ಕಲಬುರಗಿ: ಕೊರೋನಾ ಮಹಾಮಾರಿ ದೇಶದೆಲ್ಲೆಡೆ ಹರಡುತ್ತಿದ್ದು, ಇಂದು ಮತ್ತೊಬ್ಬ ವ್ಯಕ್ತಿಗೆ ಕೊರೋನಾ ಇರುವುದಾಗಿ ಕೋವಿಡ್-19 ಬುಲೇಟಿನ್ ಮೂಲಕ ದೃಢ ಪಟ್ಟಿದೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕು ತಗುಲಿ ಮೃತಪಟ್ಟ ಸಂಖ್ಯೆ 6 ಮತ್ತು ಜಿಲ್ಲೆಯಲ್ಲಿ 2 ಆಗಿದೆ.
ಸೋಂಕು ಪೀಡಿತರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸುವ ತಯಾರಿ ಜಿಲ್ಲಾಡಳಿತ ನಡೆಸುತ್ತಿದೆ ಎಂದು ತಿಳಿದುಬಂದಿದೆ.