ಅಂಕಣ ಬರಹ

ಅವ್ವನ ಹೈನುಗಾರಿಕೆಯಿಂದ ಸಮೃದ್ಧಿ ಕಂಡ ಸಂಸಾರ

ನಮ್ಮದು ಚಿಕ್ಕ ಕುಂಟುಂಬ ಆಥಿರ್ಕವಾಗಿ ಸದೃಡರಿಲ್ಲದ್ದಿದ್ದರೂ ನೆಮ್ಮದಿಗೆ ಏನು ಕೊರತೆ ಇದ್ದಿದ್ದಿಲ್ಲ. ನನ್ನ ಅವ್ವ ತೊಟ್ಟಿಲಲ್ಲಿ ಇರುವಾಗೆ ಆಕೆಗೆ ಮದುವೆ ಮಾಡಿದ್ದರಂತೆ.

ನನ್ನ ಅವ್ವ ಸದಾ ಕಾಯಕ ಜೀವಿ ಏನಾದರು ಕೆಲಸ ಮಾಡುತ್ತಾ ಇರುವವರು ನನಗೆ ತಿಳುವಳಿಕೆ ಬಂದಾಗಿಂದ ನಾನು ಕಂಡದ್ದು. ನನ್ನ ಅವ್ವನ ತಮ್ಮ ಅಜ್ಜಿಯಾದ ಅಕ್ಕನಾಗಮ್ಮ ಹಾದಿಮನಿಯವರಿಂದ ಒಂದು ಎಮ್ಮೆ ಕರುವನ್ನು ಖರೀದಿ ಮಾಡಿರುತ್ತಾಳೆ. ಅದನ್ನು  ತನ್ನ ಮಗುವಿನಂತೆ ಅದನ್ನ ಆರೈಕೆ ಮಾಡುತ್ತಿದ್ದಳು.

ಅದು ಒಂದು ಕರು ಹಾಕಿದಾಗ ನಮ್ಮ ಅವ್ವನಿಗೆ ಎಲ್ಲಿಲದ ಸಂಭ್ರಮ. ಹೀಗೆ ಒಂದು ಕರುವಿನಿಂದ 5 ರಿಂದ 6 ಎಮ್ಮೆಗಳು ಸಾಕುತ್ತಾ ಇಡಿ ಸಂಸಾರವನ್ನು ಸಾಗಿಸುತ್ತ ಬರುತ್ತಾಳೆ. ಒಂದೊಮ್ಮೆ ಎಲ್ಲಾ ಎಮ್ಮೆಗಳು ಮೇಯಲು ಹೋದಾಗ ಹಳಿಸಗರ ಸೀಮೆಯಲ್ಲಿ ಸಂಗಣ್ಣಗೌಡರ ಹೊಲದಲ್ಲಿ ಮೇಯುತ್ತಿರುವಾಗ ಗೌಡರ ಆಳು ನೋಡಿ ಒಂದು ಎಮ್ಮೆಯನ್ನು ಕಡಿದು ಹಾಕುತ್ತಾರೆ. ನನ್ನ ಅವ್ವ ಹಗಲು ರಾತ್ರಿ ಎನ್ನದೆ ಎಮ್ಮೆಗಳನ್ನು ಹುಡುಕುತ್ತ ಹೋಗುತ್ತಿರುವಾಗ ನನ್ನ ಅವ್ವನಿಗೆ ಆ ದೃಶ್ಯ ನೋಡಿ ನನ್ನ ಅವ್ವನಿಗೆ ದಿಕ್ಕು ತೋಚದಂತಾಗುತ್ತದೆ. ಎಮ್ಮೆ ಸತ್ತು ಹೋಗಿರುತ್ತದೆ. ಅದರ ಕರು ಅವ್ವನನ್ನು ನೋಡಿ ಅವ್ವನ್ನು ತನ್ನ ತಾಯಿ ಕರೆದುಕೊಂಡು ಹೋಗಿ ತನ್ನ ಮೂಕವೇದನೆಯನ್ನು ತೋಡಿಕೊಳ್ಳುತ್ತದೆ.

ಕರು ತನ್ನ ಮುಖದಿಂದ ತನ್ನ ತಾಯಿಯನ್ನು ಎತ್ತಲು ಪ್ರಯತಿಸುತ್ತೆ. ಆ ಮನಕಲಕುವ ಘಟನೆಯಿಂದ ನನ್ನಅವ್ವ ಕುಗ್ಗಿ ಹೋಗುತ್ತಾಳೆ. ನನ್ನವ್ವನ ರೋಧನೆ ನೋಡಲಾಗದ್ದು ತನ್ನ ಸ್ವಂತ ಮಗುವಿನಂತೆ ಸಾಕಿದ ಎಮ್ಮೆಯನ್ನು ಕಳದುಕೊಂಡು ಕೆಲದಿನಗಳು ಅದರ ನನಪಿನಲ್ಲೆ ಮರಗುತ್ತಾಳೆ. ಮನೆಯ ಎಲ್ಲಾ ಸದಸ್ಯರು ಕಣ್ಣಿರಾಕ್ಕಿದ್ದು ಉಂಟು. ಇದರ ಜೊತೆಗೆ ಅವ್ವ ಕುಂಬಾರಿಕೆಯನ್ನು ಕೂಡ ಮಾಡುತ್ತಿರುತ್ತಾಳೆ. ದಿನನಿತ್ಯ ಮುಂಜಾನೆ ಎದ್ದು ಮನೆಕೆಲಸ ಮುಗಿಸಿ ಹಾಲುಕರೆದು ಮಾರಾಟ ಮಾಡಿ ತದನಂತರ ಎಮ್ಮಗೆ ಹುಲ್ಲು ತರಲು ದಿನಾಲೂ 8 ರಿಂದ 10 ಕೀಲೋಮಿಟರ ವರೆಗೆ ಕಾಲ ನಡಗೆಯಲ್ಲೇ ಹೋಗಿ ಮೇವು ತರುತ್ತಾಳೆ ಆಕೆ ತಂದ ಮೇವಿನ ಹೊರೆ ನನ್ನಗಾಗಲಿ ನನ್ನ ಅಣ್ಣ ,ಅಕ್ಕನಿಗಾಗಲಿ ಹೊತ್ತುತರಲು ಆಗುತ್ತಿದ್ದಿಲ್ಲ ಅಂತ ಹೊರೆ 8 ರಿಂದ 10 ಕೀಲೋಮಿಟರ ಹೊತ್ತು ತರುತ್ತಿದ್ದಳು.

ಅವ್ವ ಕೊಂಚೆವೊತ್ತು ವಿಶ್ರಾಂತಿ ಪಡೆದು ಮತ್ತೆ ಕುಂಬಾರಿಕೆ ಕೆಲಸ ಈಗೆ ದಿನವಿಡಿ ಕೆಲಸದಲ್ಲಿ ನಿರತವಾಗಿರುತ್ತಿದ್ದಳು ನನ್ನ ಅವ್ವ ಮಣ್ಣಿನ ಒಲೆ ಹಾಕುತ್ತಿದ್ದು ಆಕೆಯ ಕೆಲಸದಲ್ಲಿ ಅಣ್ಣ,ಅಕ್ಕ,ನಾನು ಸಹಾಯ ಮಾಡುತ್ತಿದ್ದೆವು. ಮಣ್ಣಿನ ಒಲೆಗಳನ್ನು ಆವಿಗೆಯಲ್ಲಿ ಆಕಿ ಸುಡುವುದಕ್ಕೆ ನಮ್ಮ ಮಾವಂದಿರು ಸಾಹಯಕ್ಕೆ ಬರುತ್ತಿದ್ದು ಈಗೆ ಕೆಲವು ದಿನಗಳ ನಂತರ ನಮ್ಮ ಮಾವನವರು ಸಹಾಯಕ್ಕೆ ಬರುವುದನ್ನು ನಿಲ್ಲಿಸಿ ಬಿಟ್ಟರು. ತದನಂತರ ಬೇರೆಯವರ ಸಹಾಯದಿಂದ ಆವಿಗೆ ಸುಡುವುದನ್ನು ನಾನು ಕಲಿತೆ. ಮುಂದೆ ಬೇರೆಯವರಂಗೆ ನಾನೆ ಸ್ವತಾ ಸುಡುತ್ತಿದ್ದೆ ಈಗಿರುವಾಗ ಈ ಎಲ್ಲವನ್ನು  ನೋಡಿ ಸಹಿಸದವರು ಹೊಟ್ಟೆ ಹುರಿಪಟ್ಟುಕೊಂಡವರು.  ಈ ಎಲ್ಲದರ ಮಧ್ಯೆ ನನ್ನವನ ದೈರ್ಯ ಮತ್ತು ಸಾಧಿಸುವ ಚಲ ಬಿಡಲ್ಲಿಲ್ಲ ನಿರಂತರವಾಗಿ ನಡೆದುಕೊಂಡುಬಂತು ಈತರ ಮಧ್ಯ ಇನ್ನೊಂದು  ಎಮ್ಮೆಗೆ ಆರೋಗ್ಯ ವತ್ಯಾಸ ವಾಗಿ ಅದರ ಕಣ್ಣು ಕಾಣದಂತ್ತಾಗಿತ್ತು . ನನ್ನ ಅವ್ವ ಅದಕ್ಕೆ  ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದಳು ಪ್ರಯೋಜನವಾಗಲ್ಲಿಲ್ಲ.

ತದನಂತರ ನಾಟೀ ವೈದ್ಯರ ಕರಿಸಿ ಚಿಕಿತ್ಸೆ ಕೊಡಿಸಿದಳು. ಅದು ಕೂಡ ಪಲಕಾರಿಯಾಗಲ್ಲಿಲ್ಲ ತನ್ನ ಸ್ವಂತ ಮಗುವಿನಂತೆ ಅದಕ್ಕೆ ಕೆಲವು ದಿನ ಆರೈಕೆ ಮಾಡಿದ್ದಳು. ತನ್ನ ಕೈತುತ್ತು ತಿನಿಸುತ್ತಿದ್ದಳು ಅದಕ್ಕೆ ಕಣ್ಣು ಕಾಣದ್ದಿದ್ದರಿಂದ ನನ್ನ ಅವ್ವನೆ ಅದಕ್ಕೆ ತಿನಿಸುತ್ತಿದ್ದಳು. ಹೀಗಿರುವಾಗ ಕೆಲವರು ಅವ್ವನಿಗೆ ಬೈದರು. ಅದರ ಜೊಡಿ ನಿನ್ನು ಉಪವಾಸ ಬಿಳತ್ತಿ ಏನು ಅಂತ ಬೈಯುತ್ತಿದ್ದರು. ಕೆಲವರು ಅದನ್ನು ಕಟುಕರಿಗೆ ಕೊಡು ಅಂತ ಕೆಲವರು  ಅದಕ್ಕೆ ಅವ್ವ ಇಷ್ಟು ದಿನಾ ಅದು ನನ್ನ ಮಗುವಿನಂತೆ ಸಾಕಿದ್ದಿನಿ ಅದನ್ನು ಹೇಗೆ ಕಟುಕರಿಗೆ ನೀಡಲಿ ಎಂದು ನನ್ನ ಅವ್ವ ಕಣ್ಣಿರಾಕ್ಕುತ್ತಿದ್ದಳು.  ಈ ಘಟನೆ ಕಣ್ಣಾರೆ ಕಂಡು ಅತ್ತದ್ದು ಇದೆ.

ಹೈನುಗಾರಿಕೆ ಮತ್ತು ಕುಂಬಾರಿಕೆ ಯಿಂದ ಕೂಡಿ ಇಟ್ಟ ಹಣದಿಂದ ಜಮೀನು ಖರೀದಿಸುವ ಬಯಕೆ ಯಾಗುತ್ತದೆ. ಕೆಲವು ದಿನಗಳ ನಂತರ ಯಾರೊ ಮಡ್ನಾಳ ಸೀಮಿಯಲ್ಲಿ ನಾಲ್ಕು ಎಕರೆ ಜಮೀನು ಮಾರಾಟಕ್ಕೆ ಇದೆ ಎಂದು ಗೊತ್ತಾಗುತ್ತದೆ. ಅದಕ್ಕ ನನ್ನ ಅವ್ವ ಅದನ್ನು ಖರೀದಿಸಬೇಕು ಎಂದು ಮಾತನಾಡುತ್ತಾಳೆ. ಆಗ ಅಪ್ಪ ರೊಕ್ಕ ಎಲ್ಲಿಯಾವ ನನ್ನ ಬಲ್ಲಿ ರೊಕ್ಕ ಇಲ್ಲ . ನೋಡು ಅನ್ನುತ್ತಾನೆ ಆಗ ನನ್ನ ಬಳಿ ಒಂದಿಷ್ಟು ಆವ ಕೇಳಿ ನೋಡು ಅಂತ ಹೇಳುತ್ತಾಳೆ. ಆಗ ಅಪ್ಪ ಮತ್ತೆ ಅವರ ಸ್ನೇಹಿತರು ಸೇರಿ ಮಾತನಾಡುತ್ತಾರೆ. 40 ಸಾವಿರಕ್ಕ ಮಾತು ಮುಗಿಯುತ್ತದೆ. ಆಗ ಅವ್ವನ ಬಳಿ ಅಷ್ಟೊಂದು ಹಣ ಇರುವುದಿಲ್ಲ.

ಆಗ ತಮ್ಮ ಕಾಕ ಮಡಿವಾಳಪ್ಪ ಹಾದಿಮನಿ ಹತ್ತಿರ ಸಾಲ ಪಡೆದು ಜಮೀನು ಖರೀದಿಸುತ್ತಾಳೆ. ಕೊನೆಗೂ ತಾನು ಕಂಡ ಜಮೀನಿನ ಕನಸು ನನಸಾಗುತ್ತದೆ. ರಜಿಷ್ಟಾರ ಮಾಡಿಸುವಾಗ ಅಪ್ಪ ನಿನ್ನ ಹೆಸರಿಗೆ ಮಾಡಿಸಿಕೊ ಅಂತ ಹೇಳುತ್ತಾನೆ ಆಗ ಅವ್ವ ನಾನೆನು ಮಾಡಲ್ಲಿ ನನ್ನ ಹೆಸರು ಬೇಡ ನಿನ್ನ ಹೆಸರಿಲ್ಲೆ ಮಾಡಿಸಿಕೊ ಅಂತ ಅವ್ವ ಹೇಳುತ್ತಾಳೆ ಕೊನಗು ಅಪ್ಪನ ಹೆಸರಿಗೆ ರಜಿಷ್ಟಾರ ಆಗುತ್ತದೆ  ಅವ್ವನಿಗೆ ಎಲ್ಲಿಲ್ಲದ ಸಂತೋಷ ಜಮೀನು ಖರೀದಿಸಿದ್ದಕ್ಕೆ. ಮಣ್ಣೆತ್ತಿನ ಅಮವಾಸೆ ಬಂದರೆ ನಮ್ಮ ಅವ್ವ ಮಾಡುವ ಮಣ್ಣೆಎತ್ತು ಮಾರಾಟ ಮಾಡುವುದು ನನಗೆ ಎಲ್ಲಿದ ಸಂತೋಷ ಯಾಕೆಂದರೆ ಮಾರಾಟ ಮಾಡಿದರಲ್ಲಿ ನನಗೂ ದುಡ್ಡು ಸಿಗುತ್ತಿತ್ತು .

– ಸಾಯಿಕುಮಾರ ಇಜೇರಿ, ಶಹಾಪುರ

(ಮುಂದುವರಿಯುವುದು)

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

12 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago