ಕಲಬುರಗಿ: ಮಹಾರಾಷ್ಟ್ರ ರಾಜ್ಯ ಪ್ರವಾಸದಿಂದ ಮರಳಿರುವ ಜಿಲ್ಲೆಯ 3 ಜನರಿಗೆ ಗುರುವಾರ ಬೆಳಿಗ್ಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
ಸೇಡಂ ತಾಲೂಕಿನ ಮೇದಕ್ ಗ್ರಾಮದ 30 ವರ್ಷದ ಮಹಿಳೆ (P-2422), ಶಹಾಬಾದ ತಾಲೂಕಿನ ಭಂಕೂರ ಬಳಿಯ ತರಿ ತಾಂಡಾದ 30 ವರ್ಷದ ಮಹಿಳೆ (P-2492) ಹಾಗೂ ಚಿತ್ತಾಪುರ ತಾಲೂಕಿನ ಅನಿಕೇರಿ ಬಳಿಯ ರಾಮಾನಾಯಕ್ ತಾಂಡಾ ಮೂಲದ 9 ವರ್ಷದ ಬಾಲಕನಿಗೆ (P-2493) ಕೋವಿಡ್-19 ದೃಢವಾಗಿದೆ.
ಇವರೆಲ್ಲರು ಸರ್ಕಾರಿ ಕ್ವಾರಂಟೈನ್ ದ್ದಲ್ಲಿ ಇದ್ದವರಾಗಿದ್ದು, ಸೋಂಕು ಪತ್ತೆಯಾದ ಕೂಡಲೆ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 188ಕ್ಕೆ ಹೆಚ್ಚಳವಾಗಿದೆ. ಇದರಲ್ಲಿ 75 ಜನ ಗುಣಮುಖರಾಗಿದ್ದರೆ, 7 ಜನರು ನಿಧನ ಹೊಂದಿದ್ದಾರೆ. ಉಳಿದಂತೆ 106 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ.ಶರತ್ ಬಿ. ಮಾಹಿತಿ ನೀಡಿದರು.