ಕಲಬುರಗಿ: ರಾಷ್ಟ್ರದ ಒಟ್ಟು 150 ಅಗ್ರಸ್ಥಾನದ ವಿಶ್ವವಿದ್ಯಾಲಯದಲ್ಲಿ ಶರಣಬಸವ ವಿಶ್ವವಿದ್ಯಾಲಯ ಕೂಡ ಒಂದಾಗಿದೆ. ವಿಶ್ವವಿದ್ಯಾಲಯವು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ಸ್ಲ್ (ಎಲ್.ಎಸ್.ಸಿ) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲ ಸಚಿವಾಲಯದ ಅಡಿಯಲಿ, ಪದವಿ ಶಿಕ್ಷಣ ಹಂತದಲ್ಲಿ ಹೆಚ್ಚು ಹೊಸ ವೃತ್ತಿಪರ ಕೊಸರ್್ ಆರಂಭಿಸಲುವ ಅವಕಾಶ ಲಭಿಸಿದ್ದು, ಶರಣಬಸವ ವಿಶ್ವವಿದ್ಯಾಲಕ್ಕೆ ಇನ್ನೊಂದು ಗರಿಮೂಡಿಗೆರಿದಂತಾಗಿದೆ.
ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಕೇವಲ ವಿದ್ಯಾಥರ್ಿನಿಯರಿಗಾಗಿ ಬ್ಯಾಚಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ (ಬಿಬಿಎ) (ಲಾಜಿಸ್ಟಿಕ್ಸ್) ಹಾಗೂ ವಿದ್ಯಾಥರ್ಿ ಮತ್ತು ವಿದ್ಯಾಥರ್ಿನಿಯರಿಗೆ ತಲಾ 60 ವಿದ್ಯಾಥರ್ಿಗಳನೊಳಗೊಂಡ ಮತ್ತೊಂದು ಸಹ ಶಿಕ್ಷಣವನ್ನು ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಕುರಿತು ಶೀಘ್ರದಲ್ಲಿಯೆ ವಿಶ್ವವಿದ್ಯಾಲಯ ಮತ್ತು ಎಲ್.ಎಸ್.ಸಿಯು ಪತ್ರಕ್ಕೆ (ಎಂಒಯು) ಸಹಿ ಹಾಕಲಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಮತ್ತು ವಿವಿ ಕುಲಪತಿ ಡಾ. ನಿರಂಜನ್ ವಿ ನಿಷ್ಟಿ, ಶರಣಬಸವೇಶ್ವರ ವಿದ್ಯಾವರ್ಧಕ ಚೇರ್ಪರ್ಸನ್ರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ, ಸಂಘದ ಕಾರ್ಯದಶರ್ಿಗಳಾದ ಬಸವರಾಜ ದೇಶಮುಖ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮಿ ಪಾಟೀಲ, ಎಂಬಿಎ ವಿಭಾಗದ ಡೀನ್ ಡಾ. ಎಸ್.ಎಚ್.ಹೊನ್ನಳ್ಳಿ, ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ವಾಣಿಶ್ರೀ, ಮತ್ತು ಎಲ್.ಎಸ್.ಸಿ ಶಿಕ್ಷಣ ಉಪಕ್ರಮಗಳ ಮುಖ್ಯಸ್ಥ ಪ್ರೊ.ಎಸ್.ಗಣೇಶ, ಎಲ್.ಎಸ್.ಸಿ ಯ ಸಲಹೆಗಾರರಾದ ಪ್ರೊ. ಗಾಯಿತ್ರಿ ಹರೀಶ್ ಮುಂತಾದವರೊಂದಿಗೆ ಮಂಗಳವಾರ ಸಂವಾದ ನಡೆಸಿದರು.
ಪ್ರೊ. ಗಣೇಶ ಮತ್ತು ಗಾಯತ್ರಿ ಮಾತನಾಡಿ, ಉದ್ಯಮದಲ್ಲಿ ನುರಿತ ವ್ಯವಸ್ಥಾಪಕ ಮಟ್ಟದಲ್ಲಿ ಮಾನವ ಶಕ್ತಿಯ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಈ ಕೋಸರ್್ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸಗೆ ಸಂಬಂಧಪಟ್ಟ ಸಾಮಾಗ್ರಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಎಲ್.ಎಸ್.ಸಿ ವಹಿಸಿಕೊಂಡಿದೆ. ಈ ವಿಷಯದ ಕುರಿತು ಓಧನಾ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುತದೆ. ಮೂರು ಸೆಮಿಸ್ಟರ್ ಅಭ್ಯಾಸದ ಅವಧಿಯ, ಉದ್ಯಮದಲ್ಲಿ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಕೋಸರ್್ ಕೊನೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ವಿದ್ಯಾಥರ್ಿಗಳಿಗೆ ಉನ್ನತ ಮಟ್ಟದ ಉದ್ಯೋಗ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕಳೆದ ವರ್ಷ ವಿಶ್ವವಿದ್ಯಾಲಯ ಮತ್ತು 15 ಶಿಕ್ಷಣ ಸಂಸ್ಥೆಗಳಲ್ಲಿ ಎಲ್.ಎಸ್.ಸಿ ವೃತ್ತಿಪರ ಉದ್ಯೋಗ ಆಧಾರಿತ ಸ್ನಾತಕೋತ್ತರ ಕೋರ್ಸಗಳನ್ನು ಕಳೆದ ವರ್ಷ ಆರಂಭಿಸಲಾಗಿದೆ. ಅಗ್ರೀಕಲ್ಚರ್ ಸ್ಟೊರೇಜ್ ಮತ್ತು ಸಪ್ಲೈ ಚೈನ್, ಏವಿಯೇಷನ್ ಸವರ್ಿಸಸ್ ಮತ್ತು ಏರ್ ಕಾಗರ್ೊ, ಇ-ಕಾಮರ್ಸ ಆಪರೇಷನ್ ಆಂಡ ಮ್ಯಾರಿಟೈಮ್ ಲಾಜಿಸ್ಟಿಕ್ಸ್ ಮತ್ತು ಡಾಟಾ ಸೈನ್ಸ್ ಇನ್ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ನಲ್ಲಿ ಇತರ ವಿವಿಧ ಕೋರ್ಸಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಸಂಸ್ಥೆಯಲ್ಲಿ ಹೆಚ್ಚಿನ ಸಾಮಥ್ರ್ಯವನ್ನು ಗಳಿಸಿಕೊಂಡಿದೆ.
ಡಾ. ಅನೀಲಕುಮಾರ ಬಿಡವೆ, ಕೇಂದ್ರ ಸರಕಾರದ ಹೇಳಿಕೆಯಾದ ‘ನೀವು ಕಲಿಯುವಾಗ ಸಂಪಾದಿಸಿ’ ಎಂಬ ಪರಿಕಲ್ಪನೆಯನ್ನು ಒಳಗೊಂಡಿರುವ ಅಂಪ್ರೆಂಟಿಸ್ ಆಧಾರಿತ ಪದವಿ ಕೋಸರ್್ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಈ ಕೋಸರ್್ಗೆ ಸೇರಲು ಮತ್ತು ಆಯ್ಕೆ ಮಾಡಿಕೊಳ್ಳಲು ಮತ್ತು ಈ ಕೋರ್ಸನ ಮೂರು ಸೆಮಿಸ್ಟರ್ ಅವಧಿಯಲ್ಲಿ ಶೇ. 50ರಷ್ಟು ವ್ಯಯ ಮಾಡುತ್ತಾರೆ. ಆದರೆ ಕೈಗಾರಿಕೆಗಳಲ್ಲಿ ತರಬೇತಿಯ ಅವಧಿಯಲ್ಲಿ ವಿದ್ಯಾಥರ್ಿಗಳಿಗೆ ಸ್ಟೈಫಂಡ್ ಆಗಿ ಮಾಸಿಕ 9.ಸಾವಿರ ರೂಪಾಯಿ ಕೊಡಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾಥರ್ಿಗಳು ಮೂರು ಸೆಮಿಸ್ಟರ್ ವಿಶ್ವವಿದ್ಯಾಲಯದ ಆವರಣದಲಿ ಅಧ್ಯಯನ ಮಾಡಿದರೆ, ನಾಲ್ಕನೆ ಸೆಮಿಸ್ಟರ್ ಉದ್ಯಮದ ತರಬೇತಿಗಾಗಿ ಕೈಗಾರಿಕೆ ವಲಯಗಳಲ್ಲಿ ಕಳೆಯುತ್ತಾರೆ ಎಂದು ಹೇಳಿದರು,
ಶೈಕ್ಷಣಿಕ ಅಗತ್ಯತೆಯನ್ನು ಪೂರೈಸಲು ಈ ಕೋಸರ್್ ವಿನ್ಯಾಸಗೊಳಿಸಲಾಗಿದೆ. ಸಮಾಜದಲ್ಲಿನ ಬಡವರನ್ನು ಮತ್ತು ಮಧ್ಯಮವರ್ಗದವರನ್ನು ಪರಿಗಣನೆಗೆ ತೆಗೆದುಕೊಂಡು ಎಲ್ಲರ ಕೈಗೆಟಕುವ ರೀತಿಯಲ್ಲಿ ಶುಲ್ಕ ರಚಿಸಲಾಗಿದೆ. ವಿದ್ಯಾಥರ್ಿಗಳು ಭರಿಸಿದ 14 ಸಾವಿರ ಶುಲ್ಕ್ ಎಲ್.ಎಸ್.ಸಿ ತರಬೇತಿ ಸಮಯದಲ್ಲಿ ವಿದ್ಯಾಥರ್ಿಗಳಿಗೆ ಅಧ್ಯಯನದ ಸಾಮಾಗ್ರಿಗಳನ್ನು ಒದಗಿಸುತ್ತದೆ. ತರಬೇತಿಯ ಅವಧಿಯಲ್ಲಿ ವಿದ್ಯಾಥರ್ಿಗಳಿಗೆ ವಿಮಾರಕ್ಷಣೆಯನ್ನು ಒದಗಿಸಲಾಗುತ್ತದೆ ಎಂದು ಡಾ. ಅನೀಲಕುಮಾರ ಬಿಡವೆ ತಿಳಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…