ಕಲಬುರಗಿ: ನಗರದ ನೂರಾನಿ ಮೊಹಲ್ಲಾದಲ್ಲಿ ಇಂದು ಬೆಳಗ್ಗೆ ನಮ್ಮ e-ಮೀಡಿಯಾ ಲೈನ್ ಸಹ ಸಂಪಾದಕ ಸಾಜಿದ ಅಲಿ ಅವರ ವಿವಾಹ ನೆರವೇರಿತು.
ಧರೆಗೆ ವಕ್ಕರಿಸಿದ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕೆಲವೇ ಕೆಲವು ಬೆರಳೆಣಿಕೆಯಷ್ಟು ಬಂಧು- ಬಾಂಧವರ ಮಧ್ಯೆ ಅತ್ಯಂತ ಸರಳ ರೀತಿಯಲ್ಲಿ ವಿವಾಹ ಸಮಾರಂಭ ನೆರವೇರಿತು.
ಕೊರೊನಾದಂತಹ ಈ ಸಂದರ್ಭದಲ್ಲಿ ಆಪ್ತೇಷ್ಟರನ್ನು ಸಹ ಆಹ್ವಾನಿಸಲಾಗದೆ ಮದುವೆ ಮಾಡಿಕೊಳ್ಳಬೇಕಾದ ಪ್ರಸಂಗ ಬಂದೊದಗಿರುವುದಕ್ಕೆ ಸಾಜೀದ್ ಅಲಿ ಬೇಸರಗೊಂಡಿದ್ದಾರೆ.
ಆದರೇನಂತೆ? ಬಂಧು-ಬಾಂಧವರ, ಗೆಳೆಯರ ಹಾರೈಕೆಯೇ ನನಗೆ ಶ್ರೀರಕ್ಷೆ ಎಂದು ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ದುಂಧು ವೆಚ್ಚ ಮಾಡಿ ಮದುವೆ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಕೊರೊನಾ ಇದಕ್ಕೆ ಕಡಿವಾಣ ಹಾಕಿದ್ದು ಎಚ್ಚರಿಕೆಯ ಪಾಠ ಎಂದು ಹೇಳಬಹುದು.