ತಾಂತ್ರಿಕ ಉತ್ತೇಜಕರ ಸೇವೆ ಮುಂದುವರಿಸುವಂತೆ ಆಗ್ರಹಿಸಿ 9ರಂದು ವಿನೂತನ ಚಳವಳಿ

2
422

ಕಲಬುರಗಿ: ರಾಜ್ಯ ಸರಕಾರದ ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರಾಗಿ) ತಾಂತ್ರಿಕ ಉತ್ತೇಜಕರು ಸೇವೆ ಸಲ್ಲಿಸುತ್ತಿರುವವರಿಗೆ ಸಧ್ಯ 2020-21 ರ ಕೃಷಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಳವಡಿಸಿಕೊಂಡು ಅವರ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಲು ರಾಜ್ಯಾದ್ಯಂತ ದಿನಾಂಕ: 9-6-2020 ರಂದು ವಿನೂತನ ಚಳುವಳಿ ಹಮ್ಮಿಕೊಳ್ಳಲಾಗಿದೆ. ಅಂದುರಾಜ್ಯದ ಸುಮಾರು 900 ರೈತ ಸೇವಾ ಕೇಂದ್ರಗಳ ಮುಂದೆ ಸಾಮಾಜಿಕಅಂತರಕಾಯ್ದುಕೊಂಡು ಸಾಂಕೇತಿಕ ಪ್ರತಿಭಟನೆ ಮಾಡುವುದು, ತಾಲೂಕಾಕೇಂದ್ರದ ತಹಸೀಲ್ದಾರರ ಮುಖಾಂತರ, ಜಿಲ್ಲಾಕೇಂದ್ರದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರರಾಜ್ಯ ಸರಕಾರದ ಮುಖ್ಯಮಂತ್ರಿಗಳಿಗೆ ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿ ಬೇಡಿಕೆಈಡೇರಿಸುವ ಬಗ್ಗೆ ಒತ್ತಾಯಿಸಲಾಗುವುದು ಎಂದು ಶ್ರಮಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದರು.

ಸದ್ಯ ಕೃಷಿ ಇಲಾಖೆ ಮುಂಗಾರು ಬಿತ್ತನೆ ಬಗ್ಗೆ ಇತರ ಕೃಷಿ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡಲುರೈತಅನುವುಗಾರರನ್ನೇ ಬಳಸುತ್ತಿದ್ದು ಸಧ್ಯರಾಜ್ಯಾದ್ಯಂತ ಬೀಜ ವಿತರಣೆ, ಮಣ್ಣು ಪರೀಕ್ಷೆ ಮತ್ತು ಸ್ಥಳಿಯ ಯೋಜನೆಗಳ ಅನುಷ್ಠಾನಕ್ಕೆ ಇವರನ್ನೇ ಬಳಸಿಕೊಳ್ಳುತ್ತಿದ್ದು ಇಂದಿನ ಕೋವಿಡ್-19 ಪರಿಸ್ಥಿತಿಯಲ್ಲಿ ಪ್ರತಿಆರ್.ಎಸ್.ಕೆ. ನಲ್ಲಿ ಮಾತ್ರ ಈ ಮೊದಲು ಬೀಜ, ಪೆಸ್ಟಿಸೈಡ್ (ಕೀಟ ನಾಶಕ), ಫಟರ್ಿಲೈಸರ್, ಪ್ರತಿಗ್ರಾಮದಲ್ಲಿ ಕೇಂದ್ರಗಳನ್ನು ತೆರೆದು ವಿತರಿಸುತ್ತಿದ್ದು ಈ ಎಲ್ಲ ಕೆಲಸ ಕಾರ್ಯಇವರೇ ಮಾಡುತ್ತಿದ್ದುಇವರನ್ನು ಮಾಸಿಕ ರೂ. 10000/- ಗೌರವಧನ ನೀಡಿ ಮುಂದುವರೆಸಲು ಒತ್ತಾಯಿಸುತ್ತಿದ್ದು ಆದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ ಇವರ ಮುಂದುವರಿಕೆಯ ಆದೇಶಕ್ಕೆ ತಡೆಹಿಡಿದಿದ್ದು ಆಶ್ಛರ್ಯಕರವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಇಂದು ಹೇಳಿದರು.

Contact Your\'s Advertisement; 9902492681

ನೂತನ ಸಚಿವರಾಗಿ ನೇಮಕಗೊಂಡಾಗ ಈ ವರ್ಷದಆಯವ್ಯಯ ಮಂಡಿಸುವ ಮುನ್ನ ನಮ್ಮ ಸಂಘದ ಪ್ರತಿನಿಧಿಗಳಿಗೆ ತಮ್ಮನ್ನು ಮುಂದುವರೆಸುವ ಯೋಜನೆ ಇದ್ದುತಾವು ಭಯಪಡಬೇಡಿ ಎಂದು ತಿಳಿಸಿ ಬಜೆಟ್ಅನುಮೋದನೆಯಾದ ನಂತರ ದಿಢೀರನೆತಮ್ಮನ್ನು ವಜಾಗೊಳಿಸಿ ತಮ್ಮ ಸ್ಥಾನದಲ್ಲಿ ಎರಡು ಗ್ರಾಮ ಪಂಚಾಯತಿಗೆಒಬ್ಬರಂತೆರೈತ ಮಿತ್ರರನ್ನು ನೇಮಕ ಮಾಡಿಕೊಳ್ಳುವ ಹೇಳಿಕೆ ನೀಡಿ 12 ವರ್ಷದಿಂದಅಲ್ಪಸ್ವಲ್ಪ ಸಂಬಳದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸುಮಾರು 6000 ರೈತಅನುವುಗಾರರನ್ನು ಬೀದಿ ಪಾಲು ಮಾಡುತ್ತಿರುವ ಕೃಷಿ ಸಚಿವರ ವರ್ತನೆ ನಾವು ತೀವ್ರವಾಗಿಖಂಡಿಸುತ್ತೇವೆ. ಇತ್ತೀಚಿಗೆ ಧಾರವಾಡದಲ್ಲಿ ರೈತಅನುವುಗಾರರು ಸಭೆ ಸೇರಿ ಚಚರ್ೆ ನಡೆಸಿದಾಗ ಸಧ್ಯದ ಆತಂಕ ಪರಿಸ್ಥಿತಿ ಬಗ್ಗೆ ಗಾಬರಿಗೊಂಡ ನರಗುಂದತಾಲೂಕಿನರಮಜಾನ್ ನದಾಫ್ ಎಂಬ ರೈತಅನುವುಗಾರ ಸಭೆಯಲ್ಲಿಯೇಜಿಗುಪ್ಸೆಗೊಂಡು ಹೃದಯಾಘಾತಕ್ಕೆ ಒಳಗಾಗಿದ್ದ ನಂತರಆಸ್ಪತ್ರೆಯಲ್ಲಿಅಸುನೀಗಿದ್ದಾನೆ.

ರೈತಕುಟುಂಬದಯುವಕರಿಗೆಉದ್ಯೋಗ ನೀಡುವುದು ಕೃಷಿ ಅನುಷ್ಠಾನಕ್ಕೆ ರೈತನ್ನೇ ಬಳಸಿಕೊಳ್ಳುವುದು ಎನ್ನುವ ಹೇಳಿಕೆಯೊಂದಿಗೆ ಭೂಚೇತನಕಾರ್ಯಕ್ರಮಅಡಿಯಲ್ಲಿಇವರನ್ನು ನೇಮಕ ಮಾಡಿಕೊಂಡು 12 ವರ್ಷ ದುಡಿಸಿಕೊಂಡು ಈ ಮಧ್ಯೆ ಅನೇಕ ತರಬೇತಿಗಳು ಇವರಿಗೆ ನೀಡಿ ಕೃಷಿ ಚಟುವಟಿಕೆಗಳ ಬಗ್ಗೆ ಎಲ್ಲಾಜ್ಞಾನ, ತಿಳುವಳಿಕೆ ನೀಡಿ ಈಗ ಇವರ ಬದಲಿಗೆಖಾಯಂ ಹುದ್ದೆಗಳನ್ನು ಸೃಷ್ಟಿಸಿ ಪೂರ್ಣ ಸಂಬಳದೊಂದಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳುವದಾಗಿ ತಿಳಿಸಿರುವ ಕೃಷಿ ಸಚಿವರ ಹೇಳಿಕೆ ನಮ್ಮಲ್ಲಿಆತಂಕ ಮೂಡಿಸಿದೆ. ಇದರ ಹಿಂದೆ ಕೃಷಿ ಇಲಾಖೆಯ ನಿದರ್ೇಶಕರು ಒಳಗೊಂಡಂತೆ ಕೆಲವು ಭ್ರಷ್ಟ ಅಧಿಕಾರಿಗಳ ಮನವಿಗೆ ಕೃಷಿ ಸಚಿವರು ಬಲಿಯಾಗುತ್ತಿದ್ದಾರೆ ಏನು ಎನ್ನುವಆತಂಕ ನಮ್ಮಲ್ಲಿ ಮೂಡುತ್ತಿದೆ ಎಂದರು.

ಇತ್ತೀಚಿಗೆ ಕಲಬುರಗಿಯಲ್ಲಿ ಅನಿಧರ್ಿಷ್ಟಧರಣಿ ಸತ್ಯಾಗ್ರಹ ನಡೆಸಿದಾಗ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ಧರಣಿ ಸ್ಥಳಕ್ಕೆ ಭೇಟಿ ನೀಡಿತಮ್ಮ ಬೇಡಿಕೆ ಸೂಕ್ತವಾಗಿದ್ದು ಬರುವ ಬಜೆಟ್ನಲ್ಲಿ ಈ ಬಗ್ಗೆ ತಮಗೆ ನ್ಯಾಯ ಸಿಗುವ ಒತ್ತಡ ನಾನು ಮಾಡಿತಮ್ಮ ಬೇಡಿಕೆಈಡೇರಿಸುವ ಭರವಸೆ ನೀಡಿದಾಗಅಂದು ಸತ್ಯಾಗ್ರಹ ಹಿಂಪಡೆಯಲಾಗಿತ್ತು.

ನಮ್ಮ ಸಂಘ ನೀಡಿದ ಈ ಕರೆಯಅನ್ವಯಅಂದು ಬೆಳಿಗ್ಗೆ 11.00 ಗಂಟೆಗೆರಾಜ್ಯದಎಲ್ಲ ಸುಮಾರು 9000/- ರೈತ ಸಂಪರ್ಕಕೇಂದ್ರತಾಲೂಕಾಕೇಂದ್ರ ಹಾಗೂ ರಾಜ್ಯದಎಲ್ಲಾಜಿಲ್ಲಾ ಕೇಂದ್ರಗಳಲ್ಲಿ ಒಂದೇ ಸಮಯಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಹಾಗೂ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲರವರಿಗೆ ಮನವಿ ಪತ್ರ ಸಲ್ಲಿಸಿ ಸಧ್ಯ ಹೊಸ ಹುದ್ದೆಗಳನ್ನು ನೇಮಕ ಮಾಡಲು ಸರಕಾರ ನಿರ್ಭಂಧನೆ ಹೇರಿದ್ದು ಕೃಷಿ ಚಟುವಟಿಕೆ ಈಗಾಗಲೇ ಪ್ರಾರಂಭವಾಗಿದ್ದುರೈತರಿಗೆ ತಿಳುವಳಿಕೆ, ಮಾಹಿತಿ, ಸಹಾಯ ನೀಡುವುದುಅತೀಅವಶ್ಯವಾಗಿದ್ದು ಸಧ್ಯ ಇಂದಿಗೂ ಆರ್.ಎಸ್.ಕೆ. ಗಳಲ್ಲಿ ಕಾರ್ಯನಿರ್ವಹಿಸುತ್ತಿರುವಅನುವುಗಾರರಿಗೆ ಮಾಸಿಕ ರೂ. 10000/- ಗೌರವಧನ ನೀಡಿ ಮುಂದುವರೆಸುವಂತೆಒತ್ತಾಯಿಸುವ ಮನವಿ ಪತ್ರ ನೀಡಲಾಗುವುದು. ಈ ಸಂದರ್ಭದಲ್ಲಿ ಸದ್ಯರಾಜ್ಯದಲ್ಲಿ ಕೋವಿಡ್-19 ಮಾರ್ಗಸೂಚಿಅಂತೆಯೇ ಸಾಮಾಜಿಕಅಂತರಕಾಪಾಡಿಕೊಂಡು ಮಾಸ್ಕ ಹಾಗೂ ಮುಂತಾದ ನಿಯಮಗಳನ್ನು ಪಾಲಿಸಿ ಕೇವಲ 4 ಜನ ಮನವಿ ಪತ್ರ ನೀಡಿ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

2 ಕಾಮೆಂಟ್ಗಳನ್ನು

  1. New search engine. – 1000 000$

    The last bull market in gold had lasted for a long time. If money isn’t money anymore, and cash is essentially debt, things we can do? Maybe wishes also why many people do not know of currency forex trading yet.
    New search engine. – 1000 000
    If a person not sure how devote money as well as to invest to get ahead, don’t start investing until widely recognized some rules of the trail. Few things are black and white your market investing world, but could certainly avoid major mistakes when you’re invest by using some simple guidelines.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here