ಹಳ್ಳಿಹಳ್ಳಿಯಲ್ಲಿ ಸ್ವಯಂ ಸೇವಕರಿಂದ ಜಾಗೃತಿ

0
136

ಶಹಾಬಾದ: ನಗರದ ಎಸ್.ಎಸ್.ಮರಗೋಳ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸುಮಾರು ೩೦ ವಿದ್ಯಾರ್ಥಿಗಳು ಕರೋನಾ ವಿರುದ್ದ ಹೋರಾಟಕ್ಕೆ ಸ್ವಯಂ ಸೇವಕರಾಗಿ ಹಳ್ಳಿಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಲೂಕ ತಹಶೀಲ್ದಾರ ಸುರೇಶ ವರ್ಮಾ ಅವರ ಮನವಿಯ ಮೇರೆಗೆ ಈ ಸ್ವಯಂ ಸೇವಕರು ಬೆಳಗ್ಗೆ ೯ ಗಂಟೆಯಿಂದ ಸಂಜೆಯವರೆಗೆ ಶಹಾಬಾದ್ ತಾಲೂಕಿನ ವ್ಯಾಪ್ತಿಯ ಗ್ರಾಮಗಳಿಗೆ ಹೋಗಿ ಗ್ರಾಮಸ್ಥರಲ್ಲಿ ಕರೋನಾ ಕುರಿತು ಮಾಹಿತಿ ನೀಡುವದಲ್ಲದೆ, ಗುಂಪುಗೂಡಿದ್ದವರನ್ನು ಮನೆಯೊಳಗೆ ಕಳುಹಿಸುವ ಕೆಲಸ ಮಾಡುತ್ತಿದ್ದಾರೆ, ಅನಾವಶ್ಯಕವಾಗಿ ಹೊರಗೆ ತಿರುಗಾಡದಂತೆ ಎಚ್ಚರಿಕೆ ನೀಡುವದು, ಗ್ರಾಮದ ಸ್ವಚ್ಚತೆ ಕಾಪಾಡುವದು, ಗ್ರಾಮದಲ್ಲಿ ಹೊರಗಿನವರು, ಹೊರ ರಾಜ್ಯ, ಹೊರ ದೇಶದಿಂದ ಬಂದವರ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡುವದಲ್ಲದೆ, ತಾತ್ಕಾಲಿಕವಾಗಿ ಗ್ರಾಮದಲ್ಲಿ ಮದುವೆ, ಸಮಾರಂಭ, ಜಾತ್ರೆಗಳನ್ನು ಮಾಡದಂತೆ ತಡೆಯುವ ಕೆಲಸ ಮಾಡುತ್ತಿದ್ದಾರೆ.

Contact Your\'s Advertisement; 9902492681

ಸ್ವಯಂ ಸೇವಕರ ಸೇವೆಯಿಂದ ಪ್ರೇರಿತರಾದ ನಗರದ ಉದ್ಯಮಿ ನರೇಂದ್ರ ವರ್ಮಾ ಅವರು ಎಲ್ಲ ವಿದ್ಯಾರ್ಥಿಗಳಿಗೆ ಬಿಳಿ ಬಣ್ಣದ ಟಿಶರ್ಟ ನೀಡಿದ್ದು, ತಹಶೀಲ್ದಾರರು ಟೋಪಿ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಅವರು ಸ್ವಯಂ ಸೇವಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿದ್ದು, ಶಾಸಕ ಬಸವರಾಜ ಮತ್ತಿಮುಡ ಅವರು ಸ್ವಯಂ ಸೇವರ ವಾಹನಗಳಿಗೆ ಡಿಸೇಲ್ ವ್ಯವಸ್ಥೆ ಕಲ್ಪಿಸಿದ್ದಾರೆ. ನಗರದ ಅನೇಕ ಗಣ್ಯರು ವಿದ್ಯಾರ್ಥಿಗಳ ಸೇವೆಗೆ ಸ್ಪಂದಿಸಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here