಂಡು ಬರುವ ಕಸವನ್ನು ವಿಲೇವಾರಿ ಮಾಡಿ, ಬ್ಲಿಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ. ನಗರಸಭೆಯ ಪ್ರತಿಯೊಂದು ವಾರ್ಡನ ಸದಸ್ಯರ ಜತೆಗೂಡಿ, ಅವರ ಸಲಹೆ ಮೇರೆಗೆ ಚರಂಡಿ ಸ್ವಚ್ಛತೆ ಹಾಗೂ ಔಷಧಿ ಸಿಂಪರಣೆ ಕಾರ್ಯ ಭರದಿಂದ ಸಾಗುತ್ತಿದೆ. ಮೊದಮೊದಲು ಮೂರು ಬ್ಯಾಟರಿ ಪಾವರ್ ಸ್ಪ್ರೇ ಮೂಲಕ ಸಿಂಪರಣೆ ಮಾಡಲಾಗುತ್ತಿತ್ತು.

Contact Your\'s Advertisement; 9902492681

ನಗರಸಭೆಯಿಂದ ಸ್ವಚ್ಛತೆ ಹಾಗೂ ಕ್ರಿಮಿನಾಶಕ ಸಿಂಪರಣೆ ಕಾರ್ಯ ಭರದಿಂದ ನಡೆಯುತ್ತಿದೆ. ಕೊರೊನಾ ವೈರಸ್ ತಡೆಗಟ್ಟಲು ಇದೊಂದೇ ಪರಿಹಾರವಲ್ಲ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಅನಾವಶ್ಯವಾಗಿ ಹೊರಗೆ ಬರದೇ ಮನೆಯಲ್ಲಿರುವುದೇ ಈ ರೋಗಕ್ಕೆ ಮದ್ದು ಎಂಬುದನ್ನು ತಿಳಿದುಕೊಳ್ಳಬೇಕು.  – ವೆಂಕಟೇಶ ಪೌರಾಯುಕ್ತ ನಗರಸಭೆ ಶಹಾಬಾದ.

ಇದರಿಂದ ಒಂದು ದಿನಕ್ಕೆ ಒಂದೆರಡು ಬಡಾವಣೆ ಮಾತ್ರ ಸಿಂಪರಣೆಯಾಗುತ್ತಿತ್ತು. ಇದರಿಂದ ೨೭ ವಾರ್ಡಗಳಿ ಯಾವಾದ ಔಷಧ ಸಿಂಪರಣೆಯಾಗಬೇಕೆಂದು ಸಾರ್ವಜನಿಕರು, ಮುಖಂಡರು ಪ್ರಶ್ನೆ ಮಾಡಿದರು.ಇದರಿಂದ ಎಚ್ಚೆತ್ತುಕೊಂಡ ನಗರಸಭೆಯ ಅಧಿಕಾರಿಗಳು ಎರಡು ಟ್ರ್ಯಾಕ್ಟರ್ ಸ್ಪ್ರೇ ವಾಹನಗಳನ್ನು ತಂದು ಅದರಿಂದ ಔಷಧ ಸಿಂಪರಣೆ ಬಹಳ ವೇಗವಾಗಿ ಮಾಡಲಾಗುತ್ತಿದೆ. ಟ್ರ್ಯಾಕ್ಟರ್ ಎರಡು ಬದಿಯಲ್ಲಿ ಸುಮಾರು ನಾಲ್ಕು ನಾಜಲ್‌ಗಳನ್ನು ಅಳವಡಿಸಿ ಸ್ಪ್ರೇ ಇದಾಗಿದ್ದು, ರಸ್ತೆಯ ಮೇಲೆ ಹೋಗುವಾಗ ಎಲ್ಲಾ ಕಡೆ ಹರಡುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವಾಗುತ್ತಿರುವುದು ಕಂಡು ಬಂದಿದೆ.ಇದರಿಂದ ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲದೇ ಔಷಧ ಸಿಂಪರಣೆ ಹಾಗೂ ಸ್ವಚ್ಛತೆ ಕಾರ್ಯ ಎಡಬಿಡದೇ ಸುಮಾರು ಒಂದು ತಿಂಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಆರೋಗ್ಯ ನೀರಿಕ್ಷಕ ಶಿವರಾಜಕುಮಾರ ಉದಯವಾಣಿಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here