ಬಿಸಿ ಬಿಸಿ ಸುದ್ದಿ

ಬಜನೆಯಲ್ಲಿ ವಚನಗಳನ್ನು ಬಳಸಿದರೆ ಶರಣ ತತ್ವ ಅಳವಡಿಸಿದಂತಾಗುತ್ತದೆ: ಡಾ. ಬಸವರಾಜ ಮೋದಿ

ಕಲಬುರಗಿ: ಸಂಗೀತ ಮನುಷ್ಯನ ಜೀವನದಲ್ಲಿ ಬಹು ದೊಡ್ಡ ಪಾತ್ರವಹಿಸುತ್ತದೆ, ಅದು ಮನುಷ್ಯನ ಮನಸ್ಸನ್ನು ಪ್ರಸನ್ನಗೊಳಿಸುವುದರ ಮೂಲಕ ಅವನ ಆರೋಗ್ಯ ಕಾಪಾಡುತ್ತದೆ ಎಂದು ವಚನೋತ್ಸವ ಪ್ರತಿಷ್ಟಾನ ಕೇಂದ್ರ ಸಮಿತಿಯ ಅಧ್ಯಕ್ಷ ಡಾ. ಬಸವರಾಜ ಮೋದಿ ಅವರು ಹೇಳಿದರು.

ಅವರು ನಗರದ ಹೈಕೋರ್ಟಿನ ಹಿಂದುಗಡೆಯಲ್ಲಿರುವ ಮಹಾಂತೇಶ್ವರ ಕಾಲೋನಿಯಲ್ಲಿ ನಡೆದ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಹಮ್ಮಿಕೊಂಡ ವಿಶೇಷ ವಚನ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಗೀತವನ್ನು ಜೀವನದ ಹಲವಾರು ಪ್ರಸಂಗಗಳಲ್ಲಿ ಅಳವಡಿಸಿದ್ದಾರೆ ಅವುಗಳಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ವಿಶೇಷವಾಗಿ ಬಜನಾ ಕಾರ್ಯಕ್ರಮಗಳಲ್ಲಿ ವಿವಿಧ ರೀತಿಯ ಸಂಗೀತ ಬಳಸುತ್ತಿದ್ದಾರೆ. ಬಜನೆಗಳಲ್ಲಿ ದೇವರ ಹಾಗೂ ಮಹಾತ್ಮರ ಗುಣಗಾನ ಮಾಡುವುದರ ಜೊತೆಗೆ ತತ್ವ ಪದಗಳು ಮನುಷ್ಯನಿಗೆ ನೀತಿಯನ್ನು ಬೋದಿಸುತ್ತವೆ ಎಂದು ಅವರು ತಿಳಿಸಿದರು.

ವಿಶೇಷವಾಗಿ ಬಜನೆ ಕಾರ್ಯಕ್ರಗಳಲ್ಲಿ ಶರಣ ವಚನಗಳನ್ನು ಅಳವಡಿಸಿಕೊಂಡು ಅವುಗಳಲ್ಲಿನ ತತ್ವ ಸಿದ್ದಾಂತದ ಬಗ್ಗೆ ಕೇಳುವವರ ಹಾಗೂ ಹಾಡುವವರ ಮೇಲೆ ಪರಿಣಾಮ ಬೀರಿ ಅವರ ವ್ಯಕ್ತಿತ್ವವನ್ನು ಶುದ್ದಗೊಳಿಸುತ್ತದೆ ಅಲ್ಲದೆ ಅವರ ಮನದಾಳಕ್ಕೂ ಇಳಿಯುತ್ತದೆ ಎಂದು ಪ್ರತಿಪಾದಿಸಿದರು.

ಅಧ್ಯಕ್ಷ ಶಿವರಾಜ ಅಂಡಗಿ ಪ್ರಾಸ್ತವಿಕ ಮಾತನಾಡಿ, ವಚನೋತ್ಸವ ಪ್ರತಿಷ್ಠಾನದ ಮುಖ್ಯ ಉದ್ದೇಶ ಶರಣರ ವಚನ ಸಾಹಿತ್ಯದ ವಚನಗಳು ಮನೆ ಮನೆಗಳಿಗೆ ಮುಟ್ಟುಸುವುದಕ್ಕಾಗಯೇ ವಚನೋತ್ಸವೆಂಬ ಕಾರ್ಯಕ್ರಮದ ಮೂಲಕ ಪ್ರಸಾರ ಮತ್ತು ಪ್ರಚಾರ ಮಾಡುವುದರ ಜೊತೆಗೆ ವಿಶೇಷ ವಚನ ಸಂಗೀತೋತ್ಸವ ಅಭಿಯಾನ ಪ್ರಾರಂಭ ಮಾಡಿದ್ದು ಬಜನೆಗಳಲ್ಲಿ ಶರಣರ ವಚನಗಳು ಹಾಡುವುದರ ಮೂಲಕ ವಚನ ಸಾಹಿತ್ಯ ಬಿತ್ತರಿಸುವಂತ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿದರು.

ಬಸವಣ್ಣನವರ ವಚನಗಳಾದ (ಡಿ.ಜೆ. ಸಾಂಗ್), ಅಂಗಾದ ಮೇಲೆ ಲಿಂಗಾವ ಕಟ್ಟಿ, ಬಸವ ನಿನ್ನ ಸೇವೆ ಮಾಡುವ ಮನವ ಎನಗೆ ನೀಡಯ್ಯಾ, ಧರ್ಮವ ಬೆಳಗಿದೆ ಅಣ್ಣಾ ಕರ್ಮವ ಕಳೆದೆ ಅಣ್ಣಾ ಎಂಬ ವಚನಗಳು ಬಜನೆಯಲ್ಲಿ ಹಾಡುವುದರ ಮೂಲಕ ವಿಶೇಷ ವಚನ ಸಂಗೀತೋತ್ಸವಕ್ಕೆ ಚಾಲನೆ ಕೊಟ್ಟರು.

ಅಕ್ಕಲಕೋಟ್ ಶಿವಯೋಗಪ್ಪಾ ಸಾಹು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ  ಹಾವನೂರಿನ ನಾಗಣ್ಣಾ ಅವರಳ್ಳಿ, ನ್ಯಾಯವಾದಿಗಳಾದ ಶರಣು ಬಿರಾಜದಾರ ಹಾಗೂ ವಿನೋದಕುಮಾರ ಜನೆವರಿ ವೇದಿಕೆ ಮೇಲೆ ಉಪಸ್ತಿತರಿದ್ದರು.

ಪ್ರಾರಂಭದಲ್ಲಿ ಅಶ್ವೀನಿ ಬಿರಾಜದಾರ ವಚನ ಪ್ರಾರ್ಥನೆ ಮಾಡಿದರು. ಹಾವನೂರಿನ ಹಯ್ಯಾಳ ಸಿದ್ದೇಶ್ವರ ಬಜನಾ ಸಂಘ ಹಾಗೂ ಸಿದ್ದರಾಮೇಶ್ವರ ಬಜನಾ ಸಂಘದ ಪಧಾದಿಕಾರಿಗಳಿಂದ ವಚನಗಳು ಬಜನೆಯಲ್ಲಿ ಅಳವಡಿಸುವುದರ ಮೂಲಕ ವಿಶೇಷ ವಚನ ಸಂಗೀತೋತ್ಸವ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಹಾಂತ ಪಾಟೀಲ, ಸಿದ್ದಣ್ಣ ಪೂಲಾರಿ, ಶ್ರವಣಕುಮಾರ, ಬಸಲಿಂಗಯ್ಯಾ ಮಠಪತಿ, ಮಲ್ಲಿನಾಥ ಕಂಬಾರ, ಸರೇಶ ಕಂಬಾರ, ಆನಂದ ಅಪ್ಪುಗೋಳ, ರೇವಣಸಿದ್ದ ಸಾವಳಗಿ, ಬಸವರಾಜ ಕಂಬಾರ, ಶರಣು ಕಂಬಾರ, ಕುಮಾರ ಶರಣಪ್ರಸಾದ ಜನೆವರಿ, ಮಹಾನಂದ ಹುಗ್ಗಿ, ರಾಜೇಶ್ವರಿ ಹಡಗಿಲ್, ಲಕ್ಷ್ಮಿಬಾಯಿ ಅವರಳ್ಳಿ, ಜಗದೇವಿ ಕರಕಲ್ಲ, ಸಿದ್ದಮ್ಮಾ ಬಿರಾಜದಾರ ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago