ಕಲಬುರಗಿ: ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಅವರ ವಿರುದ್ಧ ವರ್ಗಾವಣೆ ಹಾಗೂ ಕೊರಾನಾ ಕಿಟ್ ಕೇಳಿದ ಆರೋಪ ಮಾಡಿದ ಬಿಸಿಎಂ ಅಧಿಕಾರಿ ಸಂಗಾ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಂಗಾ ತಿಳಿಸಿದ್ದಾರೆ.
ಈ ಕುರಿತು ಗುಲ್ಬರ್ಗ ವಿವಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಅವರು, ಶಾಸಕರ ವಿರುದ್ಧ ನಿನ್ನೆ ಮಾಡಲಾದ ಆರೋಪ ಮಾಧ್ಯಮಗಳಲ್ಲಿ ಬಿತ್ತರಗೊಂಡ ಸುದ್ದಿ ನೋಡಿ ನನಗೆ ಬೆದರಿಕೆ ಕರೆ ಬರುತ್ತಿವೆ.
ಶಾಸಕರ ಬೆಂಬಲಿಗರು ಎಂದು ಹೇಳಿಕೊಂಡು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.