ಕಲಬುರಗಿ: ತಾಯಿಯ ಜೀವ ದೇವರು ನೀಡಿದ ಕೊಡುಗೆಯಾಗಿದೆ ನವ ಮಾಸಗಳನ್ನು ಹೊತ್ತು, ಹೆತ್ತು, ಕೈ ತತ್ತು ನೀಡಿ ಮಮತೆಯ ಮಡಿಲಲ್ಲಿ ವಾತ್ಸಲ್ಯದ ಹೊಳೆ ಹರಿಸುವವಳು ತಾಯಿ ಜನನಿಯಯಾಗಿ, ಗುರುವಾಗಿ, ಆರಾದ್ಯ ದೈವವಾಗಿ ಕಷ್ಟಗಳನ್ನು ಸಹಿಸಿ ಬದುಕನ್ನು ದಹಿಸಿ ತನ್ನ ಕುಟುಂಬದ ಏಳ್ಗೆಗಾಗಿ ಕಪೂರವಾಗಿ ಬೆಳಗುವಳು ತಾಯಿ ಎಂದು ಎನ್ನುತ್ತಾ ೧೯೦೮ರಲ್ಲಿ ಅನ್ನಾ ರ್ಜಾವೀಸ್‌ನಿಂದ ಪ್ರಾರಂಭವಾದ ತಾಯಂದಿರ ದಿನಾಚರಣೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ನಮ್ಮನ್ನು ಪೊರೆದ ತಾಯಿಯನ್ನು ಸ್ಮರಿಸಲು ಇದೊಂದು ಸುವರ್ಣ ದಿನವಾದರು ಪ್ರತಿದಿನ ತಾಯಂದಿರನ್ನು ಸ್ಮರಿಸಿಕೊಂಡು, ಜೀವನದ್ದೂದಕ್ಕು ತಾಯಿಯ ಋಣ ತೀರಸಲಾಗುವುದಿಲ್ಲ ಎಂದು ಜೆ.ಟಿ.ಎಸ್. ಕಾಲೇಜಿನ ಉಪನ್ಯಾಸಕಿ ಡಾ. ಗೀರಿಮಲ್ಲ ಅವರು ಹೇಳಿರು.
ನಗರದ ಚಂದ್ರಶೇಖರ ಬಿಲಗುಂದಿ ವ್ರತ್ತದ ಹತ್ತಿವಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕ ವತಿಯಿಂದ ಹಮ್ಮಿಕೊಂಡು ವಿಶ್ವ ತಾಯಂದಿರ ದಿನ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತೃ ಹೃದಯ ಕುರಿತು ಮಾತನಾಡಿದರು.
ಕೆಟ್ಟ ತಂದೆ ಹುಟ್ಟಬಹುದು ಕೆಟ್ಟ ತಾಯಿ ಹುಟ್ಟಲಾರಳು ಎಂಬ ಶಂಕರಾಚ್ಯರರ ಮಾತಿನಂತೆ ವರ್ಷದ 365 ದಿನಗಳು ಮಕ್ಕಳ ಬಗ್ಗೆ ಚಿಂತಿಸುವ ಮಾತೃ ಹೃದಯಕ್ಕೆ ನೆನೆಸಿ ಹಾರೈಸುವದಕ್ಕೆ ಮೇ 12 ತಾಯಂದಿರ ದಿನ ತಾಯಿ ಹಾಗೂ ತಾಯಿತನ ಗೌರವಿಸುವ ಸಾಂಕೇತಿಕ ದಿನವಾಗದೆ ನಾವು ದಿನಾಲು ತಂದೆ-ತಾಯಿಯರ ಸೇವೆ ಮಾಡುವ ಸಂಸ್ಕ್ರತಿ ನಮ್ಮದಾಗಬೇಕೆಂಬ ಮಹಾದಾಸೆಯಿಂದ ವಿಶ್ವ ತಾಯಂದಿರ ದಿನ ಹಮ್ಮಿಕೊಳ್ಳಲಾಗಿದೆಯೆಂದು ಕಾರ್ಯಕ್ರದ ಅದ್ಯೆಕ್ಷತೆ ವಹಿಸಿದ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಲ್ಕಿಯ ನ್ಯಾಯವಾದಿಳಾದ ಬಸವರಾಜ ಖೂಬಾ ಆಗಮಿಸಿದರು. ಶ್ರೀಮಂತರಾವ ರಾಜಾಪೂರ, ಸುದರ್ಶನ ರಾಜಾಪೂರ, ಸುಮಿತ್ರಾ ರಾಜಾಪೂರ ನ್ಯಾಯವಾದಿ ವಿನೋದಕುಮಾರ ಜನೆವರಿ, ಸಿದ್ದಾರಾಮ ಹಂಚಿನಾಳ, ಶಿವರಾಜ ಅಂಡಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.