ಕಲಬುರಗಿ: ನಡೆದು ನುಡಿದಂತಿರುವ ವಚನ ಸಾಹಿತ್ಯವನ್ನು ರಚಿಸುವುದು ಮಾತ್ರವಲ್ಲ ತಮ್ಮ ಜೀವದ ಹಂಗು ತೊರೆದು ವಚನ ಬರೆದು ಸಾಹಿತ್ಯ ಸಂರಕ್ಷಿಸಿದ ವಚನಕಾರರು ಅಮೂಲ್ಯವಾದ ವಿಚಾರ ಸಂಪತ್ತನ್ನು ನಮ್ಮ ಕೈಗಿತ್ತು ಹೋಗಿದ್ದು, ಅದನ್ನು ಫ.ಗು. ಹಳಕಟ್ಟಿ, ಹರ್ಡೆಕರ್ ಮಂಜಪ್ಪ, ಉತ್ತಂಗಿ ಚನ್ನಪ್ಪ, ಡಾ. ಎಂ. ಎಂ. ಕಲ್ಬುರ್ಗಿ ಮುಂತಾದವರು ಅದನ್ನು ಉಳಿಸಿ ಬೆಳಸಿಕೊಂಡು ಬಂದಿರುವುದರಿಂದಲೇ ಜಗತ್ತು ಇಂದು ವಚನ ಕ್ರಾಂತಿಯ ಕಡೆ ನೋಡುವಂತಾಗಿದೆ ಎಂದು ಬಸವ ತತ್ವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ನಗರದ ರಾಜಾಪುರದ ಪಾವನಗಂಗಾ ಕಾಲೋನಿಯಲ್ಲಿ ವಿಶ್ವಗುರು ಬಸವಣ್ಣನವರ ೮೮೬ನೇ ಬಸವ ಜಯಂತ್ಯುತ್ಸವ ನಿಮಿತ್ತ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಜಯಂತಿ ಉತ್ಸವ ಸಮಿತಿ, ಡಾ. ಎಂ.ಎಂ. ಕಲ್ಬುರ್ಗಿ ಇವುಗಳ ಸಹಯೋಗದಲ್ಲಿ ಇಂದು ಸಂಜೆ ಆಯೋಜಿಸಿದ್ದ ಬಸವ ಜಯಂತಿ ಉತ್ಸವ-೨೦೧೯ ಕಾರ್ಯಕ್ರಮದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಕಲ್ಯಾಣ ಕ್ರಾಂತಿ ಇಡೀ ವಿಶ್ವಕ್ಕೆ ಮಾದರಿಯಾದದು ಎಂದು ಹೇಳಿದರು.
ಲಿಂಗಾಯತರಿಗೆ ಬಸವಣ್ಣನವರ ಕುರಿತು ಅಭಿಮಾನ ಇದೆ. ಗೌರವ ಇಟ್ಟುಕೊಂಡಿದ್ದಾರೆ. ಆದರೆ ವಿವೇಕ, ವಿಚಾರ ಹೃದಯವಂತಿಕೆ ಬೆಳೆಸಿಕೊಂಡಿಲ್ಲ. ಹೀಗಾಗಿಯೇ ಲಿಂಗಾಯತರಾದ ನಾವುಗಳು ದಿಕ್ಕು ತಪ್ಪುತ್ತಿದ್ದೇವೆ ಎಂದರು.
ಹೀಗಾಗಿಯೇ ಡಾ. ಕಲ್ಬುರ್ಗಿ ಯವರು, ದರಿದ್ರರ ಮನೆಯಲ್ಲಿ ಭಾಗ್ಯವಂತ ಹುಟ್ಟಿದ್ದಾನೆ ಎಂದು ನೊಂದು ನುಡಿದಿದ್ದರು. ಪ್ರಶ್ನೆ ಮಾಡುವ ಪ್ರವೃತ್ತಿಯಿಂದಲೇ ಮನುಷ್ಯ ಬೆಳೆಯುತ್ತಾನೆ. ಆದರೆ ಪ್ರಶ್ನೆ ಮಾಡಿದ ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ಅವರನ್ನು ನಮ್ಮ ಸಮಾಜ ಬದುಕಲು ಬಿಡಲಿಲ್ಲ. ಅವರನ್ನು ಗುಂಡಿಟ್ಟು ಕೊಲ್ಲುವ ವ್ಯವಸ್ಥಿತ ಸಂಚು ಈ ದೇಶದಲ್ಲಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸತ್ಯವನ್ನು ಹೇಳಿದ ಗೆಲಿಲಿಯೊ ಅವರನ್ನು ಗಲ್ಲಿಗೇರಿಸಲಾಯಿತು. ಸಾಕ್ರಟೀಸ್ ಗೆ ವಿಷ ಕೊಟ್ಟು ಸಾಯಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
ಬಸವವಾದಿಗಳು ಪ್ರಶ್ನಿಸುವ ಮನೋಭಾವ, ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡಾಗ ಮಾತ್ರ ಶರಣರ ವಿಚಾರಗಳ ಮೆರವಣಿಗೆ ಸಾಧ್ಯ ಎಂದು ಒತ್ತಿ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಸುಲಫಲ ಮಠದ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಮಾತನಾಡಿ, ಬ್ರಿಟಿಷರ ಕಾಲದಲ್ಲೇ ಸ್ವತಂತ್ರವಾಗಿದ್ದ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಇಂದು ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂದು ಹೋರಾಟ ಮಾಡುವ ಅನಿವಾರ್ಯತೆ ಬಂದಿರುವುದು ನಮ್ಮಲ್ಲಿರುವ ಅಭಿಮಾನಶೂನ್ಯತೆಯೇ ಕಾರಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕ ಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಮಾತನಾಡಿ, ಕಾಯಕ ದಾಸೋಹ ಪರಂಪರೆ ಕಲಿಸಿಕೊಟ್ಟ ಶರಣರು ಅಪ್ಪಟ ವಾಸ್ತವವಾದಿಗಳಾಗಿದ್ದರು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಈರಣ್ಣ ಹೊನ್ನಳ್ಳಿ ಉದ್ಘಾಟಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಪ್ರಭುಲಿಂಗ ಮಹಾಗಾಂವಕರ, ರವೀಂದ್ರ ಶಾಬಾದಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಮಹಾಂತೇಶ ಕಲಬುರಗಿ, ಅಮರ ಮಹಾಂತಗೋಳ, ಶಶಿಕಾಂತ ಕೆ. ಹಾಸಗೊಂಡ ಉತ್ಸವ ಸಮಿತಿ ಸದಸ್ಯರು ಇದ್ದರು.
https://m.facebook.com/story.php?story_fbid=1295010613985339&id=100004292377617
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…