ಕಲಬುರಗಿ: ಮಹಾಮಾರಿ ಕೋವಿಡ್-19 ವೈರಸ್ ಜಿಲ್ಲೆಯ ಇಬ್ಬರು ವ್ಯಕ್ತಿಗಳಿಗೆ ತಗಲಿರುವ ಇಂದು ಬಂದಿರುವ ವೈದ್ಯಕೀಯ ವರದಿ ದೃಢಪಡಿಸಿದ್ದು, ನಗರದಲ್ಲಿ ಪೀಡಿತರ ಸಂಖ್ಯೆ 22ಕ್ಕೆ ತಲುಪಿದೆ.
ಶಹಾಬಾದ್ ಗ್ರಾಮದ 16 ವರ್ಷದ ವ್ಯಕ್ತಿಯ ರೋಗಿ ಸಂಖ್ಯೆ P174 ಯಿಂದ ಇನ್ನೊಬ್ಬ ಮತ್ತು ಕಲಬುರಗಿಯ 34 ವರ್ಷದ ವ್ಯಕ್ತಿಗೆ ರೋಗಿ ಸಂಖ್ಯೆ P205ರ ಸಂಪರ್ಕದಿಂದ ವೈರಸ್ ತಗಲಿರುವುದಾಗಿ ದೃಢ ಪಟ್ಟಿದೆ.
ಪೀಡಿತ ರೋಗಿಗಳಿಗೆ ನಗರದ ಇ.ಎಸ್.ಐ.ಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶುಕ್ರವಾರ ಯಾವುದೇ ಸೋಂಕು ಪೀಡಿತರು ದೃಢಪಟ್ಟಿರದ ಕಾರಣ ಜನತೆ ನಿಟ್ಟುಸಿರು ಬಿಟ್ಟಿದ್ದರು, ಇಂದು ಮತ್ತೆ ಇಬ್ಬರಿಗೆ ಸೋಂಕು ತಗಲಿರುವುದು ಖಚಿತ ಪಟ್ಟಿದೆ.