ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಕೇಸ್ ಹಾಕಲಾಗಿದೆ: ಮಾಜಿ ಸಚಿವ ಪಾಟೀಲ

0
62

ಸೇಡಂ : ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಶಾಸಕರು ಸರ್ಕಾರದ ಭಾಗವಾಗಿದೆ ಎಲ್ಲೆಡೆಯೂ ಸಂಚಾರಕ್ಕೆ ಅವಕಾಶವಿದೆ ಎಂದಿದ್ದಾರೆ. ಅದರೆ ಶಾಸಕ ಸರ್ಕಾರದ ಭಾಗವಲ್ಲ ಎಂಬುವುದು ತೇಲ್ಕೂರ ಅರಿತುಕೋಳಬೇಕು ಕಾನೂನಿನ ತರಬೇತಿ ನನಗೆ ಅವಶ್ಯಕತೆ ಇಲ್ಲಾ ಶಾಸಕರಿಗೆ ಆಡಳಿತ  ಬಗೆ ಡಿಪಿಆರ್ ಗೆ ಪತ್ರ ಬರೆದರೆ ಕಾನೂನು ಇತಿ ಮಿತಿಗಳ ಬಗ್ಗೆ ತಿಳಿಸುತ್ತಾರೆ ಎಂದು ತಿರುಗೇಟು ನೀಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಕರೋನಾ ಮಹಾಮರಿಯಿಂದ ಇಡೀ ದೇಶವೇ ತತ್ತರಿಸಿದೆ ಇದರ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಸಂಕಷ್ಟ ದಲ್ಲಿ ಇರುವ ಜನರ  ಸಮಸ್ಯೆಯನ್ನು ಆಲಿಸಲು ಸುಲೆಪೇಟ್ ಗೆ ಹೋಗಿದ್ದೆನೆ.ಹೊರತು ರಾಜಕೀಯ ಸಭೆ ನಡೆಸಲು ಅಲ್ಲ. ದುರುದ್ದೇಶದಿಂದ ನನ್ನ ಮೇಲೆ ಕೇಸ್ ಹಾಕಿದ್ದಾರೆ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಮತ್ತು ಸಂಸದರು ಉಮೇಶ್ ಜಾಧವ್ ಒತ್ತಡಕ್ಕೆ ಪ್ರಕರಣ ದಾಖಲಾಗಿದೆ. ಇದ್ಯಾವುದಕೂ ನಾವು ಹೆದರಲ್ಲಾ ಎಂದು ಗುಡಿಗಿದರು.

Contact Your\'s Advertisement; 9902492681

ಉದ್ಯೋಗ ಖಾತ್ರಿ  ಯುಪಿಎ ಕೊಡುಗೆ, ಈ ಉದ್ಯೋಗ ಖಾತ್ರಿ ಯೋಜನೆಯ ಜಾರಿವೇಳೆ ಮೋದಿ ಅಪಹಾಸ್ಯ ಮಾಡಿದ್ದರು.ಮತ್ತು ಕೇಂದ್ರ ಸರ್ಕಾರ ಘೋಷಿಸಿದ ೨೦ಲಕ್ಷ ಕೋಟಿ ಪ್ಯಾಕೇಜ್ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಇದರಿಂದ ಬಡವರಿಗೆ ನಯ್ಯಾಪೈಸೆ ಲಾಭವಿಲ್ಲ.ಬಡವರಿಗೆ ಕೇವಲ ಕಣ್ಣೂರಿಸುವ ತಂತ್ರವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ನಾಗೇಶ್ವರಾವ ಮಾಲಿಪಾಟೀಲ, ಮುದೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟರಾಮ ರೆಡ್ಡಿ ಕಡತಾಳ,ಸತೀಶ್ ರೆಡ್ಡಿ ಪಾಟೀಲ್ ರಂಜೋಳ,ಸುದರ್ಶನ ರೆಡ್ಡಿ ಪಾಟೀಲ್,ರಾಜಶೇಖರ ಪುರಾಣಿಕ,ಉಮಾ ರೆಡ್ಡಿ ಹಂದರಕಿ ಮತ್ತು ಸಂತೋಷ ತಳವಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here