ಕಲಬುರಗಿ: ಶುಕ್ರವಾರ ಕಲಬುರಗಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 39, ತೆಲಂಗಾಣಾ ಪ್ರವಾಸ ಹಿನ್ನೆಲೆಯ 2 ಹಾಗೂ ಸೋಂಕಿನ ಮೂಲ ಪತ್ತೆಯಾಗದ ಓರ್ವ ವ್ಯಕ್ತಿ ಸೇರಿದಂತೆ ಒಟ್ಟು 42 ಜನರಿಗೆ ಕೊರೋನಾ ಸೋಂಕು ದೃಢವಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.
42 ಸೋಂಕಿತರ ಪೈಕಿ 41 ಜನರು ಸರ್ಕಾರಿ ಕ್ವಾರಂಟೈನ್‍ದಲ್ಲಿದರೆ ಓರ್ವ ವ್ಯಕ್ತಿಯ ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಸೋಂಕು ದೃಢವಾದ ಕೂಡಲೇ ಎಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಚಿಂಚೋಳಿ ತಾಲೂಕಿನ 10, ಸೇಡಂ ತಾಲೂಕಿನ 13, ಕಾಳಗಿ ತಾಲೂಕಿನ 06, ಚಿಂಚೋಳಿ ತಾಲೂಕಿನ 02 ಹಾಗೂ ಆಳಂದ ತಾಲೂಕಿನ 02 ಜನರಿಗೆ ಕೊರೋನಾ ಸೋಂಕು ತಗುಲಿದೆ.
ಕಮಲಾಪುರ ತಾಲೂಕಿನ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ 06 ಜನರಿಗೆ ಹಾಗೂ ತೆಲಂಗಾಣಾ ಪ್ರವಾಸ ಹಿನ್ನೆಲೆಯ ಓರ್ವ ವ್ಯಕ್ತಿ ಸೇರಿದಂತೆ 07 ಜನರಿಗೆ ಕೋವಿಡ್-19 ಅಂಟಿಕೊಂಡಿದೆ.
ಇದಲ್ಲದೇ ತೆಲಂಗಾಣಾ ಪ್ರವಾಸ ಹಿನ್ನೆಲೆಯ ಕಲಬುರಗಿ ನಗರದ ಮಿಜಗುರಿ ಪ್ರದೇಶದ ಓರ್ವನಿಗೆ ಹಾಗೂ ಸೋಂಕಿನ ಜಾಲ ಪತ್ತೆ ಕಾರ್ಯ ನಡೆಯುತ್ತಿರುವ ಶಿವಾಜಿನಗರದ ಓರ್ವ ವ್ಯಕ್ತಿಗೆ ಮಹಾಮಾರಿ ಸೋಂಕು ಪತ್ತೆಯಾಗಿದೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 552 ಜನರ ಪೈಕಿ ಇದೂವರೆಗೆ 129 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 416 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್ ಬಿ. ವಿವರಿಸಿದರು.