ಬಿಸಿ ಬಿಸಿ ಸುದ್ದಿ

ಮಾಜಿ ಸಿಎಂ ಬಿಎಸ್ ವೈಗೂ ಖರ್ಗೆಯವ್ರೆ ಸಿಎಂ ಆಗ್ಬೇಕಂತೆ

ಯಾವಾಗ ಮುಖ್ಶಮಂತ್ರಿ ಕುಮಾರಸ್ವಾಮಿಯವ್ರು ಈ ರಾಜ್ಶದ ಮುಖ್ಶಮಂತ್ರಿ  ಖರ್ಗೆಯವರು ಆಗಬೇಕಿತ್ತು ಅಂದ್ರೋ ಅಲ್ಲಿಂದ  ಶುರುವಾಯಿತು ನೋಡಿ ರಾಜಕೀಯದ ಚದುರಂಗದಾಟ. ಹೌದುˌ ಈ ಸಮ್ಮಿಶ್ರ ಸರಕಾರದ ಮುಖ್ಶಮಂತ್ರಿ ಖರ್ಗೆಯವರೇ ಯಾಕಾಗಬಾರದು ಎನ್ನುವ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಕುಮಾರಸ್ವಾಮಿ ತಂದಿಟ್ಟಿದ್ದಾರೆ.

ಈ ಚರ್ಚೆ ರಾಜ್ಶದ ತುಂಬಾ ಹರಿದಾಡುತ್ತಿದೆ. ಅದಕ್ಕೆ ಬಿಎಸ್ ವೈ ಸಹ ಖರ್ಗೆಯವರು ಸಿಎಂ ಆಗಲಿ ಎಂದು ಹೇಳಿರುವುದು ಈ ಆಸೆಗೆ ಮತ್ತಷ್ಟು ರೆಕ್ಕೆಪುಕ್ಕ ಬಂತಾಗಿದೆ. ಅದು ಮಾಜಿ ಪ್ರಧಾನಿ ದೇವೆಗೌಡರ ಕುಟುಂಬದಿಂದ ಈ ಮಾತು ಬಂದಿದೆ ಅಂದ್ರೆ ಮುಗೀತು. ಕೆಲಸ ಸಲೀಸು. ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಶಮಂತ್ರಿ ಮಾಡಬೇಕೆನ್ನುವ ಕಾರಣಕ್ಕಾಗಿಯೇ ಮುಖ್ಶಮಂತ್ರಿ ಕುಮಾರಸ್ವಾಮಿ ಮತ್ತು ದೊಡ್ಡಗೌಡ್ರು ರಹಸ್ಶ ಮಾತುಕಥೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ನಿರ್ಧಾರಕ್ಕೆ ಬರಲು ಜೆಡಿಎಸ್ ಗೂ ಸಾಕಾಗಿದೆ ಎನಿಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಶನವರ ಸರ್ಕಾರದಲ್ಲಿನ ಹಸ್ತಕ್ಷೇಪ ಮೀತಿಮೀರಿದೆ ಎಂದೆನಿಸುತ್ತದೆ. ತಾತ್ಕಾಲಿಕವಾಗಿ ಸಿದ್ದರಾಮಯ್ಶನವರನ್ನು ತೆಪ್ಪಗೆ ಕೂಡಿಸಲು ಖರ್ಗೆ ಸಿಎಂ ಎಂಬ ಮಾತು ಕುಮಾರಸ್ವಾಮಿ ತೇಲಿಬಿಟ್ಟಿದ್ದಾರೆ ಎನಿಸಬಹುದು. ಆದರೆ ಒಳಗೆ ಬೆಂಕಿ ಇದ್ದರೆ ತಾನೇ ಹೊಗೆಯಾಡುವುದು. ಒಂದು ವೇಳೆ ಸಿದ್ದರಾಮಯ್ಯನವರ ಕಿರುಕುಳದಿಂದ ಸರ್ಕಾರ ಬೀಳುವ ಹಂತ ತಲುಪಿದರೆ ಯಾವ ಕಾರಣಕ್ಕೂ ಸಿದ್ದರಾಮಯ್ಯನವರಿಗೆ ಸಿಎಂ ಹುದ್ದೆ ಬಿಟ್ಟುಕೊಡಬಾರದು ಎನ್ನುವ ಶಪಥ ಜೆಡಿಎಸ್ ಮಾಡಿಕೊಂಡಂತೆ ಕಾಣುತ್ತಿದೆ.

ಬಹುತೇಕ ಹಳೆ ಮೈಸೂರ ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಂದರೆ ಸಿದ್ದರಾಮಯ್ಯ ವರ್ಸಸ್ ದೇವೇಗೌಡರ ಕುಟುಂಬದ ಸೆಣಸಾಟ ಇದೆ. ಈ ಭಾಗದಲ್ಲಿ ಒಬ್ಬರಿಗೆ ಪ್ರಭಲರಾಗಲು ಬಿಟ್ರೆ ಇನ್ನೊಬ್ಬರ ರಾಜಕೀಯ ಮುಗಿದು ಹೋದಂತೆ. ಅದಕ್ಕಾಗಿಯೇ ಮಾಜಿ ಸಿಎಂ ಸಿದ್ದರಾಮಯ್ಶನವರನ್ನು ಇನ್ನಿಲ್ಲದಂತೆ ಈ ಕುಟುಂಬ ವಿರೋಧಿಸುತ್ತದೆ. ರಾಜಕೀಯ ಪಂಡಿತರ ಪ್ರಕಾರ ದೇವೇಗೌಡರ ಬಗ್ಗೆ ಹೇಳೋದಾದರೆ ಕಾಂಗ್ರೆಸ್ ನಾಯಕರನ್ನು ಸಹ ಮುಖ್ಶಮಂತ್ರಿ ಮಾಡುವ ತಾಕತ್ತು ಗೌಡರಿಗೆ ಇದೆ. ದಿ.ಧರ್ಮಸಿಂಗ್ ಅವರನ್ನು ಮುಖ್ಶಮಂತ್ರಿ ಮಾಡಿದ ಉದಾಹರಣೆಯೂ ಇದೆ. ಅಲ್ಲದೆ  ದೇವೆಗೌಡರೇ ಹಾಗೆˌ ಎಂದೂ ಹೇಳಿ ಕೆಲಸ ಮಾಡಿದವರಲ್ಲ.

ಗೌಡರ ಪ್ಲಾನ್ ಏನಿರಬಹುದು ಅಂದ್ರೆˌ ಕೇಂದ್ರದಲ್ಲಿ ಯುಪಿಯ ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಕೇಂದ್ರದಲ್ಲಿ ಪ್ರಮುಖ ಹುದ್ದೆ ತಮ್ಮ ಕುಟುಂಬಕ್ಕೆ ಪಡೆಯುವುದು.  ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಶಮಂತ್ರಿ ಮಾಡಿ ಇಡೀ ರಾಜ್ಶದ ದಲಿತರ ಅನುಕಂಪ ಗಿಟ್ಟಿಸುವುದು ಮತ್ತು ಪ್ರಧಾನಮಂತ್ರಿ ಲೇವಲ್ಲಿಗೆ ಹೋದ ನಾಯಕನನ್ನು ದೇವೆಗೌಡರು ಅವಕಾಶ ಕೊಟ್ರು ಎನ್ನುವ ಶಹಬ್ಬಾಶಗಿರಿ ಪಡೆಯುವುದು. ರೇವಣ್ಣ ಅವರನ್ನು ಉಪಮುಖ್ಶಮಂತ್ರಿ ಮಾಡುವುದು. ಸಿದ್ದರಾಮಯ್ಯನವರನ್ನೂ ಸಹ ಕೇಂದ್ರಕ್ಕೆ ಕರೆಸಿಕೊಳ್ಳಿ ಅನ್ನುವ ಸಲಹೆ ಕಾಂಗ್ರೆಸ್ ಹೈಕಮಾಂಡಗೆ ಕೊಡುವುದು. ಖರ್ಗೆಯವರನ್ನು ಸಿಎಂ ಮಾಡಿದರೆ ವಿರೋಧ ಪಕ್ಷಗಳು ಸಹ ತನ್ನಷ್ಟಕ್ಕೆ ತಾನೇ ಸುಮ್ಮನಾಗುತ್ತವೆ. ಖರ್ಗೆ ಸಿಎಂ ಆದ್ಮೇಲೆ ವಿಪಕ್ಷಗಳು ಸರಕಾರ ಕೆಡುವಲು ಪ್ರಯತ್ನಿಸಿದರೆ ದಲಿತ ವಿರೋಧಿ ಪಟ್ಟ ಬಿಜೆಪಿ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವ ಅಳುಕು ಬಿಜೆಪಿ ನಾಯಕರಲ್ಲಿರುತ್ತದೆ.

ಹೀಗೆ ಮಾಡುವುದರ ಮೂಲಕ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವುದು. ಹೀಗೆ ಒಂದೆ ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆಯುವ ಕಲೆ ಗೌಡರು ಮಾಡಿಕೊಂಡಂತೆ ಕಾಣಿಸುತ್ತದೆ. ಇಷ್ಟೆಲ್ಲ ಬೆಳವಣಿಗೆ ಒಳಗೊಳಗೆ ನಡೆದಿದೆ. ಬೆಂಕಿ ಇದ್ದಾಗಲೆ ಹೊಗೆಯಾಡುತ್ತದೆ. ಇದ್ಶಾವುದನ್ನು ಸಿರಿಯಸ್ಸಾಗಿ ತೆಗೆದುಕೊಳ್ಳದ ಮಲ್ಲಿಕಾರ್ಜುನ್ ಖರ್ಗೆಯವರು  ಮಾತ್ರ ಕಲಬುರಗಿಯ ಬುದ್ಧ ವಿಹಾರದಲ್ಲಿ ಧ್ಶಾನ ಮಾಡುತ್ತಿದ್ದಾರೆ. ಇಂತಹದ್ದೆ ಅವಕಾಶ ನನಗೆ ಕೊಡಿ ಅಂತ ನಾನ್ಶಾವತ್ತು ಕೇಳಿಲ್ಲ. ನಾನಂತೂ ಅವಕಾಶವಾದಿಯಲ್ಲ. ನನಗೆ ಆಸೆ ಇರಬಹುದುˌ ದುರಾಸೆ ನನ್ನ ರಕ್ತದಲ್ಲೆ ಇಲ್ಲ ಅಂತ ಸಮಾಧಾನದಿಂದ ಇದ್ದಾರೆ.

ಕಾಲ ಹೇಗೆ ಬರುತ್ತೋ ಯಾರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೋ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ನಾವು ತಾಳ್ಮೆಯಿಂದ ಕಾಯಬೇಕಷ್ಟೆ ಎನ್ನುತ್ತ ಮುಗಿಸೋಣ.

ಡಾ. ಅಶೋಕ್ ದೊಡ್ಮನಿ, ಜೇವರ್ಗಿ (ಎಂಎˌಪಿಹೆಚ್.ಡಿ)

ಮೊಬೈಲ್: 9740202363

emedialine

View Comments

  • ಖರ್ಗೆ ಸಾಹೇಬ್ರು C. M.. ಆದ್ರೆ ಇಡೀ ಕರ್ನಾಟಕ ದಲಿತ ಸಮುದಾಯ. ಖುಷಿ ಪಡುತ್ತೆ

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago