ಅಂಕಣ ಬರಹ

ಜನಮಾನಸದಲ್ಲಿ ಎಂದಿಗೂ ಮರೆಯಲಾಗದ ಜಲಿಯನ್ ವಾಲಾಬಾಗ್ ಕರಾಳ ಹತ್ಯಾಕಾಂಡಕ್ಕೆ 101 ನೇ ವರ್ಷದ ನೆನಪು

ಇಂದಿಗೆ ನೂರೊಂದು ವರ್ಷದ ಹಿಂದೆ ತಿರುಗಿ ನೋಡಿದರೆ,ಮನುಕುಲವನ್ನೇ ಮೈ ನಡುಗಿಸುವ ಕ್ರೂರ ಘಟನೆ ನಡೆದು ಹೋಯಿತು. ಅದುವೇ ಪಂಜಾಬಿನ ಅಮೃತಸರ್ ಬಳಿಯ ಜಲಿಯನ್ ವಾಲಾಬಾಗ್ ಹತ್ಯಾಕಾಂಡ. 1919 ಏಪ್ರಿಲ್‌ 13 ರಂದು ಜನರು ಸಂಭ್ರಮದಿಂದ ವೈಶಾಖಿ ಹಬ್ಬವನ್ನು ಆಚರಿಸಲು ಎಲ್ಲರೂ ಒಂದೇ ಕಡೆ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಸೇರಿದ್ದರು.

ಈ ಮೈದಾನ ವನ್ನು ಪ್ರವೇಶಿಸಲು ಮತ್ತು ಅಲ್ಲಿಂದ ಹೊರಗಡೆ ಹೋಗಲು ಇದ್ದಿದ್ದು ಸಹ ಒಂದೇ ಒಂದು ಚಿಕ್ಕ ಗೇಟ್. ಅದರಿಂದ ಒಳಗೆ ಸರಿಸುಮಾರು ಕನಿಷ್ಠ ಅಂದರೂ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರಿಕೊಂಡಿದ್ದರು.ದೇಶದ ಎಲ್ಲೆಡೆ ರೌಲತ್ ಕಾಯ್ದೆಯ ವಿರುದ್ಧ ಚಳುವಳಿ ಭುಗಿಲೆದ್ದು ಹೇಗೆ ಜನರ ವಿರೋಧ ವ್ಯಕ್ತಪಡಿಸುತ್ತಿದ್ದಾರೋ ಎಂಬುದನ್ನು ಅವರವರ ಅಭಿಪ್ರಾಯವನ್ನು ಹಂಚಿಕೊಳ್ಳಲು ಜನ ಇಲ್ಲಿ ಸೇರಿದ್ದರಷ್ಟೇ. ಆದರೆ ಅವರು ಮಾಡಬಾರದ ಯಾವ ಕೆಲಸವನ್ನೂ ಮಾಡಿರಲ್ಲಿಲ್ಲ.ಒಂದು ಕಲ್ಲನ್ನೂ ಸಹ ಎಸೆದಿರಲ್ಲಿಲ್ಲ. ಅಸಭ್ಯವಾಗಿ ಹೀಯಾಳಿಸಿ ಬ್ರೀಟಿಷರ್ ವಿರುದ್ದ ಯಾವ ಮಾತನ್ನು ಆಡಿರಲ್ಲಿಲ್ಲ.ಇಡೀ ಹೋರಾಟವನ್ನು ಹಿಂದೂ ಹಾಗೂ ಮುಸ್ಲಿಂ ಆಗಿನ ನಾಯಕರಾದ ಡಾ.ಕಿಚಲೂ ಹಾಗೂ ಡಾ.ಸತ್ಯಪಾಲ್ ಆರಂಭಿಸಿದ್ದರು ‌ ಅವರನ್ನೂ ಸಹ ಬಂಧಿಸಲಾಯಿತು. ಜನ ಹಿಂದೂ- ಮುಸ್ಲಿಂ ಐಕ್ಯತೆ ಚಿರಾಯುವಾಗಲಿ! ರೌಲತ್ ಕಾಯ್ದೆ ರದ್ದಾಗಲಿ ! ಎಂದು ಕೂಗುತ್ತಿದ್ದರಷ್ಟೇ.

ಅಷ್ಟರಲ್ಲಿ ನರರಾಕ್ಷಸ ಬ್ರಿಟಿಷ್‌ ಆಧಿಕಾರಿ ಜನರಲ್ ಡಯರ್ ತನ್ನ ಪಡೆಯೊಂದಿಗೆ ಪ್ಲಾನ್ ಮಾಡಿಕೊಂಡು ಬಂದು,ಮೈದಾನದಿಂದ ಯಾರೂ ತಪ್ಪಿಸಿಕೊಂಡು ಹೊರಗಡೆ ಬರದೇ ಹಾಗೆ ಬಾಗಿಲಿಗೆ ಅಡ್ಡ ಬಂದು ನಿಂತ,ಕಡೆ ಪಕ್ಷ ಜನರಿಗೆ ಚದುರಿಸಿ ಎಚ್ಚರಿಕೆ ಕೊಡದೇ, ನೆರೆದಿದ್ದ ಜನರ ಮೇಲೆ ಸುಮಾರು ಐವತ್ತಕ್ಕಿಂತ ಹೆಚ್ಚು ಶಸ್ತ್ರ ಸಹಿತ ಬ್ರಿಟಿಷ್ ಸೈನ್ಯದೊಂದಿಗೆ ಒಳಹೊಕ್ಕು ನೇರವಾಗಿ ಜನಗಳ ಮೇಲೆ ಸಾವಿರಾರು ಗುಂಡುಗಳ ಮಳೆಗರೆದ.ಈ ಗುಂಡೇಟಿನ ಪೆಟ್ಟುತಿಂದವರ ಹಾಹಾಕಾರ ಮುಗಿಲು ಮುಟ್ಟಿತ್ತು. ತಪ್ಪಿಸಿಕೊಳ್ಳುವ ಯತ್ನದಲ್ಲಿ ಎಷ್ಟೋ ಜನ ಮೈದಾನದ ಮಧ್ಯದಲ್ಲಿದ್ದ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡರು. ಈ ಬಳಿಕ ಡಯರ್ ಅಮೃತಸರ ನಗರದಲ್ಲಿ ಕರ್ಫ್ಯೂ ವಿಧಿಸಿ ಸೈನ್ಯ ನಿಯೋಜಿಸಿ ಜನ ಬೀದಿಗಳಲ್ಲಿ ಅಲೆದಾಡಿದರೆ ಗುಂಡು ಹಾರಿಸುವ ಆದೇಶ ನೀಡಿದ.ಇದರಿಂದಾಗಿ ಗಾಯಗೊಂಡು ಮೈದಾನದಲ್ಲಿ ಬಿದ್ದಿದ್ದವರನ್ನು ಆಸ್ಪತ್ರೆಗೆ ಸೇರಿಸಲೂ ಸಾಧ್ಯವಾಗದೇ ಸ್ವಲ್ಪ ಸಾವು ಬದುಕಿನ ಉಸಿರಾಡುತ್ತಿದ್ದ ನೂರಾರು ಜನ ರಾತ್ರಿಯೆಲ್ಲಾ ರಕ್ತಹರಿದು ಪ್ರಾಣ ಕಳೆದುಕೊಂಡರು.

ಇಂತಹ ಭೀಕರ ಘಟನೆ ಭಾರತದ ಇತಿಹಾಸದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ದ ಹೋರಾಟದ ದಿಕ್ಕನ್ನೇ ಬದಲಿಸಿತು.ಈ ಘಟನೆ ನೋಡಿದರೆ ಇಂದು ನೋಡಿದರೆ ಬ್ರಿಟಿಷ್ ವಸಾಹತುಶಾಹಿಯು ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ನಡೆಸಿದ ಕ್ರೌರ್ಯ,ಹಿಂಸೆ,ರಕ್ತಪಾತಗಳು ಕಣ್ಮುಂದೆ ಕಂಡಂತಾಗುತ್ತದೆ. ಈ ಘಟನೆಯನ್ನು ಕಂಡ ಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್, ಬ್ರಿಟಿಷ್‌ ಸರಕಾರದ ಅಮಾನವೀಯ ನಡವಳಿಕೆಯನ್ನು ಖಂಡಿಸಿ, ತಮ್ಮಗೆ ನೀಡಿದ “ನೈಟ್ ಹುಡ್ ” ಪ್ರಶಸ್ತಿಯನ್ನು ವಾಪಾಸ್ಸು ಮಾಡುತ್ತಾರೆ.

ಅದೇ ರೀತಿ ಕರಾಳ ಹತ್ಯಾಕಾಂಡ ವನ್ನು ಪ್ರತ್ಯಕ್ಷವಾಗಿ ಕಂಡ ಪಂಜಾಬಿನ ಯುವಕ ಉದಮಸಿಂಗ್ ತನ್ನ ತಾಯ್ನಾಡಿನ ಜನರ ಹತ್ಯೆಗೆ ಕಾರಣವಾದ ಪ್ರಮುಖಬ ಬ್ರಿಟಿಷ್‌ ಅಧಿಕಾರಿ ಡಯರ್ ಮೇಲೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡಿ ಲಂಡನ್ ಗೆ ಹೋಗಿ ಒಂದು ಸಾರ್ವಜನಿಕ ಕಾರ್ಯಕ್ರಮ ಭಾಗವಹಿಸಿದ್ದ ಡಯರ್ ನ ಮೇಲೆ ಗೋಲಿಬಾರ್ ಮಾಡಿ ಸಾಯಿಸಿ ಅಲ್ಲೇ ಬ್ರಿಟಿಷರ್ ಶರಣಾಗತಿ ಯಾಗುತ್ತಾನೆ.

ಅದೇ ರೀತಿ ಈ ಹಿಂಸಾತ್ಮಕ ಘಟನೆ ನಡೆದು ವಾರದ ನಂತರ 11 ವರ್ಷದ ಬಾಲಕ ಭಗತ್ ಸಿಂಗ್ ಆ ದಿನ ಶಾಲೆಗೆ ಹೋಗಲಿಲ್ಲ. ಬದಲಾಗಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ನೇರವಾಗಿ ಅಮೃತಸರದ ಜಲಿಯನ್ ವಾಲಾಬಾಗ್ ಕ್ಕೆ ಬಂದು ಮೈದಾನದ ರಕ್ತಲೇಪಿತ ಮಣ್ಣನ್ನು ಹಿಡಿದು ಎದೆಗೊತ್ತಿಕೊಂಡು ತನ್ನ ನೆಲವನ್ನು ಬ್ರಿಟಿಷ್ ರಿಂದ ಬಿಡುಗಡೆ ಗೊಳಿಸುವ ರಣಸಂಕಲ್ಪ ಮಾಡಿದ್ದ ಭಗತ್ ಸಿಂಗ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜಿ ರಹಿತವಾಗಿ ಹೋರಾಡಿ ದೇಶಕ್ಕಾಗಿ ಪ್ರಾಣಬಿಟ್ಟರು.ಭಾರತ ಸ್ವಾತಂತ್ರ್ಯಕ್ಕೆ ಹೊಸ ಸ್ಪೂರ್ತಿ ನೀಡಿತ್ತು.

ಈ ದೇಶಕ್ಕಾಗಿ ಪ್ರಾಣತೆತ್ತ ಹಲವಾರು ಜನ ತ್ಯಾಗ,ಬಲಿದಾನ ಮಾಡಿದ ಮಹನೀಯರು, ಯೋಧರ ಕ್ರಾಂತಿಕಾರಿ ಹೋರಾಟಗಾರರ ಕನಸು ಕನಸು ಮಾಡುವಲ್ಲಿ ಮತ್ತೋಮ್ಮೆ ಈ ದೇಶದ ಯುವಜನತೆ ಪ್ರತಿಜ್ಞೆ ಮಾಡಬೇಕಿದೆ‌. ದೇಶಕ್ಕೆ ಪುಕ್ಕಟೆಯಾಗಿ, ಭಿಕ್ಷೆಯಾಗಿ ಯಾರು ಸ್ವಾತಂತ್ರ್ಯ ತಂದು ಕೊಟ್ಟಿಲ್ಲ. ಅದರ ಹಿಂದೆ ಲಕ್ಷಾಂತರ ಜನ ನಿಜವಾದ ದೇಶಭಕ್ತರ ರಕ್ತ ಹರಿದಿದೆ. ಎಂಬುದನ್ನು ಯಾವತ್ತೂ ಮರಿಲಿಕ್ಕೆ ಆಗಲ್ಲ.ಹೀಗಾಗಿ ಜಲಿಯನ್ ವಾಲಾಬಾಗ್ ರಕ್ತ ರಂಜಿತ ಇತಿಹಾಸ ಮರೆಯದೇ ನೆನೆದು ಅದರ ಪಾಠಗಳನ್ನು ಕಲಿಯೋಣ. ಮತ್ತೇ ಆಳ್ವಿಕ ಕುತಂತ್ರ ಹಾಗೂ ಜನವಿರೋಧಿ ನೀತಿಗಳನ್ನು ಹೋಗಲಾಡಿಸಲು ಮಹಾನ್ ವ್ಯಕ್ತಿಗಳ ಹೋರಾಟದ ಸ್ಪೂರ್ತಿ ಪಡೆದುಕೊಂಡು ಯಾವಾಗಲೂ ಮುಂದೆ ಬರೋಣ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

8 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

10 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

17 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

17 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

17 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago