‘ನಾಳೆಯ ನಾಡನ್ನು ನೆಡೋಣ’ ಪರಿಸರ ಅಭಿಯಾನ

0
101

ಕಲಬುರಗಿ: ಕರ್ನಾಟಕದಾದ್ಯಂತ ಸುಮಾರು ೧೦ ಸಾವಿರ ಕಾಡು ಜಾತಿಯ ಸಸಿಗಳನ್ನು ನೆಟ್ಟು ಪೋಷಣೆ
ಮನುಷ್ಯರು “ಅಭಿವೃದ್ಧಿ” ಹೆಸರಿನಲ್ಲಿ ಭೂಮಿಯನ್ನು ಏನು ಬೇಕಾದರೂ ಮಾಡಬಹುದು ಎನ್ನುವ ಅಹಂಕಾರಕ್ಕೆ ಕಣ್ಣಿಗೆ ಕಾಣದ ಕರೋನಾ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿ ಎಚ್ಚರಿಕೆ ನೀಡಿದೆ.

ಲೊಕಸ್ಟ್ ದಾಳಿಯು ರೈತರಿಗೆ ಮತ್ತೊಂದು ಸಂಕಷ್ಟವನ್ನು ಸವಾಲಾಗಿ ನೀಡಿದೆ. ದೊಡ್ಡ ದೊಡ್ಡ ಬಂಡವಾಳಶಾಹಿಗಳು ಪ್ರಕೃತಿಯಲ್ಲಿನ ಸಂಪತ್ತನ್ನು ಉಪಯೋಗಿಸಿಕೊಂಡು ಗಣಿಗಾರಿಕೆ, ಕಾರ್ಖಾನೆ ಇತ್ಯಾದಿಗಳಿಂದ ಲಾಭ ಮಾಡಿಕೊಳ್ಳುತ್ತಿದೆ. ಪ್ರಾಣಿ, ಪಕ್ಷಿ, ಮರಗಿಡ, ಮನುಷ್ಯರೂ ಎಲ್ಲರನ್ನು ಒಳಗೊಂಡ ಭೂಮಿಯ ಸಂಪತ್ತಿನ ಲಾಭವು ಕೆಲವೇ ಕೆಲವು ವ್ಯಕ್ತಿಗಳ ಖಾಸಗಿ ಆಸ್ತಿಯಾಗಿ ಪರಿವರ್ತನೆ ಆಗುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಉಂಟಾಗುವ ಮಾಲಿನ್ಯ ಮಾತ್ರ ಸಾಮಾಜಿಕರಣ ಆಗುತ್ತಿದೆ. ಅಂದರೆ ಲಾಭದಲ್ಲಿ ಸಾಮಾನ್ಯ ಜನರಿಗೆ ಪಾಲು ಇಲ್ಲದೆ ಮಾಲಿನ್ಯದಲ್ಲಿ ಮಾತ್ರ ಪಾಲು ಪಡೆಯುವಂತಾಗಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಯಕ್ತಿಕವಾಗಿ ವಿದ್ಯಾರ್ಥಿ ಯುವಜನರು ಜವಾಬ್ದಾರಿಯನ್ನು ತಗೆದುಕೊಳ್ಳುತ್ತಾ ಪರಿಸರವನ್ನು ಅಭಿವೃದ್ಧಿಗೊಳಿಸುವ ಸಂಕಲ್ಪ ತೊಡಬೇಕಿದೆ. ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು, ಪ್ಲಾಸ್ಟಿಕ್ ಅನ್ನು ಬಳಸದೇಯಿರುವುದು, ಅರಿವು ಮೂಡಿಸುವ ಚಿತ್ರ ರಚನೆ, ಹಾಡು, ಇತ್ಯಾದಿ ಕಾರ್ಯಕ್ರಮಗಳು, ಖಾಸಗಿ ಬಂಡವಾಳಿಗರ ಮೇಲೆ ನಿಯಂತ್ರ ಹೇರುವಂತೆ ಸಕಾರಕ್ಕೆ ಒತ್ತಾಯಿಸುವ ಪ್ರಯತ್ನವನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ “ನಾಳೆಯ ನಾಡನ್ನು ನೆಡೋಣ” ಪರಿಸರ ಅಭಿಯಾನದ ಮೂಲಕ ನಡೆಸಲಿದೆ. ಜೂನ್ ೫ ರಿಂದ ಶುರುವಾಗಿ ಜೂನ್ ೧೨ರ ವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇದನ್ನು ನಡೆಸಲಿದ್ದೇವೆ.

ಕಲಬುರಗಿ ಜಿಲ್ಲೆಯೂ ಕೂಡ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಇದನ್ನು ಸ್ವಲ್ಪ ಮಟ್ಟಿಗೆ ಆದರೂ ನಿವಾರಣೆ ಮಾಡುವ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುತ್ತಿದ್ದೇವೆ ೫೦೦ ಕಾಡು ಜಾತಿಯ ನೆರಳು ನೀಡುವ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಸಂಕಲ್ಪ ತೊಡುತ್ತಿದ್ದೇವೆ.

ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ, ರಾಜ್ಯ ಮುಖಂಡ ಶರಣು ಕೋಲಿ, ರಾಜ್ಯ ಸಮಿತಿ ಸದಸ್ಯರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here