ಬೇಸಿಗೆ ಸೀಜನ್ ಇನ್ನೇನು ಮುಗಿದೇ ಹೋಯಿತು ಅಂದರೆ ಮಾವಿನ ಹಣ್ಣುಗಳನ್ನು ತಿನ್ನಬಹುದು ಎನ್ನುವ ಖುಷಿ ಹಲವಾರು ಜನರಿಗೆ ಇರುತ್ತೆ, ಬೇಸಿಗೆಯ ಉರಿ ಬೀಸಿಲಿಗೆ ದೇಹ ತಂಪಾಗಲೆಂದು ಮಾವಿನ ಹಣ್ಣಿನ ಜ್ಯೂಸ್ ಕುಡಿಯುವುದು. ಊಟ-ತಿಂಡಿಗಳನ್ನು ಬಿಟ್ಟು ಹಣ್ಣನ್ನು ಸವಿಯುವುದು. ಇವೆಲ್ಲವೂ ಮಾವಿನ ಹಣ್ಣಿನ ಋತು ಮುಗಿಯುವವರೆಗೂ ಪ್ರಕ್ರೀಯೆ ನಡೆಯುತ್ತಿರುತ್ತೆ.
ಒಂದು ವರ್ಷದಿಂದ ಮಾವಿನ ಹಣ್ಣಿನ ರುಚಿಯನ್ನು ಸವಿಯಲು ಮಾವಿನ ಪ್ರಿಯರು ಇಟ್ಟುಕೂಂಡಿದ್ದ ಆಸೆಯನ್ನು ಋತುವಿನ ಸಂಧರ್ಭದಲ್ಲಿ ಈಡೇರಿಸಿಕೂಳ್ಳಲು ಕಾತುರದಿಂದ ಕಾಯುತ್ತಿರುತ್ತಾರೆ.
ಮಾವಿನ ಹಣ್ಣಿನ ಸುವಾಸನೆ, ಬಣ್ಣ ಹಾಗೂ ರುಚಿಗೆ ಮಾರುಹೋಗದವರೇ ಇಲ್ಲ. ಮಕ್ಕಳಿಂದ ವಯಸ್ಕರವರೆಗೂ ಎಲ್ಲರೂ ಬಹಳ ಇಷ್ಟಪಡುವ ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್‌ಸಿ ಹೇರಳವಾಗಿದೆ. ನಾರಿನಂಶ (ಫೈಬರ್) ಹೆಚ್ಚಾಗಿದೆ. ನೀರಿನಂಶ ಕೂಡಾ ಇದೆ. ಅನೇಕ ಖನಿಜಾಂಶಗಳಿವೆ. ಉತ್ತಮ ಜೀರ್ಣಕಾರಕವೂ ಹೌದು.
ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ಕ್ಯಾನ್ಸರ್ನಂತಹ ರೋಗಗಳನ್ನು ತಡೆಗಟ್ಟಬಹುದು. ಮಾವಿನಲ್ಲಿ ಸಾಮಾನ್ಯವಾಗಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ.
ಫೈಬರ್ ಮತ್ತು ಸಿ ವಿಟಮಿನ್ ಮಾವಿನಲ್ಲಿ ಅಧಿಕ ಪ್ರಮಾಣದಲ್ಲಿದ್ದು, ಇದರ ಸೇವನೆಯಿಂದ ಹೊಟ್ಟೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಹಣ್ಣುಗಳಲ್ಲಿ ಕಂಡುಬರುವ ಗ್ಲುಟಮಿನ್ ಅಂಶವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರ್ಭಿಣಿಯರು ಸಹ ಮಾವಿನ ಹಣ್ಣನ್ನು ತಿನ್ನಬಹುದೆಂದು ವೈದ್ಯರು ಸಲಹೆ ನೀಡುತ್ತಾರೆ.
ಮಾವಿನಲ್ಲಿ ಹಲವು ಪ್ರಯೋಜನಗಳಿದ್ದರೂ ಇದನ್ನು ಹೆಚ್ಚು ಸೇವಿಸುವುದು ಉತ್ತಮವಲ್ಲ. ಇದರಲ್ಲಿ ಸಕ್ಕರೆ ಮತ್ತು ಕ್ಯಾಲೊರಿ ಪ್ರಮಾಣವನ್ನು ಹೆಚ್ಚಾಗಿರುವುದರಿಂದ ಪ್ರತಿದಿನ ನಿರ್ದಿಷ್ಟ ಸಂಖ್ಯೆಯಷ್ಟು ಸೇವಿಸುವುದು ಒಳ್ಳೆಯದು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…