ಕಲಬುರಗಿ: ನಗರದ ಹಜ್ ಹೌಸ್ ಮತ್ತು ಮೊಹ್ಮದಿ ಖಮರುಲ್ ಆಬಾದ್ ಈದ್ಗಾ ಮೈದಾನದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಖಮರುಲ್ ಇಸ್ಲಾಂ ಪುತ್ರ ಫರಜೂಲ್ ಇಸ್ಲಾಂ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕಮೀಟಿ ಪದಾಧಿಕಾರಿಗಳು ತಿಳಿಸಿದ್ದಾರೆ.
ನಗರದ ಹಾಗರಗಾ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ಈದ್ಗಾ ಮೈದಾನಕ್ಕೆ ಹಾಗೂ ಹಜ್ ಹೌಜ್ ಕಮೀಟಿಗೆ ಸದಸ್ಯರು ಇಸ್ಲಾಂ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ಮುಂದಿನ ಕಾರ್ಯ ಯೋಜನೆಗಳ ಜವಾಬ್ದಾರಿ ಕಮೀಟಿ ಅಧ್ಯಕ್ಷ ಫರಾಜೂಲ್ ಇಸ್ಲಾಂ ಅವರು ವಹಿಸಲಿದ್ದಾರೆಂದು ಕಮೀಟಿ ತಮ್ಮ ಪ್ರಕಟಣೆ ತಿಳಿಸಿದೆ.