ಕಲಬುರಗಿ: ರಾಜ್ಯ ಸರಕಾರದ ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರಾಗಿ) ತಾಂತ್ರಿಕ ಉತ್ತೇಜಕರು ಸೇವೆ ಸಲ್ಲಿಸುತ್ತಿರುವವರಿಗೆ ಸಧ್ಯ 2020-21 ರ ಕೃಷಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅಳವಡಿಸಿಕೊಂಡು ಅವರ ಸೇವೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ನೇತೃತ್ವದಲ್ಲಿ ಇಂದು ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಕೃಷಿ ಸಚಿವರಾದ ಬಿ.ಸಿ. ಪಾಟೀಲ, ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.
ಸದ್ಯ ಕೃಷಿ ಇಲಾಖೆ ಮುಂಗಾರು ಬಿತ್ತನೆ ಬಗ್ಗೆ ಇತರ ಕೃಷಿ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡಲು ರೈತ ಅನುವುಗಾರರನ್ನೇ ಬಳಸುತ್ತಿದ್ದು ಸಧ್ಯ ರಾಜ್ಯಾದ್ಯಂತ ಬೀಜ ವಿತರಣೆ, ಮಣ್ಣು ಪರೀಕ್ಷೆ ಮತ್ತು ಸ್ಥಳಿಯ ಯೋಜನೆಗಳ ಅನುಷ್ಠಾನಕ್ಕೆ ಇವರನ್ನೇ ಬಳಸಿಕೊಳ್ಳುತ್ತಿದ್ದು ಇಂದಿನ ಕೋವಿಡ್-19 ಪರಿಸ್ಥಿತಿಯಲ್ಲಿ ಪ್ರತಿ ಆರ್.ಎಸ್.ಕೆ. ನಲ್ಲಿ ಮಾತ್ರ ಈ ಮೊದಲು ಬೀಜ, ಪೆಸ್ಟಿಸೈಡ್ (ಕೀಟ ನಾಶಕ), ಫಟರ್ಿಲೈಸರ್, ಪ್ರತಿ ಗ್ರಾಮದಲ್ಲಿ ಕೇಂದ್ರಗಳನ್ನು ತೆರೆದು ವಿತರಿಸುತ್ತಿದ್ದು ಈ ಎಲ್ಲ ಕೆಲಸ ಕಾರ್ಯ ಇವರೇ ಮಾಡುತ್ತಿದ್ದು ಇವರನ್ನು ಮಾಸಿಕ ರೂ. 10000/- ಗೌರವಧನ ನೀಡಿ ಮುಂದುವರೆಸಲು ಒತ್ತಾಯಿಸಿದ್ದು ಆದರೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ ಇವರ ಮುಂದುವರಿಕೆಯ ಆದೇಶಕ್ಕೆ ತಡೆಹಿಡಿದಿದ್ದು ಆಶ್ಛರ್ಯಕರವಾಗಿದೆ.
ನೂತನ ಸಚಿವರಾಗಿ ನೇಮಕಗೊಂಡಾಗ ಈ ವರ್ಷದ ಆಯವ್ಯಯ ಮಂಡಿಸುವ ಮುನ್ನ ನಮ್ಮ ಸಂಘದ ಪ್ರತಿನಿಧಿಗಳಿಗೆ ತಮ್ಮನ್ನು ಮುಂದುವರೆಸುವ ಯೋಜನೆ ಇದ್ದು ತಾವು ಭಯಪಡಬೇಡಿ ಎಂದು ತಿಳಿಸಿ ಬಜೆಟ್ ಅನುಮೋದನೆಯಾದ ನಂತರ ದಿಢೀರನೆ ತಮ್ಮನ್ನು ವಜಾಗೊಳಿಸಿ ತಮ್ಮ ಸ್ಥಾನದಲ್ಲಿ ಎರಡು ಗ್ರಾಮ ಪಂಚಾಯತಿಗೆ ಒಬ್ಬರಂತೆ ರೈತ ಮಿತ್ರರನ್ನು ನೇಮಕ ಮಾಡಿಕೊಳ್ಳುವ ಹೇಳಿಕೆ ನೀಡಿ 12 ವರ್ಷದಿಂದ ಅಲ್ಪಸ್ವಲ್ಪ ಸಂಬಳದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸುಮಾರು 6000 ರೈತ ಅನುವುಗಾರರನ್ನು ಬೀದಿ ಪಾಲು ಮಾಡುತ್ತಿರುವ ಕೃಷಿ ಸಚಿವರ ವರ್ತನೆ ನಾವು ತೀವ್ರವಾಗಿ ಖಂಡಿಸುತ್ತೇವೆ. ಇತ್ತೀಚಿಗೆ ಧಾರವಾಡದಲ್ಲಿ ರೈತ ಅನುವುಗಾರರು ಸಭೆ ಸೇರಿ ಚಚರ್ೆ ನಡೆಸಿದಾಗ ಸಧ್ಯದ ಆತಂಕ ಪರಿಸ್ಥಿತಿ ಬಗ್ಗೆ ಗಾಬರಿಗೊಂಡ ನರಗುಂದ ತಾಲೂಕಿನ ರಮಜಾನ್ ನದಾಫ್ ಎಂಬ ರೈತ ಅನುವುಗಾರ ಸಭೆಯಲ್ಲಿಯೇ ಜಿಗುಪ್ಸೆಗೊಂಡು ಹೃದಯಾಘಾತಕ್ಕೆ ಒಳಗಾಗಿದ್ದ ನಂತರ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ರೈತ ಕುಟುಂಬದ ಯುವಕರಿಗೆ ಉದ್ಯೋಗ ನೀಡುವುದು ಕೃಷಿ ಅನುಷ್ಠಾನಕ್ಕೆ ರೈತನ್ನೇ ಬಳಸಿಕೊಳ್ಳುವುದು ಎನ್ನುವ ಹೇಳಿಕೆಯೊಂದಿಗೆ ಭೂಚೇತನ ಕಾರ್ಯಕ್ರಮ ಅಡಿಯಲ್ಲಿ ಇವರನ್ನು ನೇಮಕ ಮಾಡಿಕೊಂಡು 12 ವರ್ಷ ದುಡಿಸಿಕೊಂಡು ಈ ಮಧ್ಯೆ ಅನೇಕ ತರಬೇತಿಗಳು ಇವರಿಗೆ ನೀಡಿ ಕೃಷಿ ಚಟುವಟಿಕೆಗಳ ಬಗ್ಗೆ ಎಲ್ಲಾ ಜ್ಞಾನ, ತಿಳುವಳಿಕೆ ನೀಡಿ ಈಗ ಇವರ ಬದಲಿಗೆ ಖಾಯಂ ಹುದ್ದೆಗಳನ್ನು ಸೃಷ್ಟಿಸಿ ಪೂರ್ಣ ಸಂಬಳದೊಂದಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳುವದಾಗಿ ತಿಳಿಸಿರುವ ಕೃಷಿ ಸಚಿವರ ಹೇಳಿಕೆ ನಮ್ಮಲ್ಲಿ ಆತಂಕ ಮೂಡಿಸಿದೆ.
ಇದರ ಹಿಂದೆ ಕೃಷಿ ಇಲಾಖೆಯ ನಿದರ್ೇಶಕರು ಒಳಗೊಂಡಂತೆ ಕೆಲವು ಭ್ರಷ್ಟ ಅಧಿಕಾರಿಗಳ ಮನವಿಗೆ ಕೃಷಿ ಸಚಿವರು ಬಲಿಯಾಗುತ್ತಿದ್ದಾರೆ ಏನು ಎನ್ನುವ ಆತಂಕ ನಮ್ಮಲ್ಲಿ ಮೂಡುತ್ತಿದೆ ಎಂದು ಪ್ರತಿಭಟನಾ ಕಾರರನ್ನುದ್ದೇಶಿಸಿ ಮನವಿ ಪತ್ರ ನೀಡುವ ಮೊದಲು ಹೋರಾಟದ ನೇತೃತ್ವ ವಹಿಸಿದ ಚಂದ್ರಶೇಖರ ಹಿರೇಮಠ ತಿಳಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…