ಸಿಯುಕೆಗೆ ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ 73 ನೆ ಸ್ಥಾನ

0
80
ಕಲಬುರಗಿ:ಮುಂಬೈ ಮೂಲದ ಎಜುಕೆಶನ್ ವಲ್ಡ್ ಶೈಕ್ಷಣಿಕ ನಿಯತಕಾಲಿಕೆ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕಲಬುರ್ಗಿ ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ 73 ನೆ ಸ್ಥಾನ ಹಾಗೂ ಕರ್ನಾಟಕ ರಾಜ್ಯದಲ್ಲಿ 8 ನೆ ಸ್ಥಾನ ಪಡೆದಿದೆ. ಈ ಶ್ರೇಯಾಂಕವು ಬೋಧಕ ಸಿಬ್ಬಂದಿಯ ಸಾಮರ್ಥ್ಯ, ಅಧ್ಯಾಪಕರ ಕಲ್ಯಾಣ ಮತ್ತು ಅಭಿವೃದ್ಧಿ, ಸಂಶೋಧನೆ ಮತ್ತು ನಾವೀನ್ಯತೆ, ಪಠ್ಯಕ್ರಮ ಮತ್ತು ಬೋಧನಾ ಕ್ರಮ, ಉದ್ಯಮಗಳೊಂದಿಗೆ ಸಂಬಂಧ, ಉದ್ಯೋಗ ನೀಡುವ ಸಾಮರ್ಥ್ಯ, ಮೂಲಸೌಕರ್ಯ ಮತ್ತು ಸೌಲಭ್ಯಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ, ನಾಯಕತ್ವ/ಆಡಳಿತದ ಗುಣಮಟ್ಟ ಹಿಗೆ ಹತ್ತು ಅಂಶಗಳ ಆಧಾರದ ಮೇಲೆ ನೀಡಲಾಗಿದೆ. ಸಿಯುಕೆ ಯು ಒಟ್ಟಾರೆ  1300 ಅಂಕಗಳ ಪೈಕಿ 800 ಅಂಕಗಳೊಂದಿಗೆ 73 ನೆ ಸ್ಥಾನ ಪಡೆದಿದೆ.
ಕುಲಪತಿಗಳಾದ ಪ್ರೊ. ಎಚ್. ಎಮ್. ಮಹೇಶ್ವರಯ್ಯ ನವರು ಸಿಯುಕೆಯ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ ವಿಶ್ವವಿದ್ಯಾಲಯವು ಹತ್ತು ವರ್ಷಗಳ ಹಿಂದಷ್ಟೇ ಸ್ಥಾಪಿತವಾಗಿದ್ದು ಕೇವಲ ಐದು ವರ್ಷಗಳ ಹಿಂದಷ್ಟೇ ತನ್ನ ಸ್ವಂತ ಕ್ಯಾಂಪಸ್ಸಿಗೆ ಸ್ಥಳಾಂತರಗೊಂಡಿದೆ. ಕಳೇದ ಐದು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧ್ಯಾಪಕರನ್ನು ನೇಮಕ ಮಾಡಿರುವುದರಿಂದ ಈ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ. ವಿಶ್ವ ವಿದ್ಯಾಲಯವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಶಿಕ್ಷಕರನ್ನು ನೇಮಕ ಮಾಡಿರುವುದೆ. ಈಗ 150 ಕ್ಕೂ ಹೆಚ್ಚು ಪ್ರಾಧ್ಯಾಪಕರಿದಾರೆ. ಮುಂದೆ ಈ ಪ್ರಾಧ್ಯಾಪಕರ ಸಂಶೋಧನೆ ಮತ್ತು ಪ್ರಕಟಣೆಯಿಂದ ಇನ್ನೂ ಹೆಚ್ಚಿನ ಶ್ರೆಯಾಂಕ ಗಳಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ಅಗ್ರ ಹತ್ತರಲಲ್ಲಿ ಸ್ಥಾನ ಪಡೆಯುವ ವೀಶ್ವಾಸ ನನಗಿದೆ. ನಾವು ಗುಣಮಟ್ಟದ ಶಿಕ್ಷಣ ನೀಡಲು ಬದ್ಧರಾಗಿದ್ದೇವೆ. ವಿಶ್ವ ವಿದ್ಯಾಲಯದ ಈ ಸಾಧನೆಗೆ ವಿಶ್ರಮಿಸಿದ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಕುಲಪತಿಗಳಾದ ಪ್ರೊ. ಎಚ್ ಎಮ್ ಮಹೇಶ್ವರಯ್ಯ ನವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here