ಒಂದು ವರ್ಷದಿಂದ ದಣಿವರೆಯದೇ ಪ್ರತಿದಿನ ಪ್ರತಿ ಕ್ಷಣದಲ್ಲಿ ಆನ್ ಲೈನ್ ನಿಂದ ಕೈಯಲ್ಲಿ ಬಿಸಿಬಿಸಿ ಸುದ್ದಿಯನ್ನು ನೀಡುವ ಪ್ರಸಿದ್ದ ಆನ್ ಲೈನ್ ಮಾಧ್ಯಮವೆಂದರೆ ಅದು ಇ ಮೀಡಿಯಾ ಲೈನ್ ಇಂದಿಗೆ ಪ್ರಥಮ ಹುಟ್ಟು ಹಬ್ಬಕ್ಕೆ ಕಾಲಿಟ್ಟದೆ.
ನನಗೆ ಇ ಮೀಡಿಯಾ ಲೈನ್ ಮಾಧ್ಯಮ ವು ಹೋರಾಟದ ಹಾದಿ ಎಂಬ ಕಾಲಂನಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟ ಗೌರವಾನ್ವಿತ ಸಂಪಾದಕರಾದ ಆತ್ಮೀಯ ರಾದ ಶಿವರಂಜನ್ ಸತ್ಯಂ ಪೇಟ ಸರ್ ಹಾಗೂ ನನ್ನ ಮಿತ್ರರಾದ ವರದಿಗಾರ ಸಾಜಿದ್ ಅಲಿ ರವರಿಗೆ ಹಾಗೂ ಪತ್ರಿಕೆಗೆ ಯಶಸ್ವಿಯಾಗಿ ಹಗಲಿರಳು ಸದಾ ಶ್ರಮಿಸುತ್ತಿರುವ ಸಿಬ್ಬಂದಿಯ ಬಳಗಕ್ಕೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇನೆ.
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಬದಲಾಗಿ ಜನರ ಆಸೆಯ ಮನಗಂಡು ಈ ಪತ್ರಿಕೆ ಪ್ರಾರಂಭಿಸಿ, ವರ್ಷದ ಅವಧಿಯಲ್ಲಿ ಲಕ್ಷಾಂತರ ಓದುಗರನ್ನು ಸೃಷ್ಟಿಸಿದ ಯಶಸ್ವಿ ಹಾದಿಯಲ್ಲಿ ಮುಂದುವರೆಯುತ್ತಿರುವ ಅಧ್ಬುತವಾಗಿ ಬೆಳೆದ ಕೀರ್ತಿ ಈ ಪತ್ರಿಕೆಗೆ ಮಾತ್ರ ಸಲ್ಲುತ್ತದೆ.
ರಾಜಕೀಯ, ಶೈಕ್ಷಣಿಕ,ಆರ್ಥಿಕ ಮತ್ತು ಸ್ಥಳೀಯ ಸುದ್ದಿ ಹೀಗೆ ಹಲವಾರು ಪ್ರಚಲಿತ ವಿದ್ಯಮಾನಗಳನ್ನು ಎಲ್ಲಾ ಕ್ಷೇತ್ರದ ವಿಷಯಗಳನ್ನು ಹೊತ್ತು ತಂದು ರಾಜೀಯಿಲ್ಲದೇ ವಿವಿಧ ಧಿಕ್ಕಿನಿಂದ ನಿಖರವಾದ ಸುದ್ದಿ, ವರದಿ ತಿಳಿಸಲು ಮುಂದಾಗಿರುವದು ಅತ್ಯಂತ ಸಂತೋಷವೆಸುತ್ತದೆ.
ಈ ಭಾಗದ ಮೆಚ್ಚುಗೆ ಪಡೆದ ಪತ್ರಿಕೆಯಿದು, ಇನ್ನೂ ಹೆಚ್ಚು ಓದುಗ ಅಭಿಮಾನಿಗಳ ಮನಸ್ಸು ಮುಟ್ಟುವುದರ ಜೊತೆಗೆ ಪತ್ರಿಕೆಯ ಗುರಿ,ಉದ್ದೇಶ ಸಾಧಿಸಿ ಉನ್ನತ ಹಂತಕ್ಕೆ ಮುಟ್ಟಲಿ ಎಂಬುದು ನನ್ನ ಆಶಯ.
-ಭೀಮಾಶಂಕರ ಪಾಣೇಗಾಂವ್, ಸಾಮಾಜಿಕ ಹೋರಾಟಗಾರರು, ಅಂಕಣಕಾರರು, ಕಲಬುರಗಿ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…