ಸುರಪುರ: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪ ರೈ ಅವರ ಜನ್ಮ ದಿನಾಚರಣೆ ಅಂಗವಾಗಿ ಜಯಕರ್ನಾಟಕ ತಾಲೂಕು ಘಟಕದ ವತಿಯಿಂದ ತಾಲೂಕಿನ ಬೈರಿಮರಡಿ ಗ್ರಾಮದಲ್ಲಿನ ಬಡ ಜನತೆಗೆ ದಿನಸಿ ತರಕಾರಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಶರಣು ನಾಯಕ ಬೈರಿಮರಡಿ ಮಾತನಾಡಿ,ಇಂದು ಕೊರೊನಾ ಕಾರಣದಿಂದ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾದಾಗಿನಿಂದ ಲಕ್ಷಾಂತರ ಕುಟುಂಬಗಳು ನಿತ್ಯವು ದೈನಂದಿನ ಬದುಕಿಗೆ ಕಷ್ಟ ಪಡುವಂತಾಗಿದೆ.ನಮ್ಮ ಸುರಪುರ ತಾಲೂಕಿನಲ್ಲಿಯೂ ಬಡ ಕುಟುಂಬಗಳು ತೀವ್ರ ಕಷ್ಟ ಪಡುತ್ತಿದ್ದು,ಅಂತಹ ಕುಟುಂಬಗಳಿಗೆ ನೆರವಾಗಲೆಂದು ಜಯಕರ್ನಾಟಕ ಸಂಘಟನೆ ಮುಂದೆ ಬಂದಿದ್ದು ಸಂತೋಷದ ಸಂಗತಿಯಾಗಿದೆ ಎಂದರು.
ಸಂಘದ ತಾಲೂಕು ಅಧ್ಯಕ್ಷ ರವಿ ನಾಯಕ ಮಾತನಾಡಿ,ನಮ್ಮ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎನ್.ಮುತ್ತಪ್ಪ ರೈ ಅಣ್ಣನವರ ಮಾರ್ಗದರ್ಶನದಲ್ಲಿ ಇಂದು ಜಯಕರ್ನಾಟಕ ಸಂಘದ ಕಾರ್ಯಕರ್ತರು ನಾಡಿನಾದ್ಯಂತ ಅನೇಕ ಜನಪರ ಸೇವೆ ಮಾಡುತ್ತಿದ್ಧಾರೆ.ಅದರಂತೆ ನಮ್ಮ ತಾಲೂಕು ಘಟಕದಿಂದ ಬಡ ಜನತೆಗೆ ದಿನಸಿ ಹಾಗೂ ತರಕಾರಿ ವಿತರಿಸಲಾಗುತ್ತಿದೆ ಎಂದರು.
ಅಬಕಾರಿ ನಿರೀಕ್ಷಕ ಶ್ರೀಶೈಲ್ ಒಡೆಯರ್ ನೇತೃತ್ವದಲ್ಲಿ ಗ್ರಾಮದ ಅನೇಕ ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ದೇವಪ್ಪ ದೊರಿ ಸಾವೂರ,ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ,ಕಾರ್ಯಾಧ್ಯಕ್ಷ ಶರಣಪ್ಪ,ಯಲ್ಲಪ್ಪ ಕಲ್ಲೊಡಿ,ರವಿ ಹುಲಕಲ್,ಸುಭಾಷ ಹುಲಕಲ್,ರಾಘವೇಂದ್ರ ಗೋಗಿಕೆರ್,ಕೆಂಭಾವಿ ಹೋಬಳಿ ಅಧ್ಯಕ್ಷ ಸೋಮು ಆಲ್ಹಾಳ,ಅಬಕಾರಿ ಸಿಬ್ಬಂದಿ ಸಂದೀಪ ನಾಯಕ,ಮರೆಪ್ಪ ತೇಲ್ಕರ್,ಸಿದ್ದು ಕಾಡಂಗೇರಾ,ನಿಂಗಪ್ಪ ಹುಂಡೇಕಲ್,ನಭೀ ಬೈರಿಮರಡಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…