ದೇಶದ ಮೊದಲ ಲೋಕ ಸಭಾ ಚುನಾವಣೆ ಹೇಗಿತ್ತು ಗೊತ್ತಾ.?

2019ರ ಚುನಾವಣಾ ಕಾವು ಏರತೊಡಗಿದೆ. ಬೇಸಿಗೆಯ ಉರಿ ಬಿಸಿಲನ್ನು ಲೆಕ್ಕಿಸದೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತದಾರರನ್ನು ತಮ್ಮತ್ತ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ.

ಲೋಕಸಭಾ ಚುನಾವಣೆ ಒಂದು ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಅತಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಲೋಕಸಭಾ ಚುನಾವಣೆಯ ಪ್ರಾರಂಭಿಕ ಹಂತಗಳು ಹೇಗಿದ್ದವು ಎಂಬುದನ್ನು ನೋಡಿ ಬರೋಣ.
ಭಾರತದ ದೇಶವನ್ನು ಸುಮಾರು 200 ವರ್ಷಗಳು ಪರಕೀಯರು ದೇಶದ ಜನರನ್ನು ಗುಲಾಮರಾಗಿಸಿಕೊಂಡು ಆಳಿದರು. ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗ, ಸುಭಾಷ ಚಂದ್ರ ಬೋಸ್ ಅವರ ಶೌರ್ಯ, ಭಗತಸಿಂಗ್ ಅವರ ವೀರತೆ, ಸರ್ದಾರವಲ್ಲಭಭಾಯಿ ಪಟೇಲ್ ಅವರ ದೃಡತಾ, ಜವಾಹರಲಾಲ ನೆಹರೂ ಮುಂತಾದವರಿಂದ ದೇಶಕ್ಕೆ ಸ್ವತಂತ್ರ್ಯ ಸಿಕ್ಕಿದೆ ಎನ್ನುವುದರಲ್ಲಿ ತಪ್ಪೇನಿಲ್ಲ.

ಸ್ವಾತಂತ್ರ್ಯದ ನಂತರ ಭಾರತ ಅಂತರಿಕ ಹಾಗೂ ಭೌಗೋಳಿಕ ಹಲವು ರೀತಿಯ ಸವಾಲು, ಸಮಸ್ಯೆಗಳಾದ, ಭಾರತ ಪಾಕಿಸ್ತಾನ ಭೂಮಿ ಹಾಗೂ ಸಂಪತ್ತಿನ ವಿಭಜನೆ, ಭಾಷಾ ಹಾಗೂ ಪ್ರಾಂತ್ಯವಾರು ವಿಂಗಡಣೆ, ಗಾಂಧೀಜಿ ಸಾವು, ಆರ್ಥಿಕ ಬಿಕ್ಕಟು, ಅನಕ್ಷರತೆ, ಕಿತ್ತುತಿನ್ನುವ ಬಡತನದಂತ ಭೀಕರ ಸಮಸ್ಯೆಗಳು ದೇಶದಲ್ಲಿದವು.

ಜವಹರಲಾಲ್ ನೆಹರು ಚುನಾವಣೆ ನಡೆಸಬೇಕೆಂದು ಪಟ್ಟು ಹಿಡದಿದರು.

ಅಂದು ಭಾರತದ ಜನಸಂಖ್ಯೆ 360 ಮಿಲಿಯನ್ ಅಂದರೆ 36% ಇತ್ತು. 85% ಜನರು ಅನಕ್ಷರಸ್ತರು ಇದ್ದರು.

ಭಾರತವನ್ನು ಪ್ರಜಾಪ್ರಭುತ್ವ ದೇಶವಾಗಿಸಲು ಚುನಾವಣೆ ಮುಖ್ಯವಾಗಿತು, ಆದರೆ ಈ ಪರಿಸ್ಥಿಯಲ್ಲಿ ಭಾರತದಿಂದ ಇದು ಸಾಧ್ಯವಿಲ್ಲ ಎಂದು ವಿದೇಶಿ, ದೇಶದ ಗಣ್ಯರು ತಿಳಿದುಕೊಂಡಿದ್ದರು.

21 ವರ್ಷ ವಯೋಮಿತಿ ಹೊಂದವರಿಗೆ ಮತದಾನದ ಹಕ್ಕು ಚುನಾವಣೆ ಆಯೋಗ ನೀಡಿತ್ತು. ಪ್ರಜಾಪ್ರಭುತ್ವ ಮತದಾರರ ಪಟ್ಟಿಯಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ಚುನಾವಣೆಯಲ್ಲಿ ಸಿಕ್ಕಿತು. ದೇಶದ ಒಟ್ಟು ಜನಸಂಖ್ಯೆಯಲ್ಲಿ 85% ಜನರಿಗೆ ಚುನಾವಣೆಗೆ ನಿಂತ ಅಭ್ಯರ್ಥಿಯ ಹೆಸರು ಓದಲು ಹಾಗೂ ಬರೆಯಲು ಬರುತ್ತಿರಲಿಲ್ಲ. ಈ ಕಾರಣ ಚುನಾವಣೆ ಆಯೋಗ ಎರಡು ಬಾರಿ ಚುನಾವಣೆ ಮುಂದೂಡಲಾಗಿತ್ತು.

ಹಲವು ಸವಾಲುಗಳ ಮಧ್ಯೆ ಪ್ರಥಮ ಲೋಕ ಸಭಾ ಚುನಾವಣೆ ಅಕ್ಟೋಬರ್ 25, 1951 ರಿಂದ 21 ಫೇಬರವರಿ 1952 ವರೆಗೆ ನಡೆಯಿತ್ತು. 6 ತಿಂಗಳ ವರೆಗೆ ನಡೆದಿತು. ಚುನಾವಣೆ ಕಾರ್ಯಕ್ಕೆ 16.500 ಕ್ಲರ್ಕಗಳನ್ನು, 6 ತಿಂಗಳ ಕಾಂಟ್ರಕ್ಟ್ ಮೇಲೆ ನಿಯುಕ್ತಿ ಮಾಡಿ, ದೇಶದ 25 ರಾಜ್ಯಗಳಲ್ಲಿ 68 ಹಂತಗಳಲ್ಲಿ ಮೋದಲ ಲೋಕ ಸಭಾ ಚುನಾವಣೆ ನಡೆದಿತು. 380 ಸಾವಿರ ಕಾಗದ ರಿಮ್ ಗಳು ಮತದಾನಕ್ಕೆ ಬಳಸಿಕೊಳಲಾಯಿತು. ದೇಶದಲ್ಲಿ 196.084. ಪುಲಿಂಗ್ ಭೂತ ಇದ್ದು, 27,527 ಮಹಿಳಾ ಪುಲಿಂಗ್ ಭೂತ ಚುನಾವಣೆ ಆಯೋಗ ಸಿದ್ದಪಡಿಸಿತ್ತು.

ಒಟ್ಟು 489 ಲೋಕಸಭಾ ಸ್ಥಾನಗಳಿಗೆ, 53 ಪಕ್ಷದ, 1874 ಅಭ್ಯರ್ಥಿ ಕಣಕಿಳಿಸಲಾಗಿತ್ತು. 533 ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ನಿಂತಿದ್ದರು. ದೇಶದ ಪ್ರಥಮ ಲೋಕ ಸಭಾ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷ 364 ಸಿಟುಗಳು ಪಡೆದು ಅತಿ ದೊಡ ಪಕ್ಷವಾಗಿ, 17 ಎಪ್ರಿಲ್ 1952 ರಂದು ಪಂಡಿತ ಜವಹರಲಾಲ್ ನೆಹರು

ದೇಶದ ಪ್ರಥಮ ಪ್ರಧಾನಿಯಾಗಿ ಗದುಗೆ ಅಲಂಕರಿಸಿದ್ದರು. ಸರದಾರವ ವಲ್ಲಭಾಯಿ ಪಟೇಲ್ ಉಪ ಪ್ರಧಾನಿ ಹಾಗೂ ಗೃಹ ಮಂತ್ರಿಯಾಗಿದರು. ಕಮಿನಿಷ್ಟ ಪಕ್ಷ 16 ಸಿಟ್ಟುಗಳು ಪಡೆದಿತ್ತು ಎಲ್ಲ ವಿರೋಧ ಪಕ್ಷದ ಸೇರಿ ವಿರೋಧ ಪಕ್ಷದಲ್ಲಿ ಸ್ಥಾನ ಪಡೆಯಲು ಅಂದು ಸಾಧ್ಯವಾಗಿರಲ್ಲ.

ಕಳೆದ 2014ರ ಲೋಕ ಸಭಾ ಚುನಾವಣೆಯಲ್ಲಿ ಬ್ರಷ್ಠಚಾರ, ನೀರಿನ ಸಮಸ್ಯೆ, ನಿರುದ್ಯೋಗದಂತಹ ಪ್ರಮುಖ ಸಮಸ್ಯೆಗಳು ನಿವಾರಿಸುವ ಭರವಸೆ ಮೋದಿ ಅವರದಾಗಿತ್ತು. ದೇಶದ ಜನರು ಮೋದಿಜಿಯ ಕೈ ಹಿಡಿದು, ಲೋಕ ಸಭಾ ಚುನಾವಣೆಯ್ಲಲಿ 282 ಸ್ಥಾನಗಳಿ ನೀಡಿ ಭಾರತೀಯ ಜನತಾ ಪಾರ್ಟಿಯನ್ನು ಅತಿ ದೊಡ ಪಕ್ಷವಾಗಿ ಹೊರಹೊಮ್ಮಿತು. ನರೇಂದ್ರ ಮೋದಿಗೆ ಪ್ರಧಾನಿ ಜನರು ಮಾಡಿದ್ದರು. ಕಾಂಗ್ರೆಸ್ 88 ಸ್ಥಾನ ಪಡೆದು ವಿಪಕ್ಷ ಸ್ಥಾನಕ್ಕೂ ಪರದಾಡುವಂತೆ ಬಿಜೆಪಿ ಮಾಡಿತು.

ಆದರೆ 2019ರ ಲೋಕ ಸಭಾ ಚುನಾವಣೆಯಲ್ಲಿ ಈ ಬಾರಿ ದೇಶದ ಪ್ರಗತಿಗಾಗಿ, ಹೊಸ ಸವಾಲು ಮತ್ತು ಹೊಸ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ. ಈ ಬಾರಿ ದೇಶದ ಸಮಸ್ಯೆ, ಸವಾಲುಗಳು ಚುನಾವಣೆ ಅಭ್ಯರ್ಥಿಗಳಿಗೆ ಕಾಣುತಿಲ್ಲ. ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ಅಸಂವಿಧಾನಿಕ ವಿಧಾನಗಳು ಬಳಸುತ್ತಿದ್ದಾರೆ. ದೇಶದ ಅತಿ ದೊಡ್ಡ ಲೋಕ ಸಭೆ ಚುನಾವಣೆ ಏಕ ವ್ಯಕ್ತಿಯ ಹೆಸರಲ್ಲಿ ನಡೆಯುತ್ತಿರುವುದು ಅಪಾಯಕಾರಿ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಏಕ ವ್ಯಕ್ತಿಯ ಹೆಸರಲ್ಲಿ ರಾಜತಾಂತ್ರಿಕ ವ್ಯವಸ್ಥೆ ಸ್ಥಾಪಿಸಿಕೊಳಲು ನಡೆಯುತಿದ್ದಿಯಾ ಹುನ್ನಾರ.? ವ್ಯಕ್ತಿಯ ವ್ಯಾಮೋಹದಲ್ಲಿ ಮತದಾನ ಮಾಡುವುದು ದೇಶದ ಪ್ರಜಾಪ್ರಭುತ್ವಕ್ಕೆ ತರುವ ಕಂಟಕ.

ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು, ಸಿಕ್ಕಿರುವ ಹಕ್ಕನ್ನು ಉಳಿಸಿಕೊಳುವ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲಿದೆ.

ಜೈ ಹಿಂದ್.

ಮಹಿತಿ ಸಂಗ್ರಹ ಎಂ.ಎಂ ಜೀವಣಗಿ
ಮೊ: 9036655646

sajidpress

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago