ಕಲಬುರಗಿ: ನಗರದ ಖಮರ್ ಕಾಲೋನಿ ಬಡಾವಣೆಯಲ್ಲಿ ಮನೆಯ ಮೇಲೆ ಆಟ ಆಡುತಿದ್ದಾಗ ವಿದ್ಯುತ್ ತಂತಿ ತಗುಲಿದ ಪರಿಣಾಮ ಗಂಭೀರ ಗಾಯಗಳಾದ ಘಟನೆ ಸಂಭವಿಸಿದೆ
ಮಹ್ಮದ್ ರಿಯಾಜುದ್ದೀನ್ (12) ವಿದ್ಯುತ್ ಸ್ಪರ್ಶಿಸಿ ಗಾಯಗೊಂಡ ಬಲಾಕ, ಮಹ್ಮದ್ ನಸಿರೋದ್ದಿನ್ ಅವರ ಮಗನಾದ ರಿಯಾಜುದ್ದೀನ್ ಸಂಜೆ ವೇಳೆಯಲ್ಲಿ ತನ್ನ ಮನೆಯ ಮೇಲೆ ಆಟ ಆಡುತ್ತಿದ್ದಾಗ, ಮನೆ ಮೇಲೆ ಹಾದೂ ಹೊಗಿರುವ ಹೈ ಟನ್ಷನ್ ವಿದ್ಯುತ್ ಪ್ರಸರಣವಾಗು ವೈರ್ ನಿಂದ ಮಗುವಿಗೆ ವಿದ್ಯುತ್ ತಗುಲಿದ ಪರಿಣಾಮ ಮಗು ಬಹುತೇಖ ಅಂಗಾಂಗಳು ಸುಟ್ಟು ಗಂಭೀರ ಗಾಯವಗಿದೆ. ಮಗುವಿಗೆ ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ, ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಯ ವೈದ್ಯರು ಮೀರಜ್ ಆಸ್ಪತ್ರೆಗೆ ದಾಖಲಿಸುವಂತೆ ಸಿಫಾರಸು ಮಾಡಿದ್ದಾರೆಂದು ತಂದೆ ನಸಿರೋದ್ದಿನ್ ತಿಳಿಸಿದ್ದಾರೆ.
ಘಟನೆಯಲ್ಲಿ ಮನೆ ಮೇಲ್ಚಾವಣಿ ಮೇಲೆ ವಿದ್ಯುತ್ ಪ್ರಸರಣದ ಲೋಹದ ರಸ್ ಬಿದಿರುವುದರಿಂದ ಮಗುವಿಗೆ ವಿದ್ಯುತ್ ತಗುಲಿ ಗಂಭೀರ ಗಾಯವಾಗಿರ ಬಹುದೆಂದು ಅನುಮಾನಿಸಲಾಗಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ಘಟನೆ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಕಲಬುರಗಿ ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆಳಲು ತೋಡಿಕೊಂಡಿದ್ದು, ಶಾಸಕಿ ಕನೀಝ್ ಫಾತೀಮ್ ಅವರು ಈ ಕುರಿತು ಗಮನ ಹರಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.