ನಾಗಮಂಗಲ: ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರೀ ಭಗೀರಥ ಜಯಂತಿ ಆಚರಣೆ ಯನ್ನು ಸರಳ ಹಾಗೂ ಸಾಂಕೇತಿಕವಾಗಿ ತಾಲ್ಲೂಕಿನ ಮಿನಿವಿಧಾನಸೌಧ ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ತಹಸಿಲ್ದಾರ್ ಕುಂಞ ಅಹಮದ್ ರವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಶ್ರೀ ರಾಜ ಮಹರ್ಷಿ ಶ್ರೀ ಭಗೀರಥ ಮಹಾರಾಜರ ಕಠಿಣ ಹಾಗೂ ಸುದೀರ್ಘವಾದ 21 ವರ್ಷಗಳ ಕಾಲ ತಪಸ್ಸಿನಿಂದ ದೇವ ಗಂಗೆಯನ್ನು ಭೂಲೋಕ ಹಾಗೂ ಪಾತಾಳಲೋಕಕ್ಕೆ ಕರೆತರಲು ಶ್ರಮಿಸಿದ ಭಗೀರಥ ಮಹರ್ಷಿಗಳು ಎಂತಹ ವಿಘ್ನಗಳು ಬಂದರೂ ಕೂಡ ಎದೆಗುಂದದೆ ಸತತ ಪ್ರಯತ್ನದಿಂದ ತನ್ನ ಪೂರ್ವ ಜರಿಗೆ ಸದ್ಗತಿಯನ್ನು ದೊರಕಿಸಲು ಅವಿರತವಾಗಿ ಪ್ರಯತ್ನಿಸಿ ದೇವ ಗಂಗೆಯನ್ನು ಭೂಲೋಕಕ್ಕೆ ತರುವ ಮೂಲಕ ಭರತ ಭೂಮಿಯನ್ನು ಸ್ವರ್ಗವಾಗಿ ಮಾಡಿದ ಶ್ರೀ ಮಹರ್ಷಿ ಭಗೀರಥ ಮಹಾರಾಜರ ಸಾಧನೆ ಯಶಸ್ವಿಯಾಗುವ ಮೂಲಕ ಪ್ರಯತ್ನಕ್ಕೆ ಭಗೀರಥ ಪ್ರಯತ್ನ ಎಂಬ ಕೀರ್ತಿಗೆ ಕಾರಣರಾದ ಉಪ್ಪಾರ ಸಮಾಜಕ್ಕೆ ಒಂದು ಇತಿಹಾಸವಿದೆ.
ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲ ಸಮುದಾಯಕ್ಕೂ ಬೇಕಾಗುವಂತಹ ಮಹಾಮಹಿಮ ಶ್ರೀ ಭಗೀರಥ ಮಹರ್ಷಿಯವರು.
ಈ ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ, ಶಿರಸ್ತೇದಾರ್ ಉಮೇಶ್,ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾ ಕಾರ್ಯದರ್ಶಿ ಎನ್.ಮಹೇಶ್, ಉಪ್ಪರಹಳ್ಳಿ ವೆಂಕಟೇಶ್, ಉಲ್ಲಾಸ್, ವಸಂತ್, ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…