ರಾಜ್ಯ ಮಟ್ಟದ ಅಂತರ್ಜಾಲ ಕಥಾಕಥನ ಸ್ಪರ್ಧೆ: ಪ್ರೇಮಾ, ಶ್ರೇಯಾ ಪ್ರಥಮ ಸ್ಥಾನ

1
179

ಸೊಲ್ಲಾಪುರ:- ಸದ್ಯ ವಿಶ್ವ ತುಂಬಾ ಕೊರೋನಾ ಹಾವಳಿ. ಎಲ್ಲ ಜನ ಮನೆಯಲ್ಲಿ ಲಾಕಡೌವುನ್. ಆದರೆ ಮಕ್ಕಳ ಮತ್ತು ಹಿರಿಯರ ಕಲ್ಪನಾ ಶಕ್ತಿಗೆ ಪ್ರೇರಣೆ ಕೊಡಲು ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ, ಸರ್ ಫೌಂಡೇಶನ್ ಸೊಲ್ಲಾಪುರ ಮತ್ತು ಕರ್ನಾಟಕ ರಾಜ್ಯ ಬಾಲ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಇವರ ಸಂಯುಕ್ತ ಆಶ್ರಯದಲ್ಲಿ “ಭವ್ಯ ರಾಜ್ಯ ಮಟ್ಟದ ಅಂತರ್ಜಾಲ ಕಥಾಕಥನ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಬೆಂಗಳೂರಿನ ಖ್ಯಾತ ಲೇಖಕಿ ಪ್ರೇಮಾ ಬಿರಾಜದಾರ ಮತ್ತು ಕಿರಿಯರ ವಿಭಾಗದಲ್ಲಿ ಇಣಕಲ್ ನಗರದ ಬಾಲಕಿ ಕು. ಶ್ರೇಯಾ ಆಲೆಗಾಂವಿ ಪ್ರಥಮ ಸ್ಥಾನವನ್ನು ಪಡೆದರು.
ಲಾಕಡೌವುನ ಸಮಯ ಯೋಗ್ಯ ಬಳಿಕೆ ಆಗಬೇಕು ಅದರಂತೆ ಮಕ್ಕಳ, ಶಿಕ್ಷಕರ ಮತ್ತು ಸಾಹಿತಿಗಳ ಕಲ್ಪನೆಗೆ, ಅಭಿವ್ಯಕ್ತಿಗೆ ಚಾಲನೆ ಕೊಡುವ ಸಲುವಾಗಿ ಅಂತರ್ಜಾಲದಲ್ಲಿ ಕಥಾಕಥನ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಆದರ್ಶ ಕನ್ನಡ ಬಳವು ಈ ಮುಂಚೆ ವಚನ ಗಾಯನ, ರಸಪ್ರಶ್ನೆ ಸ್ಪರ್ಧೆಗಳನ್ನು ಅಂತರ್ಜಾಲ ಮುಖಾಂತರ ಆಯೋಜನೆ ಮಾಡಿ ಆಸಕ್ತರಿಗೆ ವೇದಿಕೆ ನೀಡಿತ್ತು.
ಪ್ರಪ್ರಥಮದಲ್ಲಿ ಮೂರು ಸಂಘಗಳ ಆಶ್ರಯದಲ್ಲಿ ತೆಗೆದುಕೊಂಡ ಈ ಸ್ಪರ್ಧೆಗೆ ನಾಡಿನ ವಿವಿಧ ಭಾಗಗಳಿಂದ ಬಹುಸಂಖ್ಯೆಯಲ್ಲಿ ಸ್ಪರ್ಧಾಳುಗಳು ಸಹಭಾಗ ತೋರಿಸಿದರು. ಕಥೆಯ ವಿಡಿಯೋ ಮಾಡಿ ವ್ಯಾಟ್ಸಪ್ ಮುಖಾಂತರ ಆಯೋಜಕರಿಗೆ ಕಳುಹಿಸಿ ಕೊಟ್ಟಿದ್ದರು. ಈ ಸ್ಪರ್ಧೆಯಲ್ಲಿ ಖ್ಯಾತ ಕಥೆಗಾರರ ಸಹಭಾಗವು ಸ್ಪರ್ಧೆಯ ಮೆರಗು ಮತ್ತಷ್ಟು ಹೆಚ್ಚಿಸಿತು. ಕಥೆ ಹೇಳುವ ನಿಜವಾದ ಕಲೆ ಎಲ್ಲರಿಗೂ ಗೊತ್ತಾಯಿತು.

ಸ್ಪರ್ಧೆಯ ವಿಜೇತರು: ಕಿರಿಯರ ವಿಭಾಗ

Contact Your\'s Advertisement; 9902492681

ಶ್ರೇಯಾ ಆಲೇಗಾಂವಿ, ಇಳಕಲ್ (ಪ್ರಥಮ)
ನಿಶಾಂತ ಎಲ್, ಮೈಸೂರು (ದ್ವಿತೀಯ)
ಅನಿಶ್ ಕೊಪ್ಪ, ಚಿಕ್ಕಮಗಳೂರು(ತೃತೀಯ)

ಪ್ರೋತ್ಸಾಹನಪರ ಕಥೆಗಳು- ಉನ್ನತಿ ಸಿ. ಗೂಂಡ್ಲುಪೇಟೆ ಮತ್ತು ಲಕ್ಷ್ಮೀ ರೇವಿ, ಸೊಲ್ಲಾಪುರ

ಮೆಚ್ಚುಗೆ ಪಡೆದ ಕಥೆಗಳು- ಜ್ಞಾನಾ ರೈ, ಪುತ್ತೂರು ಮತ್ತು ರಕ್ಷಾ ವಾಮಂಜೂರು, ದಕ್ಷಿಣ ಕನ್ನಡ

ಹಿರಿಯರ ವಿಭಾಗ:

ಪ್ರೇಮಾ ಶಿವಾನಂದ, ಬೆಂಗಳೂರು (ಪ್ರಥಮ)
ರವಿರಾಜ ಕುಮಾರ, ಬೆಂಗುಳೂರು ಮತ್ತು ಭಾರತಿ ಕೊಪ್ಪ, ಚಿಕ್ಕ ಮಂಗಳೂರು (ದ್ವಿತೀಯ)
ವೆಂಕಟೇಶ ಚಾಗಿ, ಲಿಂಗಸೂರು ಮತ್ತು ಸೂರ್ಯನಾರಾಯಣ, ಬಂಟವಾಳ(ತೃತೀಯ)

1 ಕಾಮೆಂಟ್

  1. ನಮ್ಮ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ , ಕೇಂದ್ರ ಸ್ಥಾನ, ಅಕ್ಕಲಕೋಟದ ಈ ಆನ್ಲೈನ್ ಕಾರ್ಯ ನಮ್ಮ ಸದಭಿರುಚಿಯ ಕಥೆಗಾರರಿಗೆ ಸ್ಫೂರ್ತಿ ಹಾಗೂ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿ ಪ್ರಶಂಸೆ ಅಭಿನಂದನೆ ಸಲ್ಲಿಸುವ ಕಾರ್ಯ ಶ್ಲಾಘನೀಯ… ವಿಜೇತ ಸಹೋದರಿಯರಿಗೆ ತುಂಬು ಹೃದಯದ ಅಭಿನಂದನೆಗಳು ಆದರ್ಶ ಕನ್ನಡ ಬಳಗದ ಎಲ್ಲ ಪದಾಧಿಕಾರಿಗಳು, ನಿರ್ಣಾರಯಕರಿಗೆ ಹೃದಯ ಪೂರ್ವಕ ಧನ್ಯವಾದಗಳು…..

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here