ಆಳಂದ: ಕೋವಿಡ್-೧೯ನಿಂದಾಗಿ ಪಟ್ಟಣದಲ್ಲಿ ನೀರಾಶ್ರೀತರಾದ ಬಡ, ಕೂಲಿ ಕಾರ್ಮಿಮಿಕರಿಗೆ ಬಸವ ಜಯಂತಿಯಂದು ವಕೀಲರೊಬ್ಬರು ಸುಮಾರು ೭೦ ಕುಟುಂಬಗಳಿಗೆ ತಲಾ ೫೦೦ ರೂಪಾಯಿ ಸಹಾಯಧನ ನೀಡಿ ಮಾನವೀಯತೆ ಮರೆದಿದ್ದಾರೆ.
ಜೈನ್‌ಗಲ್ಲಿಯ ನಾಗೇಶ ಶ್ರೀಮಂತರಾವ್ ರೆಡ್ಡಿ ಎಂಬುವ ವಕೀಲರು ಪಟ್ಟಣದಲ್ಲಿನ ಕಡು ಬಡವ ಕೂಲಿ ಕಾರ್ಮಿಕರು, ಸಣ್ಣ-ಪುಟ ಹಮಾಲಿ ಮತ್ತು ಬೀದಿ ಕಾರ್ಮಿಕರಗೆ ಗುರುತಿಸಿ ೫೦೦ ರೂಪಾಯಿ ಸಹಾಯಧನ ಚೆಕ್ ನೀಡಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಅವರು ಬಸವಣ್ಣನವರು ನಮಗೆ ಕಾಯಕ ಮತ್ತು ದಾಸೋಹ ಪರಂಪರೆಯನ್ನು ಕೊಟ್ಟಿದ್ದಾರೆ. ಆ ಒಂದು ಆದರ್ಶ ಪರಂಪರೆಯಲ್ಲಿರುವ ನಾವು ಸಂಕಷ್ಟದಲ್ಲಿದ್ದವರಿಗೆ ಪರಸ್ಪರ ಸಹಕಾರ ತೋರಬೇಕಾಗಿದೆ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ಬಡ ಕಾರ್ಮಿಕರ ಕುಟುಂಬ ತೀರಾ ಸಂಕಷ್ಟದಲ್ಲಿರುವುದನ್ನು ಮನಗಂಡು ಕೈಲಾದ ಮಟ್ಟಿಗೆ ಸಣ್ಣ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ೫೦೦ ರೂಪಾಯಿ ಸಹಾಯಧನ ಮಾಡಿದ್ದೇನೆ. ಕಷ್ಟದಲ್ಲೇ ಬೆಳೆದು ಬಂದ ನಾವು ಬಡವರ ಕಷ್ಟ ಎನೆಂಬುದು ಗೊತ್ತಿದ್ದು, ಅಲ್ಪಸೇವೆಯನ್ನು ಮಾಡಿದ್ದು, ಈ ಸುದ್ದಿಯನ್ನು ಕೇಳಿ ಬಡವರು ಇನ್ನೂ ಬರುತ್ತಿದ್ದಾರೆ. ಬರಿಗೈಯಿಂದ ಕಳುಹಿಸದೆ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ ಎಂದ ಅವರು ಒಟ್ಟು ೧೦೦ ಕುಟುಂಬಗಳಿಗೆ ಸಹಾಯ ಮಾಡುವ ಇಂಗಿತವಿದೆ ಎಂದರು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡ ಜಯಪ್ರಕಾಶ ಬೀದರಿ, ಜಗನಾಥ ಕುಂಬಾರ, ವಾಮನರಾವ್ ರೆಡ್ಡಿ, ಸಂತು ಪಾಟೀಲ ಮತ್ತಿತರರು ಉಪಸ್ಥಿತರಿದ್ದು ನಾಯವಾದಿ ನಾಗೇಶ ರೆಡ್ಡಿ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದರು.