ಬಿಸಿ ಬಿಸಿ ಸುದ್ದಿ

ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಿಸಿ ಜನುಮ ದಿನ ಆಚರಿಸಿಕೊಂಡ ಶಿಕ್ಷಕ ನರಸಿಂಹ ನಾಯಕ

ಸುರಪುರ: ಇಂದು ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿ ದೊಡ್ಡ ದೊಡ್ಡ ಪಾರ್ಟಿಗಳ ಮೂಲಕ ಜನುಮ ದಿನ ಆಚರಿಸಿಕೊಳ್ಳುವವರೆ ಹೆಚ್ಚಾಗಿದ್ದಾರೆ.ಆದರೆ ನಮ್ಮ ಸಹೋದರ ನರಸಿಂಹ ನಾಯಕರು ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಜನುಮ ದಿನ ಆಚರಿಸಿ ಕೊಂಡಿರುವುದು ಸಂತೋಷದ ಸಂಗತಿ ಯಾಗಿದೆ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿದರು.

ನಗರದ ಹಳೆ ಬಸ್‍ನಿಲ್ದಾಣ ಬಳಿಯ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಜನುಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಯಾರೆ ಆಗಲಿ ತಮ್ಮ ಜನುಮ ದಿನ ಆಚರಿಸಿಕೊಳ್ಳುವುದು ಮುಖ್ಯವಲ್ಲ.ನಾವು ಎಷ್ಟು ಜನರಿಗೆ ನೆರವಾದೆವು ಎಂಬುದು ಮುಖ್ಯ ಎಂದರು.

ಜನುಮ ದಿನ ಆಚರಿಸಿಕೊಂಡ ಶಿಕ್ಷಕ ನರಸಿಂಹ ನಾಯಕ ಮಾತನಾಡಿ,ನಾನು ಒಬ್ಬ ಶಿಕ್ಷಕನಾಗಿ ಕೊರೊನಾದ ಇಂತಹ ಸಂದರ್ಭದಲ್ಲಿ ಜನುಮ ದಿನ ಆಚರಿಸಿಕೊಳ್ಳಲು ಮನಸ್ಸಿರಲಿಲ್ಲ,ಆದರೆ ಮನೆಯ ಎಲ್ಲರು ನೀಡಿದ ಸಲಹೆ ಮೇರೆಗೆ ನನ್ನ ಜನುಮ ದಿನ ಆಚರಣೆ ಎಂಬುದು ನೆಪವಷ್ಟೆ,ಮುಖ್ಯವಾಗಿ ಬಡ ಕುಟುಂಬದ ಮಕ್ಕಳಿಗೆ ನಮ್ಮಿಂದಾದ ನೆರವು ನೀಡುವುದಾಗಿತ್ತು,ಆದ್ದರಿಂದ ನೂರಾರು ಬಡ ಕುಟುಂಬದ ಮಕ್ಕಳಿಗೆ ಇಂದು ನೋಟಬುಕ್ ಪೆನ್ನು ಸ್ಲೇಟು ಪೆನ್ಸಿಲ್ ಬ್ಯಾಗ್ ಹಾಗು ಮಾಸ್ಕ್ ವಿತರಿಸುವ ಮೂಲಕ ಮಕ್ಕಳ ಕಲಿಕೆಗೆ ನೆರವಾಗಲಾಗುತ್ತಿದೆ ಎಂದರು.

ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗು ಮಾಸ್ಕ್ ವಿತರಿಸುವ ಮೂಲಕ ಸದಾಕಾಲ ಮಾಸ್ಕ್ ಧರಿಸುವಂತೆ ಹಾಗೂ ಆಗಾಗ ಕೈಗಳನ್ನು ತೊಳೆದುಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ತಿರುಪತಿ,ಅಪ್ಪಣ್ಣ ಕುಲಕರ್ಣಿ,ದುರ್ಗಪ್ಪ ಹಾಗು ಗೋಪಾಲ ಬಾಗಲಕೋಟೆ,ದೇವರಾಜ,ಅಂಬಯ್ಯ ದೊರೆ,ಗುರು ಪ್ರಸಾದ ನಾಯಕ,ರೂಪಾ ನಾಯಕ ಸೇರಿದಂತೆ ಅನೇಕರಿದ್ದರು.

sajidpress

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

21 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago