ಬೇಕಾಬಿಟ್ಟಿ ಮರಗಳ ಕಡಿತ: ಸಾರ್ವಜನಿಕರ ಆಕ್ರೋಶ

0
49

ಕಲಬುರಗಿ: ಕಲಬುರಗಿಯಂಥ ಬಿಸಿಲು ನಾಡಿನಲ್ಲಿ ಇತ್ತೀಚೆಗೆ ಪರಿಸರ ಪ್ರೇಮಿಗಳು ಗಿಡಮರಗಳನ್ನು ಬೆಳೆಸುವ ಕಾಯಕದಲ್ಲಿ ತನ್ಮಯವಾಗಿದ್ದರೆ, ಜೆಸ್ಕಾಂ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಗಿಡಮರಗಳನ್ನು ಕಡಿದು ಹಾಕುತ್ತಿರುವುದನ್ನು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಕುಸನೂರು ರಸ್ತೆಯ ತಿಲಕನಗರದ ಉದ್ಯಾನವನದಲ್ಲಿ ಪರಿಸರ ಪ್ರೇಮಿಗಳು ಸಸಿಗಳನ್ನು ನೆಟ್ಟು, ಬೆಸಿಗೆ ಬಿರು ಬಿಸಿಲಿನ ಸಂದರ್ಭದಲ್ಲಿ ಅವುಗಳು ಒಣಗದಂತೆ ಟ್ಯಾಂಕರ್ ಮೂಲಕ ನೀರು ತರಿಸಿ ಹಾಕುವ ಮೂಲಕ, ಮಕ್ಕಳಂತೆ ನೋಡಿಕೊಂಡಿದ್ದರು.

Contact Your\'s Advertisement; 9902492681

ದುರಂತ ಎಂದರೆ ಸೋಮವಾರವಾದ ಇಂದು ಯಾವ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದೇ, ವಿದ್ಯುತ್ ತಂತಿಗಳಿಗೆ ತಾಕದ ಹಾಗೂ ತುಂಬಾ ಕೆಳಮಟ್ಟದಲ್ಲಿನ ಹಚ್ಚ ಹಸಿರಿನ ಹಲವಾರು ಮರಗಳನ್ನು ಕಡಿದು ಬಡಾವಣೆಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಿಲಕನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಕಾಂಗೈ ಧುರೀಣ ಶಾಮ ನಾಟೀಕರ, ಸಮಾಜ ಕಾರ್ಯಕರ್ತ ಎಸ್.ಎಸ್.ಹಿರೇಮಠ ಅವರ ನೇತೃತ್ವದಲ್ಲಿ ಪ್ರತಿಭಟಿಸಿ, ಜೆಸ್ಕಾಂ ಸಿಬ್ಬಂದಿಯ ಕೊಡಲಿಗೆ ಬಲಿಯಾಗುತ್ತಿದ್ದ ಗಿಡಮರಗಳನ್ನು ಉಳಿಸಿದ್ದಾರೆ.

ವಿದ್ಯುತ್ ತಂತಿಗಳಿಗೆ ಅಡ್ಡ ಬರುವ ಗಿಡಮರಗಳ ಟೊಂಗೆಗಳನ್ನು ಮಾತ್ರ ಎಲ್ಲ ಸುರಕ್ಷಿತ ಕ್ರಮಗಳೊಂದಿಗೆ ಕತ್ತರಿಸಲು ಸಂಬಂಧಿತ ಜೆಸ್ಕಾಂ ಸಿಬ್ಬಂದಿಗೆ ತಾಕೀತು ಮಾಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ರೇಂಜ್ ಫಾರೆಸ್ಟ್ ಆಫೀಸರ್ ಅವರಿಗೆ ಆಗ್ರಹಿಸಿದ್ದಾರೆ.

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು, ಪಾಲಿಕೆ ಆಯುಕ್ತರ ಪರವಾಗಿ ಅಭಿಯಂತರ ಬಸವರಾಜ್ ಹಾಗೂ ಆರ್.ಎಫ್.ಓ. ಸುನೀಲ್ ಚವ್ಹಾಣ ಅವರು ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನು ಬಡಾವಣೆಯ ನಿವಾಸಿಗಳಿಗೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here