ಭೋರಮ್ಮ ಪಟ್ಟಣ ನಿವೃತ್ತಿ ಸಮಾರಂಭ 

0
69

ಕಲಬುರಗಿ: ಶಿಕ್ಷಣ ನಿತ್ಯ ನಿರಂತರ ನೂತನ ಹೊಸ ವಿಷಯ ಜೊತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಭೋರಮ್ಮ ಪಟ್ಟಣ ಅವರು ಹೇಳಿದರು.
ಕಲ್ಯಾಣ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕನ್ಯಾ ಪ್ರೌಢ ಶಾಲೆಯಲ್ಲಿ ಅತ್ಯಂತ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪುರೆ ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಆಲದ ಮರವಾಗಿ ಬೆಳೆದಿದೆ.
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಪ್ರೌಢ ಶಾಲೆ, ಕಾಲೇಜು ಈ ನಮ್ಮ ಶಿಕ್ಷಣ ಸಂಸ್ಥೆಯ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಗೌರವ ನೀಡಿದೆ ಆಡಳಿತ ಮಂಡಳಿ ಮತ್ತು ಶಿಕ್ಷಕರ ವರ್ಗ ಮತ್ತು ಸಿಬ್ಬಂದಿಗಳ ಸಹಾಯ ಸಹಕಾರದಿಂದ ಸುಮಾರು ಮೂವತ್ತು ವರ್ಷಗಳ ಹೆಚ್ಚು ಕಾಲ ಸೇವೆ ಮಾಡುವ ಅವಕಾಶ ಸಿಕ್ಕಿದು ನನ್ನ ಪುಣ್ಯ ಎಂದು ಭಾವುಕರಾಗಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗೆ ಮತ್ತು ಸಿಬ್ಬಂದಿ ವರ್ಗದವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಭೋರಮ್ಮ ಪಟ್ಟಣ ಮೇಡಂ ಹೇಳಿದರು.
ಶಿಕ್ಷಕಿರಾದ ಮಲ್ಲಮ್ಮ, ನಿಂಭಮ್ಮ, ಅನೀತಾ, ರಾಜೇಶ್ವರಿ, ಅನೀತಾ ಸಾಹು, ಅನುಸುಯಾ, ವಿಜಯಲಕ್ಷ್ಮಿ, ರಾಜೇಶ್ವರಿ, ಸುಜಾತಾ, ಶಾರದಾ ಶಿಕ್ಷಕರಾದ ಸಂಗನಬಸವ, ಬಾಬುರಾವ ಎಂ. ಪಾಟೀಲ, ಪ್ರಭುಲಿಂಗ ಪಾಟೀಲ ಮತ್ತು ಇತರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here