ಬಿಸಿ ಬಿಸಿ ಸುದ್ದಿ

ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಮಹಾಯೋಧರಿಗೆ ಸಲಾಂ: ಮಹಿಬೂಬ ಪಟೇಲ

ಆಳಂದ: ಕೊರೋನಾ ಮಹಾಮಾರಿಯಿಂದ ಗಡಿಯಲ್ಲಿ ಯೋಧರ ರೀತಿಯಲ್ಲಿ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿರುವ ಪೋಲಿಸ್ ಸಿಬ್ಬಂದಿಗಳು ಹಾಗೂ ತಮ್ಮ ಜೀವನದ ಹಂಗು ತೋರೆದು ದುಡಿಯುತ್ತಿರುವ ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರ ಮಹಾನ್ ಕಾರ್ಯಕ್ಕೆ ನನ್ನದೊಂದು ಸಲಾಂ ಎಂದು ಬಿಜೆಪಿ ಹಿರಿಯ ಮುಖಂಡ ಮಹಿಬೂಬ ಪಟೇಲ ಹೇಳಿದರು.

ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಪೋಲಿಸ್ ಸಿಬ್ಬಂದಿಗಳಿಗೆ ಹಾಗೂ ವೈದ್ಯಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಹಣ್ಣು ಹಂಪಲ ವಿತರಿಸಿ ಮಾತನಾಡಿದ ಅವರು, ಜನರಿಗೆ ಈ ರೋಗಾಣುದಿಂದ ಸುರಕ್ಷಿತವಾಗಿ ಅಂತರವನ್ನು ಕಾಯ್ದುಕೊಂಡು ಮನೆಯಲ್ಲೆ ಇರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದಲ್ಲದೇ ಪೊಲೀಸ್‌ರೇ ಎದುರು ನಿಂತು ಸಂತೆ ಬಜಾರಗಳನ್ನು ಮಾಡಿಸುತ್ತಿದ್ದಾರೆ. ಗುಂಪು ಸೇರಬೇಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಜನರಲ್ಲಿ ಅರಿವು ಮೂಡಿಸುವ ಪೋಲಿಸ್ ಸಿಬ್ಬಂದಿಗಳ ಕಾರ್ಯ ಮಹತ್ವದ್ದಾಗಿದೆ ಎಂದರು.

ಕೊರೋನಾ ವೈರಸಗಾಗಿ ಹಗಲಿರುಳು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದಾರೆ. ಜೊತೆ-ಜೊತೆಯಾಗಿ ಆಶಾ ಕಾರ್ಯಕರ್ತೆಯರು ಕೂಡ ಮಧ್ಯಾಹ್ನದ ಬಿರು ಬೀಸಿಲನ್ನು ಲೆಕ್ಕಿಸದೆ ಪ್ರತಿ ಮನೆ, ಮನೆಗಳಿಗೆ ಹೋಗಿ ಜಾಗೃತಿ ಕಾರ್ಯವನ್ನು ಮಾಡುತ್ತಿದಾರೆ. ಊರಿಗೆ ಹೊಸಬರು ಬಂದ ಮೇಲೆ ಅವರ ಆರೋಗ್ಯದ ಮಾಹಿತಿ ಕಲೆಹಾಕಿ ದಿನ, ದಿನವು ಮಾಹಿತಿ ನೀಡುತ್ತಿದಾರೆ. ನಿಜವಾಗಿಯೂ ಇವರ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಕೊಂಡಾಡಿದರು.
ತಾ.ಪಂ ಸದಸ್ಯ ದತ್ತಾತ್ರೇಯ ದುರ್ಗದ ಮಾತನಾಡುತ್ತ, ಆಶಾ ಕಾರ್ಯಕರ್ತೆಯರ ಪರಿಶ್ರಮ ನಿಜಕ್ಕೂ ಮೆಚ್ಚುವಂತಹದು. ಕೊರೋನಾ ಮಹಾಮಾರಿಯಿಂದ ಜನರು ಭಯಬೀತರಾಗಿದಾರೆ. ಅವರಿಗೆ ತಿಳುವಳಿಕೆ ಹೇಳುವ ಮಹಾ ಕಾರ್ಯವನ್ನು ಪ್ರತಿ ಮನೆ, ಮನೆಗೂ ತೆರಳಿ ಜಾಗೃತ ಮೂಡಿಸುತ್ತಿದಾರೆ. ಅನಾದಿ ಕಾಲದಲ್ಲಿ ಕಾಲರಾ, ಪ್ಲೇಗ್ ರೋಗ ಹರಡಿದಂತೆ ಕೊರೋನಾ ವೈರಸ್ ಕೂಡ ಇಡಿ ಊರಿಗೆ ಕಂಟಕವಾಗುತ್ತಿದೆ. ಅದರ ಬಗ್ಗೆ ಮುಂಜಾಗೃತೆಯನ್ನು ಹೇಗೆ ರಕ್ಷಣೆಮಾಡಿಕೊಳ್ಳಬೇಕು ಎಂದು ಅರಿವನ್ನು ಮೂಡಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಮಲ್ಲಿನಾಥ ವಡೇಯರ್, ದೇಶದ ಉದ್ದಗಲಕ್ಕೂ ಹರಡಿರುವ ಮಹಾಮಾರಿ ಕೊರೋನಾದಿಂದ ಮನುಷ್ಯ ಖಿನ್ನತೆಗೆ ಒಳಗಾಗುತ್ತಿದ್ದಾನೆ. ಭಾರತ ದೇಶದಲ್ಲಿ ಸುಮಾರು ಶೇ. ೭೦ರಷ್ಟು ಜನರು ದಿನ ದುಡಿದು ತಿನ್ನುವವರಿದ್ದಾರೆ. ಅದಕ್ಕಾಗಿಯೇ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನರಿಗೆ ಸಂದೇಶವನ್ನು ನೀಡುತ್ತಿದ್ದಾರೆ. ಜನರ ಒಳಿತಿಗಾಗಿ ’ಜನತಾ ಕರ್ಫ್ಯೂ’ ಜಾರಿ ತಂದಿದ್ದಾರೆ. ಅಂದು ಎಲ್ಲರೂ ಒಟ್ಟಾಗಿ ಚಪ್ಪಾಳೆ ತಟ್ಟುವ ಮೂಲಕ ನಮ್ಮನ್ನು ಕಾಪಾಡುತ್ತಿರುವ ವೈದ್ಯ, ನಸ್ ಪೊಲೀಸ್ ಸಿಬ್ಬಂದಿಗಳ ಕಾರ್ಯ ನೆನಪಿಸುವಂತೆ ಮಾಡಿದರು. ಈಗ ಎಪ್ರಿಲ್ ೫ರಂದು ರಾತ್ರಿ ೯ಗಂಟೆಗೆ ೯ ನಿಮಿಷಗಳ ಕಾಲ ದೀಪ ಬೆಳಗುವ ಮೂಲಕ ದೇಶದಲ್ಲಿ ಏಕತೆಯ ಸಂದೇಶವನ್ನು ಸಾರುವ ಮೂಲಕ ಜನರಲ್ಲಿ ಜಾಗತ್ರೆಯನ್ನು ಮೂಡಿಸಿದ್ದಾರೆ. ಅದಕ್ಕಾಗಿ ಎಲ್ಲರೂ ಸಹಕರಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿಜಯಕುಮಾರ ಚಿಂಚೋಳಿ, ಶಿವಪ್ಪಾ ನಾಗಶೇಟ್ಟಿ, ಶರಣಪ್ಪಾ ಪೂಜಾರಿ. ಮಹಾದೇವಪ್ಪಾ ಕಾಮನಗೋಳ ಇನ್ನಿತರರು ಇದ್ದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

1 hour ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

2 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

2 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

3 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago