ಓರಿಸ್ಸಾ ರಾಜ್ಯದಲ್ಲಿ ಫನಿ ಚಂಡಮಾರುತ ಹಿನ್ನೆಲೆ: ವಿದ್ಯುತ್ ಮಾರ್ಗ ಸರಿಪಡಿಸಲು ಜೆಸ್ಕಾಂನ ಅಧಿಕಾರಿ-ಸಿಬ್ಬಂದಿ ಓರಿಸ್ಸಾಗೆ ಪ್ರಯಾಣ

0
114

ಕಲಬುರಗಿ: ಓರಿಸ್ಸಾ ರಾಜ್ಯದಲ್ಲಿ ಫನಿ ಚಂಡಮಾರುತದಿಂದ ಅಸ್ತವ್ಯಸ್ತಗೊಂಡ ವಿದ್ಯುತ್ ಮಾರ್ಗವನ್ನು ಸರಿಪಡಿಸಿ ಪುನರ್ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರದ ನಿರ್ದೇಶನದಂತೆ ಜೆಸ್ಕಾಂದಿಂದ ೧೦೫ ಅಧಿಕಾರಿ ಸಿಬ್ಬಂದಿಗೆ ಓರಿಸ್ಸಾ ರಾಜ್ಯಕ್ಕೆ ಪ್ರಯಾಣ ಬೆಳೆಸುತ್ತಿದ್ದು, ಗುರುವಾರ ಅವರಿಗೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ. ಆರ್. ರಾಗಪ್ರಿಯಾ ಹಸಿರು ಬಾವುಟ ತೋರಿಸುವ ಮೂಲಕ ಬೀಳ್ಕೋಟ್ಟರು.

ನಿಯೋಜನೆ ಮೇರೆಗೆ ತೆರಳಲಿರುವ ಅಧಿಕಾರಿ ಹಾಗೂ ಪವರ್‌ಮೆನ್‌ನ್ನೊಳಗೊಂಡ ಒಟ್ಟು ೧೦೫ ಸಿಬ್ಬಂದಿಗಳು ಜೆಸ್ಕಾಂ ಮತ್ತು ಕರ್ನಾಟಕ ರಾಜ್ಯಕ್ಕೆ ಗೌರವ ತರುವಂತೆ ಒಳ್ಳೆಯ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಬೇಕೆಂದರು. ಈ ಸಂದರ್ಭದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೈಯುಕ್ತಿಕ ಸುರಕ್ಷತೆಗಾಗಿ ಸುರಕ್ಷಾ ಸಲಕರಣೆಗಳು, ಟೂಲ್ ಕಿಟ್ ಸೇರಿದಂತೆ ಮತ್ತಿತರ ಕಿಟ್‌ನ್ನು ವಿತರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜೆಸ್ಕಾಂನ ತಾಂತ್ರಿಕ ನಿರ್ದೇಶಕ ವಿನೋದ ಜಿ. ಹಾವಣಗಿ, ಆಡಳಿತ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಪ್ರಧಾನ ವ್ಯವಸ್ಥಾಪಕರಾದ ಶೀಲವಂತ ಶಿವಕುಮಾರ, ಮುಖ್ಯ ಇಂಜಿನಿಯರ್ ಸುನಂದಾ ಜೋಶಿ, ಅಧೀಕ್ಷಕ ಇಂಜಿನಿಯರ್ ಮೋಹನಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here