ಶಾಸಕರ ವಿರುದ್ಧ ಆರೋಪ ಮಾಡಿದ ಬಿಸಿಎಂ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ MLA ಹಿಂಬಾಲಕರು!

0
167

ಕಲಬುರಗಿ: ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಅವರ ವಿರುದ್ಧ ವರ್ಗಾವಣೆ ಹಾಗೂ ಕೊರಾನಾ ಕಿಟ್ ಕೇಳಿದ ಆರೋಪ ಮಾಡಿದ ಬಿಸಿಎಂ ಅಧಿಕಾರಿ ಸಂಗಾ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಂಗಾ ತಿಳಿಸಿದ್ದಾರೆ.

ಈ ಕುರಿತು ಗುಲ್ಬರ್ಗ ವಿವಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಅವರು, ಶಾಸಕರ ವಿರುದ್ಧ ನಿನ್ನೆ ಮಾಡಲಾದ ಆರೋಪ ಮಾಧ್ಯಮಗಳಲ್ಲಿ ಬಿತ್ತರಗೊಂಡ ಸುದ್ದಿ ನೋಡಿ ನನಗೆ ಬೆದರಿಕೆ ಕರೆ ಬರುತ್ತಿವೆ.

Contact Your\'s Advertisement; 9902492681

ಶಾಸಕರ ಬೆಂಬಲಿಗರು ಎಂದು ಹೇಳಿಕೊಂಡು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here