ಸುರಪುರ: ನಗರದ ಆರೋಗ್ಯ ಕೇಂದ್ರದಲ್ಲಿ ತೆರೆಯಲಾದ ಫೀವರ್ ಸೆಂಟರ್‌ಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳು ಆಗಮಿಸಿದಾಗ ಫಿವರ್ ಪರೀಕ್ಷೆಗೆ ಬಂದಿದ್ದ ಜನರು ಸಾಮಾಜಿ ಅಂತರವನ್ನು ಕಾಯದೆ ಗುಂಪಾಗಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ನಂತರ ಅಧಿಕಾರಿಗಳೊಂದಿಗೆ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗ,ಅದರ ತಪಾಸಣೆಗೆ ಬಂದವರು ಹೀಗೆ ಗುಂಪಾಗಿ ನಿಲ್ಲುವುದನ್ನು ನೀವೆಲ್ಲ ಗಮನಿಸದೆ ಏನು ಮಾಡುತ್ತಿರುವಿರಿ,ಇವರಿಗೆಲ್ಲ ಹೆರಗಡೆಯಿಂದ ಬಂದು ಊಟ ಕೊಡಲು ಯಾಕೆ ಬಿಟ್ಟಿರುವಿರಿ,ಇನ್ನೊಮ್ಮೆ ಯಾರೂ ಹೊರಗಡೆಯಿಂದ ಊಟ ತಂದು ಕೊಡುವುದನ್ನು ನಿರ್ಬಂಧಿಸುವಂತೆ ಖಡಕ್ ಸೂಚನೆ ನೀಡಿದರು.
ನಂತರ ತಪಾಸಣೆಗೆ ಬಂದವರು ಹೋಗಲು ಒಂದು ದ್ವಾರ ಮತ್ತು ಹೊರಗಡೆ ಬರಲು ಒಂದು ದ್ವಾರ ನಿರ್ಮಿಸಿ ಹಾಗು ಟಿಹೆಚ್‌ಒ ಕಚೇರಿಗೆ ಹೋಗಲು ಪ್ರತ್ಯೇಕ ದ್ವಾರ ಮಾಡಲು ಸೂಚಿಸಿದರು.ನಂತರ ಟಿಹೆಚ್‌ಒ ಕಚೇರಿಗೆ ತೆರಳಿ ತಾಲೂಕಿನಲ್ಲಿ ಇದುವರೆಗೆ ತಪಾಸಣೆಗೊಳಪಟ್ಟವರ ಕುರಿತು ಮಾಹಿತಿ ಪಡೆದು ತೆರಳಿದರು.
ಈ ಸಂದರ್ಭದಲ್ಲಿ ಕಲಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ನಳಿನ್ ಕುಮಾರ ಅತುಲ್, ಜಿ.ಪಂ.ಸಿಇಒ ಶಿಲ್ಪಾ ಶರ್ಮಾ,ತಹಸೀಲ್ದಾರ ನಿಂಗಣ್ಣ ಬಿರಾದಾರ್,ತಾ.ಪಂ ಇಒ ಅಂಬ್ರೇಶ,ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…