- ಸಾಜಿದ್ ಅಲಿ
ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್ ನಂ. 51 ವೆಂಕಟೇಶ ನಗರ ಬಡಾವಣೆಯ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಬಡಾವಣೆ ಮುಖ್ಯ ರಸ್ತೆಯನ್ನು ಬ್ಯಾರಕೇಡ ಮತ್ತು ಹಗ್ಗ ಕಟ್ಟುವ ಮೂಲಕ ಒಳಗಡೆ ಪ್ರವೇಶಿಸುವುದು ಮತ್ತು ಹೊರಗಡೆ ಹೋಗುವುದು ಸಂಪೂರ್ಣ ಬಂದ್ ಮಾಡಿ, ನೂಗ್ಗದ ರೀತಿಯಲ್ಲಿ ಕಾವಲು ನಡೆಸುವ ಮೂಲಕ ಮುನ್ನೆಚರಿಕೆ ಸ್ವಯಂ ಪ್ರೇರಿತವಾಗಿ ಬಂಧನಕ್ಕೊಳಗಾಗಿದ್ದಾರೆ.
ವಿಶ್ವವನ್ನೇ ಕೊರೋನಾ ಮಹಾಮಾರಿ ವೈರಸ್ ಕಾಡುತ್ತಿದ್ದು, ದೇಶದಲ್ಲಿ ಸುಮಾರು 20 ಜನ ವೈರಸ್ ಗೆ ತುತ್ತಾಗಿದ್ದು 800ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿ ರಾಜ್ಯ ಮೂರನೇ ಸ್ಟೇಜ್ ನಲ್ಲಿ ಇದೆ. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಜಿಲ್ಲಾಡಳಿತ ಕೂಡ ಸೆಕ್ಷನ್ 144 ಜಾರಿಗೊಳಿಸಿ ಮನೆಯಿಂದ ಯಾರು ಹೊರಗಡೆ ಬಾರದೆಂದು ಮನವಿ ಮಾಡಿತ್ತಿದ್ದು, ಅಗತ್ಯ ವಸ್ತುಗಳ ಪೂರೈಕೆಗೂ ಸಹ ಕ್ರಮ ಕೈಗೊಳಲಾಗುತ್ತಿದೆ.
ವೆಂಕಟೇಶ ನಗರ ಕಾಲೋನಿಯ ನಿವಾಸಿಗಳು ಸಹ ಅಗತ್ಯ ವಸ್ತುಗಳಲಾದ ಔಷಧಿ, ಆಸ್ಪತ್ರೆ, ಸೇರಿದಂತೆ ತೀರ ಅಗತ್ಯ ವಸ್ತುಗಳು ಖರೀದಿಗೆ ಮಾತ್ರ ಮನೆಯಿಂದ ಹೊರಗೆ ಬರುದು ಹೊರತು ಪಡಿಸಿ, ಅನಗತ್ಯ ಓಡಾಡುವುದು ನಿರ್ಭಂದಿಸಲಾಗಿದೆ ಎಂದು ಸೂಚನೆಗಳು ನೀಡುವ ಮೂಲಕ ಬಡಾವಣೆಯಲ್ಲಿ ಸ್ವಯಂಪ್ರೇರತವಾಗಿ ಕೋವಿಡ್-19 ತಡೆಯ ಸ್ವಯಂ ಸೇವ ತಂಡವನ್ನು ರಚಿಸಿ ಕಾರ್ಯನಿರ್ವಹಿಸತೊಡಗಿದ್ದಾರೆ.
ಈಗಾಗಲೇ ಕೊರೋನಾ ಹರಡದಂತೆ ವಾರ್ಡ್ ನಲ್ಲಿ ಎರಡು-ಮೂರು ಬಾರಿ ಔಷಧಿ ಸಂಪರಣೆ ಮಾಡಲಾಗಿದೆ. ಸಾಮಾಜಿಕ ಅಂತರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಪಾಲಿಕೆ ವಾರ್ಡ್ ನಿವಾಸಿ ಓರ್ವರು ಇ-ಮೀಡಿಯಾ ಲೈನ್ ಜೊತೆ ಮಾತನಾಡಿ ಮಾಹಿತಿ ನೀಡಿದ್ದಾರೆ.