ಬಿಸಿ ಬಿಸಿ ಸುದ್ದಿ

ದುಡಿಯಲು ಬಿಡದ ಸರಕಾರ ಕುಡಿಯಲು ಅನುಮತಿ ಕೊಡುತ್ತಿದೆ

ವಾಡಿ: ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ದುಡಿಯುವ ಜನರು ಸಂಕಟದ ಬದುಕು ನಡೆಸುತ್ತಿರುವಾಗ, ಸರಕಾರ ಮದ್ಯ ಕುಡಿಯಲು ಅನುಮತಿ ನೀಡುತ್ತಿದೆ. ಲಾಕ್‍ಡೌನ್ ದಿನಗಳಲ್ಲಿ ಜನರ ಬದುಕು ಮತ್ತಷ್ಟು ತೊಂದರೆಗೆ ಸಿಲುಕಿಸುವ ಹುನ್ನಾರ ನಡೆಸಿದೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡುವ ಮೂಲಕ ಮೇ.4 ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಘೋಷಿಸಿರುವ ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿರುವ ಎಐಡಿವೈಒ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ಕೊರೊನಾ ಸೋಂಕು ಪ್ರಸರಣ ತಡೆಗಾಗಿ ದೇಶವೇ ಲಾಕ್‍ಡೌನ್ ಸಂಕಟ ಅನುಭವಿಸುತ್ತಿದೆ. ಲಾಕ್‍ಡೌನ್ ಮುಗಿಯುವ ವರೆಗೂ ಮದ್ಯ ಸೇರಿದಂತೆ ಯಾವುದಕ್ಕೂ ಪರವಾನಿಗೆ ನೀಡುವುದಿಲ್ಲ ಎಂದಿದ್ದ ರಾಜ್ಯ ಸರಕಾರ, ತನ್ನ ರಾಜಸ್ವವನ್ನು ಗಮನದಲ್ಲಿಟ್ಟುಕೊಂಡು ಮೇ.4 ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಸರಿಯಲ್ಲ. ಇದರಿಂದ ಜನರಲ್ಲಿರುವ ಅಲ್ಪಸ್ವಲ್ಪ ಹಣವನ್ನೂ ಕುಡಿತಕ್ಕೆ ಖರ್ಚು ಮಾಡುವಂತೆ ಸರಕಾರವೇ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಆಪಾದಿಸಿದ್ದಾರೆ.

ಮದ್ಯದಂಗಡಿ ತೆರೆಯಲು ಆದೇಶ ನೀಡುವ ಮೂಲಕ ಸರಕಾರ ತನ್ನ ಆದಾಯವನ್ನು ಉತ್ತಮಪಡಿಸಿಕೊಳ್ಳುವ ಆಲೋಚನೆಯೇ ಅಮಾನವೀಯವಾಗಿದೆ. ಅಲ್ಲದೆ ಮದ್ಯ ಮಾರಾಟ ನಿಷೇಧದಿಂದ ವ್ಯಸನಕ್ಕೆ ಬಲಿಯಾದವರ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳಾದುದನ್ನು ಬಿಟ್ಟರೆ ಇನ್ನಾವುದೇ ತೊಂದರೆಗಳಾಗಿಲ್ಲ. ವಾಸ್ತವದಲ್ಲಿ ಈ ನಿಷೇಧದಿಂದಾದ ಅನುಕೂಲಗಳೇ ಹೆಚ್ಚು. ಮದ್ಯ ವ್ಯಸನಿಗಳಿಗೆ ಸದ್ಯ ಗಳಿಕೆಯೇ ಇಲ್ಲದಿರುವಾಗ ಕೂಡಿಟ್ಟ ಹಣವನ್ನು ಕುಡಿತಕ್ಕೆ ಖರ್ಚು ಮಾಡದೆ ಕುಟುಂಬ ಖರ್ಚು ಮಾಡಿದ್ದರಿಂದ ಸಂಸಾರದಲ್ಲಿ ಸಾಮರಸ್ಯ ನೆಮ್ಮದಿ ನೆಲೆಸಿದೆ. ವ್ಯಸನವನ್ನು ಕೈಬಿಡಲು ಇದು ಸುಸಂದರ್ಭ ಎಂದು ಮನೋರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋಟ್ಯಾಂತರ ಮಹಿಳೆಯರ ಬಹುದಿನಗಳ ಬೇಡಿಕೆಯಾದ ಮದ್ಯಪಾನ ನಿಷೇಧಕ್ಕೆ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

3 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

5 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 mins ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

14 mins ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

15 mins ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

37 mins ago