ಶಹಾಪುರ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ರೈತನ ಮುಖದಲ್ಲಿ ನಗುವಿನ ಮಂದಹಾಸ ಮೂಡಿದೆ.
ಉತ್ತಮ ಮಳೆ ಬಂದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ, ರೈತ ತನ್ನ ಸ್ವಂತ ಜಮೀನಿನಲ್ಲಿ ಬಿತ್ತನೆ ಮಾಡುವುದಕ್ಕೆ ಭೂಮಿ ಹದಗೊಳಿಸುತ್ತಿರುವುದು ತಾಲೂಕಿನ ಗಂಗನಾಳ ಗ್ರಾಮದಲ್ಲಿ ಕಂಡು ಬಂದಿತು.
ರೈತರಿಗೆ ಮುಂಗಾರು ಬೆಳೆ ಬಿತ್ತನೆಗಾಗಿ ಶೆಂಗಾ, ಹೆಸರು, ತೊಗರಿ ಮುಂತಾದ ಬೀಜಗಳು ರಿಯಾಯಿತಿ ದರದಲ್ಲಿ ಸರ್ಕಾರ ನೀಡಬೇಕು ಜೊತೆಗೆ ರೈತರ ಆರ್ಥಿಕತೆಯ ಹಿತದೃಷ್ಟಿಯಿಂದ ಬೆಳೆ ಸಾಲ ನೀಡಬೇಕೆಂದು ರೈತ ಮುಖಂಡರಾದ ಶಿವಪ್ಪ ನಾಯಕ ಹೇಳಿದರು.
ಸಂಬಂಧಿಸಿದ ಇಲಾಖೆಯಿಂದ ರಿಯಾಯಿತಿ ದರದಲ್ಲಿ ರಸ ಗೊಬ್ಬರಗಳಾದ ಡಿ.ಎ.ಪಿ. ಯೂರಿಯಾ ರೈತರಿಗೆ ವಿತರಿಸಬೇಕು,ತಾಲ್ಲೂಕಿನಲ್ಲಿ ನಕಲಿ ಬೀಜ ಗೊಬ್ಬರದ ವಾಸನೆ ಕಂಡು ಬರುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.